ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ| ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತ ಸಮುದಾಯ| ಈರುಳ್ಳಿ ರಫ್ತು ಪ್ರೋತ್ಸಾಹಧನ ದ್ವಿಗುಣಗೊಳಿಸಿದ ಕೇಂದ್ರ| ಶೇ.5 ರ ಬದಲಿಗೆ ಶೇ.10ಕ್ಕೆ ಪ್ರೋತ್ಸಾಹಧನ ಏರಿಕೆ
ನವದೆಹಲಿ(ಡಿ.28): ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಈರುಳ್ಳಿ ರಫ್ತು ಪ್ರೋತ್ಸಾಹಧನವನ್ನು ದ್ವಿಗುಣಗೊಳಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪ್ರಸ್ತುತ, ಈರುಳ್ಳಿ ವ್ಯಾಪಾರಿಗಳು ಭಾರತದ ವ್ಯಾಪಾರಿಗಳ ರಫ್ತು ಯೋಜನೆಯಡಿಯಲ್ಲಿ ತಾಜಾ ಬೆಳೆಗೆ ಶೇ. 5 ರಫ್ತು ಪ್ರೋತ್ಸಾಹಧನ ಪಡೆಯುತ್ತಿದ್ದಾರೆ.
ಇದೀಗ ರೈತರ ಹಿತಾಸಕ್ತಿಯಿಂದ ಈ ಪ್ರೋತ್ಸಾಹಧನವನ್ನು ಶೇ.10ಕ್ಕೆ ಏರಿಸಲಾಗಿದೆ. ಇದು ಸ್ಥಳೀಯ ಮಾರುಕಟ್ಟೆಗಳಲ್ಲಿ ಈರುಳ್ಳಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಲು ಸಹಾಯ ಮಾಡಲಿದೆ.
