Asianet Suvarna News Asianet Suvarna News

Kiren Rijiju: ವೋಟರ್‌ ಐಡಿಗೆ ಆಧಾರ್‌ ಲಿಂಕ್‌ ಮಾಡಲು ಕೇಂದ್ರ ಚಿಂತನೆ

ನಕಲಿ ಮತದಾನ ತಪ್ಪಿಸಲು ಮತದಾರರ ಗುರುತಿನ ಚೀಟಿಗೆ ಆಧಾರ್‌ ಜೋಡಣೆ ಮಾಡುವುದಕ್ಕೆ ಹಾಗೂ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಆನ್‌ಲೈನ್‌ ಮತದಾನ ಸೌಲಭ್ಯ ಕಲ್ಪಿಸುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕಾನೂನು ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ.

Govt Considering To Link Aadhaar With Electoral Rolls Online Voting For Indians In Abroad Rijiju gvd
Author
Bangalore, First Published Mar 26, 2022, 3:00 AM IST | Last Updated Mar 26, 2022, 3:00 AM IST

ನವದೆಹಲಿ (ಮಾ.26): ನಕಲಿ ಮತದಾನ ತಪ್ಪಿಸಲು ಮತದಾರರ ಗುರುತಿನ ಚೀಟಿಗೆ ಆಧಾರ್‌ ಜೋಡಣೆ (Link Aadhaar) ಮಾಡುವುದಕ್ಕೆ ಹಾಗೂ ವಿದೇಶದಲ್ಲಿ (Abroad) ನೆಲೆಸಿರುವ ಭಾರತೀಯರಿಗೆ (Indians) ಆನ್‌ಲೈನ್‌ ಮತದಾನ (Online Voting) ಸೌಲಭ್ಯ ಕಲ್ಪಿಸುವುದಕ್ಕೆ ಕೇಂದ್ರ ಸರ್ಕಾರ (Central Govt) ಚಿಂತನೆ ನಡೆಸಿದೆ ಎಂದು ಕಾನೂನು ಸಚಿವ ಕಿರಣ್‌ ರಿಜಿಜು (Kiren Rijiju) ತಿಳಿಸಿದ್ದಾರೆ. ಲೋಕಸಭೆಯಲ್ಲಿ ಶುಕ್ರವಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಚುನಾವಣಾ ಅಕ್ರಮ ಅತ್ಯಂತ ಗಂಭೀರ ವಿಚಾರ. 

ಮತದಾನದಲ್ಲಿ ಅಕ್ರಮಗಳನ್ನು ತಡೆಯುವುದಕ್ಕೆ ಕೇಂದ್ರ ಸರ್ಕಾರ ಕಾನೂನು ಸಚಿವರ ಮಟ್ಟದಲ್ಲಿ ಚಿಂತನೆ ನಡೆಸುತ್ತಿದೆ. ಮತದಾರರ ಗುರುತಿನ ಚೀಟಿಗೆ ಆಧಾರ್‌ ಲಿಂಕ್‌ ಮಾಡುವುದು ಒಂದು ಆಯ್ಕೆ. ಸದ್ಯ ವೋಟರ್‌ ಐಡಿಗೆ ಆಧಾರ್‌ ಜೋಡಿಸುವುದು ಸ್ವಯಂಪ್ರೇರಿತವಾಗಿದೆ. ನಮ್ಮ ಗುರಿ ಇರುವುದು ‘ಒಂದು ದೇಶ, ಒಂದು ಮತದಾರರ ಗುರುತಿನ ಚೀಟಿ’ ಎಂಬುದನ್ನು ಸಾಧ್ಯವಾಗಿಸುವ ಬಗ್ಗೆ. ಹೀಗೆ ಮಾಡುವುದರಿಂದ ಮತದಾರರ ಪಟ್ಟಿಯಲ್ಲಿ ಎರಡು-ಮೂರು ಕಡೆ ಹೆಸರು ಹೊಂದಿ ನಕಲಿ ಮತದಾನ ಮಾಡುವುದನ್ನು ತಪ್ಪಿಸಬಹುದು’ ಎಂದು ಹೇಳಿದರು.

March Deadline: ತಿಂಗಳ ಅಂತ್ಯದೊಳಗೆ ಈ 6 ಕೆಲ್ಸ ಮಾಡದಿದ್ರೆ ಜೇಬಿಗೆ ಕತ್ತರಿ!

ಇದೇ ವೇಳೆ, ಪ್ರವಾಸಿ ಭಾರತೀಯರಿಗೆ, ಅಂದರೆ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಹೇಗೆ ಮತದಾನದ ಹಕ್ಕು ನೀಡಬೇಕೆಂಬ ಬಗ್ಗೆ ಗಮನ ಹರಿಸಲು ಕೇಂದ್ರ ಸರ್ಕಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಅವರಿಗೆ ಆನ್‌ಲೈನ್‌ನಲ್ಲಿ ಮತದಾನ ವ್ಯವಸ್ಥೆ ಕಲ್ಪಿಸಬೇಕೇ ಎಂದು ಕೇಳಲಾಗಿದೆ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಪಾರದರ್ಶಕತೆ ಮತ್ತು ಸುರಕ್ಷತೆಗೆ ಹೆಚ್ಚು ಒತ್ತು ನೀಡುತ್ತೇವೆ. ಇನ್ನು, ಮತದಾನ ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ರಿಜಿಜು ತಿಳಿಸಿದರು.

ಮಗು ಹುಟ್ಟುತ್ತಲೇ ಆಸ್ಪತ್ರೆಯಲ್ಲಿ ಸಿಗಲಿದೆ ನಂಬರ್: ಆಧಾರ್ ಈಗ ಕಡ್ಡಾಯ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ನಂಬರ್ ಹೊಂದಿದ್ದರೆ ಸರ್ಕಾರಿ ಹಾಗೂ ಖಾಸಗಿ ಸೇವೆ ಪಡೆಯುವುದು ಸುಲಭ. ಸರ್ಕಾರ (Government)ದ ಯೋಜನೆಗಳ ಲಾಭ ಪಡೆಯಬೇಕೆಂದರೆ ಆಧಾರ್ ಸಂಖ್ಯೆ ಅನಿವಾರ್ಯವಾಗಿದೆ. ಅನೇಕ ಯೋಜನೆಗಳಿಗೆ ಆಧಾರ್ ಲಿಂಕ್ ಆಗದೆ ಹೋದಲ್ಲಿ ಸೇವೆ ಸಿಗೋದಿಲ್ಲ.ಶಾಲೆಗಳಲ್ಲಿಯೂ ಈಗ ಆಧಾರ್ ದಾಖಲೆ ಕೇಳುತ್ತಿದ್ದಾರೆ. ಆಧಾರ್ ಕಾರ್ಡ್ ನೀಡುವುದು ಕಡ್ಡಾಯವಲ್ಲದೆ ಹೋದರೂ ಬಹುತೇಕ ಶಾಲೆಗಳು ಆಧಾರ್ ಕೇಳ್ತಿವೆ. ಶಾಲೆಗಳಿಗೆ ಮಾತ್ರವಲ್ಲದೆ ಮಕ್ಕಳ ಪಾಸ್ಪೋರ್ಟ್ ಸೇರಿದಂತೆ ಅನೇಕ ಸೇವೆಗಳಿಗೆ ಆಧಾರ್ ಅಗತ್ಯ. ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಐದು ವರ್ಷದೊಳಗಿನ ಮಕ್ಕಳಿಗೆಆಧಾರ್ ಕಾರ್ಡ್ ಮಾಡಿಸ್ತಿದ್ದಾರೆ. 

ಸೆಕ್ಸ್ ವರ್ಕರ್ಸ್ ಗೆ ಖುಷಿ ಸುದ್ದಿ..! ವಿಳಾಸ ಪುರಾವೆಯಿಲ್ಲದಿದ್ದರೂ ಸಿಗುತ್ತೆ Aadhaar Card

ಜನನದೊಂದಿಗೆ ಆಧಾರ್ ಸಂಖ್ಯೆ: ಮಗು ಜನಿಸಿದ ತಕ್ಷಣ, ಮಗುವಿಗಾಗಿ ಮಾಡುವ ಮೊದಲ ದಾಖಲೆ ಎಂದರೆ ಅದು ಜನನ ಪ್ರಮಾಣಪತ್ರವಾಗಿದೆ. ಆದರೆ ಜನನ ಪ್ರಮಾಣಪತ್ರದ ಮೊದಲು, ಮಗುವಿಗೆ ಇನ್ಮುಂದೆ ಆಧಾರ್ ಕಾರ್ಡ್ ಸಿಗಲಿದೆ. ಮಗು ತನ್ನ ಜನನದ ಜೊತೆಗೆ ಆಧಾರ್ ಸಂಖ್ಯೆಯನ್ನು ಪಡೆಯಲಿದೆ ಎಂದ್ರೆ ನಂಬಲೇಬೇಕು. ಯುಐಡಿಎಐ ಇದಕ್ಕೆ ಬಹುತೇಕ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಮಕ್ಕಳ ಜನನದೊಂದಿಗೆ ಆಧಾರ್ ಕಾರ್ಡ್ ನೋಂದಣಿ ಆಸ್ಪತ್ರೆಯಲ್ಲಿ ನಡೆಯಲಿದೆ. ಆಸ್ಪತ್ರೆಗಳಲ್ಲಿ ದಾಖಲಾತಿ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಯುಐಡಿಎಐ ಹೇಳಿದೆ. ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಜನನ ಪ್ರಮಾಣಪತ್ರದ ಮೊದಲು ಮಗುವಿಗೆ ಆಧಾರ್ ಕಾರ್ಡ್ ಸಿಗಲಿದೆ. ಜನನ ಪ್ರಮಾಣಪತ್ರವನ್ನು ಪಡೆಯಲು ಸುಮಾರು 1 ತಿಂಗಳು ತೆಗೆದುಕೊಳ್ಳುತ್ತದೆ.  ಈ ಯೋಜನೆಯಡಿ, ನವಜಾತ ಮಕ್ಕಳಿಗೆ ಆಧಾರ್ ಸಂಖ್ಯೆ ನೀಡಲು ಜನನ ನೋಂದಣಾಧಿಕಾರಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. 

Latest Videos
Follow Us:
Download App:
  • android
  • ios