ಈ ಬ್ಯಾಂಕ್ ಎಟಿಎಂನಲ್ಲಿ ನಗದು ವಿತ್ ಡ್ರಾ ಮಾಡಲು ಡೆಬಿಟ್ ಕಾರ್ಡ್ ಬೇಕಿಲ್ಲ, ಮೊಬೈಲ್ ನಲ್ಲಿ ಯುಪಿಐ ಇದ್ರೆ ಸಾಕು!
ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಲು ಡೆಬಿಟ್ ಕಾರ್ಡ್ ಅಗತ್ಯ. ಆದರೆ, ಬ್ಯಾಂಕ್ ಆಫ್ ಬರೋಡಾ ಯುಪಿಐ ಬಳಸಿ ಎಟಿಎಂನಿಂದ ನಗದು ವಿತ್ ಡ್ರಾಗೆ ಅವಕಾಶ ಕಲ್ಪಿಸಿದೆ. ಈ ಮೂಲಕ ಇಂಟರ್ ಆಪರೇಬಲ್ ಕಾರ್ಡ್ ಲೆಸ್ ಕ್ಯಾಶ್ ವಿತ್ ಡ್ರಾವಲ್ (ಐಸಿಸಿಡಬ್ಲ್ಯು) ವ್ಯವಸ್ಥೆಯನ್ನು ಪ್ರಾರಂಭಿಸಿದ ಸಾರ್ವಜನಿಕ ವಲಯದ ಮೊದಲ ಬ್ಯಾಂಕ್ ಆಗಿದೆ.
ನವದೆಹಲಿ (ಜೂ.6): ಇಂದು ಎಲ್ಲೆಡೆ ನಗದುರಹಿತ ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ದೇಶಾದ್ಯಂತ ಯುಪಿಐ ಪಾವತಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ. ಹೀಗಿರುವಾಗ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್) ಬಳಸಿ ಗ್ರಾಹಕರು ಬ್ಯಾಂಕ್ ಎಟಿಎಂಗಳಿಂದ ನಗದು ವಿತ್ ಡ್ರಾ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಇಂಟರ್ ಆಪರೇಬಲ್ ಕಾರ್ಡ್ ಲೆಸ್ ಕ್ಯಾಶ್ ವಿತ್ ಡ್ರಾವಲ್ (ಐಸಿಸಿಡಬ್ಲ್ಯು) ಎಂದು ಕರೆಯುವ ಈ ವ್ಯವಸ್ಥೆಯ್ನು ಇದೇ ಮೊದಲ ಬಾರಿಗೆ ಬ್ಯಾಂಕ್ ಆಫ್ ಬರೋಡಾ ಪ್ರಾರಂಭಿಸಿದೆ. ಈ ಮೂಲಕ ದೇಶದಲ್ಲಿ ಈ ವ್ಯವಸ್ಥೆ ಪ್ರಾರಂಭಿಸಿದ ಸಾರ್ವಜನಿಕ ವಲಯದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆ ಗಳಿಸಿದೆ. ಈ ವ್ಯವಸ್ಥೆ ಬಳಸಿಕೊಂಡು ಗ್ರಾಹಕರು ತಮ್ಮ ಎಟಿಎಂ ಮೂಲಕ ಯುಪಿಐ ಬಳಸಿ ಹಣ ವಿತ್ ಡ್ರಾ ಮಾಡಿಕೊಳ್ಳಬಹುದು. ಭೀಮ್ ಯುಪಿಐ, ಬಾಬ್ ವರ್ಲ್ಡ್ ಯುಪಿಐ ಅಥವಾ ಇತರ ಯಾವುದೇ ಯುಪಿಐ ಅಪ್ಲಿಕೇಷನ್ ಬಳಸಿ ಡೆಬಿಟ್ ಕಾರ್ಡ್ ಇಲ್ಲದೆ ಬ್ಯಾಂಕ್ ಆಫ್ ಬರೋಡಾದ ಎಟಿಎಂಗಳಿಂದ ಗ್ರಾಹಕರು ಈಗ ನಗದು ವಿತ್ ಡ್ರಾ ಮಾಡಬಹುದು.
'ಬ್ಯಾಂಕ್ ಆಫ್ ಬರೋಡಾ ಈ ಸೇವೆಯನ್ನು ಪರಿಚಯಿಸಿದ ಸಾರ್ವಜನಿಕ ವಲಯದ ಮೊದಲ ಬ್ಯಾಂಕ್ ಆಗಿದೆ. ಈ ಸೇವೆಯನ್ನು ಬ್ಯಾಂಕ್ ಆಫ್ ಬರೋಡಾದ ಹಾಗೂ ಇತರ ಬ್ಯಾಂಕ್ ಗಳ ಗ್ರಾಹಕರು ಬಳಸಿಕೊಳ್ಳಬಹುದಾಗಿದೆ. ಭೀಮಾ ಯುಪಿಐ, ಬಾಬ್ ವರ್ಲ್ಡ್ ಯುಪಿಐ ಅಥವಾ ಇತರ ಯಾವುದೇ ಯುಪಿಐ ಅಪ್ಲಿಕೇಷನ್ ಬಳಸಿ ಡೆಬಿಟ್ ಕಾರ್ಡ್ ಇಲ್ಲದೆ ಬ್ಯಾಂಕ್ ಆಫ್ ಬರೋಡಾದ ಎಟಿಎಂನಿಂದ ನಗದು ವಿತ್ ಡ್ರಾ ಮಾಡಬಹುದು' ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿಕೆಯಲ್ಲಿ ತಿಳಿಸಿದೆ.
ನೀವು ಬ್ಯಾಂಕ್ ನಲ್ಲಿ ಒಮ್ಮೆಗೆ ಎಷ್ಟು ನಾಣ್ಯಗಳನ್ನು ಠೇವಣಿ ಇಡಬಹುದು? ಆರ್ ಬಿಐ ಮಾರ್ಗಸೂಚಿಯಲ್ಲಿ ಏನಿದೆ?
ದಿನಕ್ಕೆ ಎಷ್ಟು ವಹಿವಾಟು ನಡೆಸಬಹುದು?
ಒಂದು ದಿನಕ್ಕೆ ಒಂದು ಖಾತೆಯಿಂದ ಗ್ರಾಹಕರು ಎರಡು ವಹಿವಾಟುಗಳನ್ನು ನಡೆಸಬಹುದು. ಇನ್ನು ಒಂದು ದಿನಕ್ಕೆ ಪ್ರತಿ ವಹಿವಾಟಿಗೆ ವಿತ್ ಡ್ರಾ ಮಿತಿ 5,000ರೂ. ಬ್ಯಾಂಕ್ ಆಫ್ ಬರೋಡಾ ದೇಶಾದ್ಯಂತ
11,000ಕ್ಕೂ ಅಧಿಕ ಎಟಿಎಂ ನೆಟ್ ವರ್ಕ್ ಗಳನ್ನು ಹೊಂದಿದೆ. ಹೀಗಾಗಿ ಈ ಸೇವೆ ಎಲ್ಲ ಕಡೆಯೂ ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನು ಈ ಸೇವೆ ಬಳಕೆಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ. ನಿಮ್ಮ ಯುಪಿಐಗೆ ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಿದ್ದರೆ, ಹಣ ವಿತ್ ಡ್ರಾ ಮಾಡುವ ಸಮಯದಲ್ಲಿ ನೀವು ಬಯಸುವ ಬ್ಯಾಂಕ್ ಖಾತೆ ಆಯ್ಕೆ ಮಾಡಲು ಐಸಿಸಿಡಬ್ಲ್ಯು ಆಯ್ಕೆಗಳನ್ನು ಒದಗಿಸುತ್ತದೆ.
ಎಟಿಎಂನಲ್ಲಿ ಯುಪಿಐ ಬಳಸಿ ನಗದು ವಿತ್ ಡ್ರಾ ಹೇಗೆ?
* ನಿಮ್ಮ ಸಮೀಪದ ಬ್ಯಾಂಕ್ ಆಫ್ ಬರೋಡಾದ ಎಟಿಎಂ ಕೇಂದ್ರಕ್ಕೆ ತೆರಳಿ.
*ಅಲ್ಲಿ ‘UPI Cash Withdrawal’ಆಯ್ಕೆ ಮಾಡಿ.
*ಈಗ ನೀವು ವಿತ್ ಡ್ರಾ ಮಾಡಲು ಬಯಸುವ ಮೊತ್ತವನ್ನು ನಮೂದಿಸಿ (5,000ರೂ.ಗಿಂತ ಹೆಚ್ಚಿರಬಾರದು).
*ಎಟಿಎಂ ಸ್ಕ್ರೀನ್ ನಲ್ಲಿ ಕ್ಯೂಆರ್ ಕೋಡ್ ಕಾಣಿಸುತ್ತದೆ. ಐಸಿಸಿಡಬ್ಲ್ಯು ನಡೆಸಲು ಯುಪಿಐ ಅಪ್ಲಿಕೇಷನ್ ಬಳಸಿ ಇದನ್ನು ಸ್ಕ್ಯಾನ್ ಮಾಡಿ.
*ಫೋನ್ ನಲ್ಲಿ ನಿಮ್ಮ ಯುಪಿಐ ಪಿನ್ ನಮೂದಿಸಿ.
*ಈಗ ನೀವು ನಿಮ್ಮ ನಗದು ವಿತ್ ಡ್ರಾ ಮಾಡಬಹುದು.
2000 ರೂ. ನೋಟು ಹಿಂಪಡೆಯುವಿಕೆ ಬಳಿಕ ಎಸ್‌ಬಿಐನಲ್ಲಿ ಜಮೆಯಾಯ್ತು 14 ಸಾವಿರ ಕೋಟಿ, 3,000 ಕೋಟಿ ರೂ. ಬದಲಾವಣೆ
ಕಳೆದ ತಿಂಗಳು ಮಾರ್ಗಸೂಚಿ
ಎನ್ ಸಿಆರ್ ಕಾರ್ಪೋರೇಷನ್ ಮೇ ತಿಂಗಳಿನಲ್ಲಿ ಯುಪಿಐ ಪ್ಲಾಟ್ ಫಾರ್ಮ್ ಗಳಲ್ಲಿ ಮೊದಲ ಇಂಟರ್ ಆಪರೇಬಲ್ ಕಾರ್ಡ್ ಲೆಸ್ ಕ್ಯಾಶ್ ವಿತ್ ಡ್ರಾವಲ್ ಪರಿಚಯಿಸಿತ್ತು. ಇದು ಎಟಿಎಂ ಕಾರ್ಡ್ ಇಲ್ಲದೆಯೇ ಯುಪಿಐ ಅಪ್ಲಿಕೇಷನ್ ಬಳಸಿ ಹಣವನ್ನು ವಿತ್ ಡ್ರಾ ಮಾಡಲು ನೆರವು ನೀಡುತ್ತದೆ.