Asianet Suvarna News Asianet Suvarna News

GPay, PhonePe, Paytm ಬಳಸಿ ಯುಪಿಐ ಪಾವತಿ ಮಾಡುತ್ತೀರಾ? ಹಾಗಾದ್ರೆ ಈ 5 ಸುರಕ್ಷಿತ ಟಿಪ್ಸ್ ಅನುಸರಿಸಿ

ಇಂದು ಯುಪಿಐ ಪಾವತಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ನಮ್ಮಲ್ಲಿ ಬಹುತೇಕರು ನಿತ್ಯದ ವ್ಯವಹಾರಗಳಿಗೆ ಯುಪಿಐ ಪಾವತಿಯನ್ನೇ ನೆಚ್ಚಿಕೊಂಡಿದ್ದೇವೆ.ಆದರೆ,ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಹಾವಳಿ ಕೂಡ ಹೆಚ್ಚಿದೆ.ಹೀಗಿರುವಾಗ ಜಿಪೇ, ಪೇಟಿಎಂ, ಫೋನ್ ಪೇ ಮುಂತಾದ ಯುಪಿಐ ಬಳಕೆದಾರರು ತಮ್ಮ ಖಾತೆಯಲ್ಲಿನ ಹಣದ ಸುರಕ್ಷತೆಗೆ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಇಲ್ಲಿದೆ ಮಾಹಿತಿ.

 

If you make UPI payments through GPay PhonePe Paytm keep these 5 safety tips in mind next time anu
Author
First Published May 19, 2023, 4:57 PM IST

Business Desk: ಆನ್ ಲೈನ್ ವಂಚಕರ ಕಾಟ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ.ಅಲ್ಲದೆ,ಈ ವಂಚಕರು ಆನ್ ಲೈನ್ ಪಾವತಿ ವಿಧಾನಗಳ ಮೂಲಕ ಜನರನ್ನು ವಂಚಿಸಿ ಹಣ ಲೂಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಯುಪಿಐ ಪಾವತಿಗಳನ್ನು ಮಾಡುವಾಗ ಸಾಕಷ್ಟು ಎಚ್ಚರ ವಹಿಸೋದು ಅಗತ್ಯ. ಯುಪಿಐ ಪಾವತಿಗಳು ಭಾರತದಲ್ಲಿ ಆನ್ಲೈನ್ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ಹುಟ್ಟುಹಾಕಿವೆ. ಕೈಯಲ್ಲೊಂದು ಮೊಬೈಲ್ ಇದ್ದರೆ ಸಾಕು, ಹಣ ಪಾವತಿ ಹಾಗೂ ಸ್ವೀಕೃತಿ ತುಂಬಾ ಸುಲಭ. ಹಾಗೆಯೇ ಇದು ಸರಳ ಹಾಗೂ ಕಿರಿಕಿರಿಯಿಲ್ಲದ ವಿಧಾನ ಕೂಡ ಹೌದು. ಇದೇ ಕಾರಣಕ್ಕೆ ದೇಶದಲ್ಲಿ ದಿನದಿಂದ ದಿನಕ್ಕೆ ಆನ್ ಲೈನ್ ಪಾವತಿ ನೆಚ್ಚಿಕೊಳ್ಳುತ್ತಿರೋರ ಸಂಖ್ಯೆ ಹೆಚ್ಚಿದೆ. ಇತರ ಯಾವುದೇ ಆನ್ ಲೈನ್ ಪಾವತಿ ವಿಧಾನಗಳಿಗಿಂತ ಯುಪಿಐ ಪಾವತಿಗಳು ಹೆಚ್ಚು ಫಾಸ್ಟ್. ಅಲ್ಲದೆ, ಅನೇಕ ಬ್ಯಾಂಕ್ ಗಳು ಹಾಗೂ ಪ್ಲಾಟ್ ಫಾರ್ಮ್ ಗಳ ಮೂಲಕ ಕೂಡ ಅವು ಕಾರ್ಯನಿರ್ವಹಿಸುತ್ತವೆ. ಆದರೆ, ಈ ಆನ್ ಲೈನ್ ಪಾವತಿ ವಿಧಾನಗಳ ಬಳಕೆ ಹೆಚ್ಚಿದಂತೆ ಆನ್ ಲೈನ್ ವಂಚನೆ ಪ್ರಕರಣಗಳು ಕೂಡ ಏರಿಕೆ ಕಂಡಿವೆ. ಸೈಬರ್ ವಂಚಕರು ಹೊಸ ಹೊಸ ವಿಧಾನಗಳ ಮೂಲಕ ಯುಪಿಐ ಬಳಕೆದಾರರ ಖಾತೆಗೆ ಕನ್ನ ಹಾಕಲು ಪ್ರಯತ್ನಿಸುತ್ತಲೇ ಇರುತ್ತಾರೆ. ಹೀಗಿರುವಾಗ ಯುಪಿಐ ಪಾವತಿಗಳನ್ನು ಸುರಕ್ಷಿತವಾಗಿರಿಸಲು ಏನ್ ಮಾಡ್ಬೇಕು?

1.ನಂಬಿಕಾರ್ಹ ಯುಪಿಐ ಅಪ್ಲಿಕೇಷನ್ ಬಳಸಿ
ಅನೇಕ ಯುಪಿಐ ಅಪ್ಲಿಕೇಷನ್ ಗಳು ಲಭ್ಯವಿವೆ. ಆದರೆ, ಇವುಗಳಲ್ಲಿ ಅತ್ಯಂತ ಸುರಕ್ಷಿತ ಹಾಗೂ ನಂಬಿಕಾರ್ಹ ಅಪ್ಲಿಕೇಷನ್ ಆಯ್ಕೆ ಮಾಡೋದು ಮುಖ್ಯ. ಗೂಗಲ್ ಪೇ, ಫೋನ್ ಪೇ ಹಾಗೂ ಪೇಟಿಎಂ ಕೆಲವು ಪ್ರಮುಖ ಅಪ್ಲಿಕೇಷನ್ ಗಳಾಗಿವೆ. ಈ ಆಪ್ ಗಳು ಪ್ರಮುಖ ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳ ಬೆಂಬಲ ಹೊಂದಿವೆ. ಹೀಗಾಗಿ ಈ ಆಪ್ ಗಳ ಬಳಕೆಯಿಂದ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆಯನ್ನು ನೀವು ಇರಿಸಬಹುದು.

ಆನ್ ಲೈನ್ ವಂಚನೆಗಿದೆ ಬಹುಮುಖ; ವಂಚಕರು ನಿಮ್ಮನ್ನು ಹೇಗೆಲ್ಲ ವಂಚಿಸ್ಬಹುದು ಗೊತ್ತಾ?

2.ಯುಪಿಐ ಪಿನ್ ಸುರಕ್ಷಿತವಾಗಿಟ್ಟುಕೊಳ್ಳಿ
ನಿಮ್ಮ ಯುಪಿಐ ಪಿನ್ ನಿಮ್ಮ ಹಣಕ್ಕೆ ಕೀಲಿಕೈ. ಹೀಗಾಗಿ ಇದನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಅಗತ್ಯ. ಯಾರೊಂದಿಗೂ ನಿಮ್ಮ ಪಿನ್ ಶೇರ್ ಮಾಡಬೇಡಿ. ಹಾಗೆಯೇ ಈ ಪಿನ್ ಅನ್ನು ನೀವು ನಂಬಿಕೆ ಹೊಂದಿರದ ಯಾವುದೇ ವೆಬ್ ಸೈಟ್ ಅಥವಾ ಅಪ್ಲಿಕೇಷನ್ ನಲ್ಲಿ ನಮೂದಿಸಬೇಡಿ. ಹಾಗೆಯೇ ನಿಮ್ಮ ಪಿನ್ ಅನ್ನು ನಿಯಮಿತವಾಗಿ ಬದಲಾಯಿಸಬೇಕು.

3.ಪಾವತಿ ಮಾಡೋ ಮುನ್ನ ಕಳುಹಿಸಬೇಕಾಗಿರುವ ವ್ಯಕ್ತಿ ಮಾಹಿತಿ ಪರಿಶೀಲಿಸಿ
ಯಾವುದೇ ಪಾವತಿ ಮಾಡುವ ಮುನ್ನ ನೀವು ಹಣ ಕಳುಹಿಸಬೇಕಾಗಿರುವ ವ್ಯಕ್ತಿಯ ಮಾಹಿತಿಗಳನ್ನು ಜಾಗರೂಕತೆಯಿಂದ ಪರಿಶೀಲಿಸಿ. ಕಳುಹಿಸಬೇಕಾಗಿರುವ ವ್ಯಕ್ತಿಯ ಹೆಸರು, ಯುಪಿಐ ಐಡಿ ಹಾಗೂ ಮೊಬೈಲ್ ಸಂಖ್ಯೆ ಮುಂತಾದ ಮಾಹಿತಿಗಳನ್ನು ಪರಿಶೀಲಿಸಿ. ಹಾಗೆಯೇ "Verify Payment Address" ಬಳಸಿ ಹಣ ಕಳುಹಿಸಬೇಕಾಗಿರುವ ಗುರುತನ್ನು ನೀವು ಪರಿಶೀಲಿಸಬಹುದು.

Meesho ಆ್ಯಪ್ ನಲ್ಲಿ ಒಂದು ಟೀ ಶರ್ಟ್ ಬುಕ್ ಮಾಡಿ 10 ಲಕ್ಷ ಕಳೆದುಕೊಂಡ ಮಹಿಳೆ!

4.ವಂಚನೆ ಜಾಲಗಳ ಬಗ್ಗೆ ಎಚ್ಚರಿಕೆ
ನಿಮ್ಮನ್ನು ಜಾಣತನದಿಂದ ಯಾಮಾರಿಸಿ ಹಣ ದೋಚುವ ವಂಚಕರು ದೊಡ್ಡ ಪ್ರಮಾಣದಲ್ಲಿದ್ದಾರೆ. ನಿಮ್ಮ ಯುಪಿಐ ಪಿನ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ಮುಂತಾದ ವೈಯಕ್ತಿಕ ಮಾಹಿತಿಗಳನ್ನು ಪಡೆದು ನಿಮ್ಮನ್ನು ವಂಚಿಸುತ್ತಾರೆ. ಇ-ಮೇಲ್, ಮೆಸೇಜ್ ಗಳ ಮೂಲಕ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ. ಹೀಗಾಗಿ ನಿಮಗೆ ಬಂದಿರುವ ಅನುಮಾನಾಸ್ಪದ ಇ-ಮೇಲ್ ಅಥವಾ ಸಂದೇಶಗಳಲ್ಲಿನ ಲಿಂಕ್ ಗಳ ಮೇಲೆ ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ.

5.ನೀವು ಬಳಸೋ ಸಾಧನವನ್ನು ಸುರಕ್ಷಿತವಾಗಿರಿಸಿ
ನೀವು ಆನ್ ಲೈನ್ ಪಾವತಿಗೆ ಬಳಸುವ ಸಾಧನ ಕೂಡ ವಂಚಕರ ಟಾರ್ಗೆಟ್ ನಲ್ಲಿರುತ್ತದೆ. ಹೀಗಾಗಿ ನೀವು ಯುಪಿಐ ಪಾವತಿಗೆ ಬಳಸುವ ಮೊಬೈಲ್ ಅಥವಾ ಸಾಧನಕ್ಕೆ ಪಿನ್ ಬಳಸಿ.

 

Follow Us:
Download App:
  • android
  • ios