Asianet Suvarna News Asianet Suvarna News

ತೆರಿಗೆ ಕಡಿತ ಮಾಡಿ ಪೆಟ್ರೋಲ್‌, ಡೀಸೆಲ್‌ ದರ ಇಳಿ​ಕೆ?

ದೇಶಾ​ದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳ ಭಾರೀ ಏರಿ​ಕೆ| ತೆರಿಗೆ ಕಡಿತ ಮಾಡಿ ಪೆಟ್ರೋಲ್‌, ಡೀಸೆಲ್‌ ದರ ಇಳಿ​ಕೆ ಸಂಭ​ವ?

Govt considering cutting taxes on petrol diesel pod
Author
Bangalore, First Published Mar 2, 2021, 11:30 AM IST

ನವ​ದೆ​ಹ​ಲಿ(ಮಾ.02): ದೇಶಾ​ದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳ ಭಾರೀ ಏರಿ​ಕೆ​ಯಿಂದ ಜನ ಕಂಗೆ​ಟ್ಟಿ​ರುವ ಬೆನ್ನಲ್ಲೇ, ಶುಭ ಸುದ್ದಿ​ಯೊಂದನ್ನು ನೀಡಲು ಕೇಂದ್ರ ಸರ್ಕಾರ ಕಾರ್ಯ​ಪ್ರ​ವೃ​ತ್ತ​ವಾ​ಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ದರ​ಗಳ ಮೇಲಿನ ತೆರಿ​ಗೆ​ಗ​ಳನ್ನು ಕಡಿ​ತ​ಗೊ​ಳಿಸಿ, ಆ ಮೂಲಕ ಈ ಎರಡೂ ಇಂಧ​ನ​ಗಳ ಬೆಲೆ​ಗಳ ಇಳಿ​ಕೆಗೆ ಕೇಂದ್ರ ಸರ್ಕಾರ ನಿರ್ಧ​ರಿ​ಸಿದೆ. ಇದ​ಕ್ಕಾಗಿ ಕೇಂದ್ರ ಸರ್ಕಾ​ರವು ಈಗಾ​ಗಲೇ ರಾಜ್ಯ ಸರ್ಕಾ​ರ​ಗಳು ಮತ್ತು ತೈಲ ಕಂಪ​ನಿ​ಗಳು ಮತ್ತು ಇಂಧನ ಇಲಾ​ಖೆ​ಯೊಂದಿಗೆ ಸಮಾ​ಲೋ​ಚ​ನೆ​ಯಲ್ಲಿ ತೊಡ​ಗಿದೆ ಎಂದು ಮೂಲ​ಗಳು ತಿಳಿ​ಸಿವೆ.

ಪೆಟ್ರೋಲ್‌ ಮತ್ತು ಡೀಸೆಲ್‌ ದರ​ಗ​ಳನ್ನು ಸ್ಥಿರ​ವಾ​ಗಿ​ಡಲು ಅಗತ್ಯ ಕ್ರಮ ಕೈಗೊ​ಳ್ಳ​ಲಾ​ಗು​ತ್ತಿದೆ. ಒಂದು ಬಾರಿ ತೈಲ​ಗಳ ಮೇಲಿನ ತೆರಿಗೆ ಇಳಿ​ಸಿದ ಬಳಿಕ ಮತ್ತೆ ತೆರಿಗೆ ಹೆಚ್ಚಿ​ಸಲು ಸರ್ಕಾರ ಇಚ್ಛಿ​ಸು​ತ್ತಿಲ್ಲ. ಹೀಗಾಗಿ ಈ ಸಂಬಂಧ ಕೇಂದ್ರ ಸರ್ಕಾರ ಕೂಲಂಕು​ಷ​ವಾಗಿ ಪರಿ​ಶೀ​ಲನೆ ನಡೆ​ಸು​ತ್ತಿದೆ. ಮಾಚ್‌ರ್‍ ಮಧ್ಯಂತರ ಅವ​ಧಿ​ಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳ​ಬ​ಹುದು ಎಂದು ಮೂಲ​ಗಳು ತಿಳಿ​ಸಿವೆ. ತನ್ಮೂ​ಲಕ ಮಾಚ್‌ರ್‍ ಮಧ್ಯಂತರ ಅವ​ಧಿ​ಯಲ್ಲಿ ಈ ಎರಡೂ ತೈಲ​ಗಳ ಬೆಲೆ ಇಳಿ​ಕೆ​ಯಾ​ಗುವ ಸುಳಿವು ಲಭ್ಯ​ವಾ​ಗಿದೆ.

ಕೊರೋನಾ ಅವ​ಧಿ​ಯಲ್ಲಿ ಅಂತಾ​ರಾ​ಷ್ಟ್ರೀಯ ಮಟ್ಟ​ದಲ್ಲಿ ತೈಲ ಬೆಲೆ ಭಾರೀ ಇಳಿ​ಕೆ​ಯಾ​ಗಿತ್ತು. ಆದರೆ ಲಾಕ್‌​ಡೌನ್‌ ಕಾರ​ಣಕ್ಕೆ ದೇಶ​ದಲ್ಲಿ ಯಾವುದೇ ಆರ್ಥಿಕ ಚಟು​ವ​ಟಿ​ಕೆ​ಗಳು ಇರ​ಲಿಲ್ಲ. ಹೀಗಾಗಿ ತೈಲ ಬೆಲೆ ಇಳಿಕೆ ಲಾಭ​ವನ್ನು ಕೇಂದ್ರ ಸರ್ಕಾರ ಗ್ರಾಹ​ಕ​ರಿಗೆ ವರ್ಗಾ​ಯಿ​ಸದೇ ತೆರಿ​ಗೆ​ಯನ್ನು ಹೆಚ್ಚಿ​ಸಿತ್ತು.

Follow Us:
Download App:
  • android
  • ios