ನವದೆಹಲಿ[ಡಿ.31]: ದೇಶಾದ್ಯಂತ ಈರುಳ್ಳಿ ಬೆಲೆ ಕೆಜಿಗೆ 200 ರು. ತಲುಪಿ ಅಡುಗೆ ಮನೆಯಿಂದ ದೂರವಾಗಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಮುಂದಿನ ವರ್ಷ ಇಂಥ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಲು ನಿರ್ಧರಿಸಿದೆ.

ಇದಕ್ಕಾಗಿ 2020ರಲ್ಲಿ 1 ಲಕ್ಷ ಟನ್‌ ಈರುಳ್ಳಿಯನ್ನು ಗೋದಾಮಿನಲ್ಲಿ ಸಂಗ್ರಹಿಸಿ ಇಡಲು ಸರ್ಕಾರ ನಿರ್ಧರಿಸಿದೆ. ಪ್ರಸಕ್ತ ವರ್ಷ 56 ಸಾವಿರ ಟನ್‌ ಈರುಳ್ಳಿ ದಾಸ್ತಾನು ಇಡಲಾಗಿತ್ತು. ಆದರೆ ಅದು ಪರಿಸ್ಥಿತಿ ನಿರ್ವಹಣೆಗೆ ಸಾಧ್ಯವಾಗಲಿಲ್ಲ. ವಿದೇಶದಿಂದ ಆಮದು ಮಾಡಿಕೊಂಡರೂ ಬೆಲೆ ನಿಯಂತ್ರಣಕ್ಕೆ ಬರಲಿಲ್ಲ.

ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಸಚಿವರ ಸಭೆಯಲ್ಲಿ ಮುಂದಿನ ವರ್ಷದಿಂದ 1 ಲಕ್ಷ ಈರುಳ್ಳಿ ದಾಸ್ತಾನು ಇಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.