Asianet Suvarna News Asianet Suvarna News

ಶೀಘ್ರದಲ್ಲೇ ಬಿಡಿ ಸಿಗರೇಟ್‌ ಸೇಲ್‌ ನಿಷೇಧ..! ಕೇಂದ್ರ ಸರ್ಕಾರಕ್ಕೆ ಸಂಸದೀಯ ಸಮಿತಿ ಸಲಹೆ

ಸ್ಥಾಯಿ ಸಮಿತಿಯ ಶಿಫಾರಸ್ಸಿನ ಮೇರೆಗೆ ಸರ್ಕಾರವು ಕಾರ್ಯನಿರ್ವಹಿಸಿದರೆ, ಸಂಸತ್ತು ಶೀಘ್ರದಲ್ಲೇ ಸಿಂಗಲ್ ಸಿಗರೇಟ್ ಮಾರಾಟ ಮತ್ತು ತಯಾರಿಕೆಯನ್ನು ನಿಷೇಧಿಸಬಹುದು.

government may stop sale of loose cigarettes here is why ash
Author
First Published Dec 12, 2022, 9:53 AM IST

ನವದೆಹಲಿ: ಧೂಮಪಾನಿಗಳಿಗೆ (Smokers) ಹೆಚ್ಚು ಕೆಟ್ಟ ಸುದ್ದಿ ಇದೆ. ಸರ್ಕಾರ (Government) ಶೀಘ್ರದಲ್ಲೇ ಬಿಡಿ ಸಿಗರೇಟ್ (Single or Loose Cigarette) ಮಾರಾಟವನ್ನು (Sale) ನಿಷೇಧಿಸಬಹುದು. ವಿವಿಧ ವರದಿಗಳ ಪ್ರಕಾರ, ತಂಬಾಕು ಉತ್ಪನ್ನಗಳ (Tobacco Products) ಬಳಕೆಯನ್ನು ತಡೆಯಲು ಸಿಂಗಲ್ ಸಿಗರೇಟ್ (Cigarette) ಮಾರಾಟವನ್ನು ನಿಷೇಧಿಸಲು ಸಂಸತ್ತಿನ ಸ್ಥಾಯಿ ಸಮಿತಿ (Standing Committee of Parliament) ಶಿಫಾರಸು ಮಾಡಿದೆ. ಲೂಸ್ ಸಿಗರೇಟ್ ಮಾರಾಟವು ತಂಬಾಕು ನಿಯಂತ್ರಣ ಅಭಿಯಾನದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಸತ್ತಿನ ಸ್ಥಾಯಿ ಸಮಿತಿ ವಾದಿಸಿದೆ. ಹಾಗೂ, ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಂದ ಧೂಮಪಾನ ವಲಯವನ್ನು ತೆಗೆದುಹಾಕಲು ಸಮಿತಿಯು ಶಿಫಾರಸು ಮಾಡಿದೆ.
ದೇಶದಲ್ಲಿ ಬಿಡಿ ಸಿಗರೇಟ್‌ಗಳನ್ನು ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಲು ಸಂಸತ್ತಿನ ಸ್ಥಾಯಿ ಸಮಿತಿಯು ಪ್ರಸ್ತಾಪ ಸಲ್ಲಿಸಿದೆ.

ಬಿಡಿ ಸಿಗರೇಟ್‌ ಹಾಗೂ ಬಿಡಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವುದರಿಂದ ಕಡಿಮೆ ಆದಾಯ ಹೊಂದಿದ ಜನರಿಗೆ ಹಾಗೂ ಯುವಕರಿಗೆ ಇವುಗಳನ್ನು ಸುಲಭವಾಗಿ ಖರೀದಿಸಲು ಸಾಧ್ಯವಾಗುತ್ತದೆ. ದೇಶದಲ್ಲಿ ಬಹುತೇಕರು ಪ್ಯಾಕ್‌ ಬದಲಾಗಿ ಬಿಡಿ ಸಿಗರೇಟ್‌ ಖರೀದಿಗೆ ಮುಂದಾಗುತ್ತಿದ್ದ ಕಾರಣ, ಯುವಕರು ಧೂಮಪಾನದ ಚಟಕ್ಕೆ ಸಿಲುಕಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಸಂಸತ್ತಿನ ಬಿಡಿಯಾಗಿ ಸಿಗರೇಟ್‌ ನಿಷೇಧಕ್ಕಾಗಿ ಪ್ರಸ್ತಾಪಿಸಲಾಗಿದೆ.

ಇದನ್ನು ಓದಿ: ಬೆಂಗಳೂರು: ಬೆಂಗಳೂರಿನಲ್ಲಿ ಪುಡಿ ರೌಡಿಗಳ ಅಬ್ಬರ: ಬೇಕರಿಗೆ ನುಗ್ಗಿ ಗಲಾಟೆ

ಇದಲ್ಲದೇ ವಿಮಾನ ನಿಲ್ದಾಣಗಳಲ್ಲಿ ಸ್ಮೋಕ್‌ ಝೋನ್‌ (ಧೂಮಪಾನ ವಲಯ)ಗಳನ್ನು ಮುಚ್ಚಲು ಹಾಗೂ ತಂಬಾಕು ಪದಾರ್ಥಗಳ ಮೇಲೆ ವಿಧಿಸುವ ಅಬಕಾರಿ ಸುಂಕವನ್ನು ಏರಿಕೆ ಮಾಡಲು ಕೂಡಾ ಪ್ರಸ್ತಾಪಿಸಲಾಗಿದೆ. ಸುಂಕ ಹೆಚ್ಚಳದಿಂದಾಗಿ ಒಂದೆಡೆ ಸರ್ಕಾರಕ್ಕೆ ಹೆಚ್ಚಿನ ಆದಾಯ ಹರಿದು ಬರಲಿದೆ. ಇನ್ನೊಂದೆಡೆ ತಂಬಾಕು ಪದಾರ್ಥಗಳು ಯುವಕರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗದೇ ದುಬಾರಿ ಎನಿಸಲಿದೆ. ಇದರಿಂದಾಗಿ ಯುವಕರು ತಂಬಾಕು ಪದಾರ್ಥಗಳ ಸೇವನೆ ಚಟಕ್ಕೆ ಬೀಳುವುದು ಕಡಿಮೆಯಾಗಲಿದೆ ಎಂದು ಸಮಿತಿ ಹೇಳಿದೆ.

ಸ್ಥಾಯಿ ಸಮಿತಿಯ ಶಿಫಾರಸ್ಸಿನ ಮೇರೆಗೆ ಸರ್ಕಾರವು ಕಾರ್ಯನಿರ್ವಹಿಸಿದರೆ, ಸಂಸತ್ತು ಶೀಘ್ರದಲ್ಲೇ ಸಿಂಗಲ್ ಸಿಗರೇಟ್ ಮಾರಾಟ ಮತ್ತು ತಯಾರಿಕೆಯನ್ನು ನಿಷೇಧಿಸಬಹುದು. 3 ವರ್ಷಗಳ ಹಿಂದೆಯೇ ಕೇಂದ್ರ ಸರ್ಕಾರ ಆರೋಗ್ಯ ಸಚಿವಾಲಯದ ಶಿಫಾರಸಿನ ಮೇರೆಗೆ ಇ-ಸಿಗರೇಟ್ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿತ್ತು ಎಂಬುದನ್ನು ಸ್ಮರಿಸಬಹುದಾಗಿದೆ. ಜಿಎಸ್‌ಟಿ ಜಾರಿಯಾದ ನಂತರವೂ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಎಂದು ಸ್ಥಾಯಿ ಸಮಿತಿ ಗಮನಿಸಿದೆ. ಹಾಗೂ, ಆಲ್ಕೋಹಾಲ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಮಿತಿಯು ಎತ್ತಿ ತೋರಿಸಿದೆ.

ಇದನ್ನೂ ಓದಿ: ಸಿಗರೇಟ್ Vs ಗಾಂಜಾ: ಯಾವುದು ತುಂಬಾ ಅಪಾಯಕಾರಿ? ಸಂಶೋಧನೆ ಹೇಳೋದೇನು?

Follow Us:
Download App:
  • android
  • ios