ನವದೆಹಲಿ(ಜು.15): ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಜಿಯೋ ವೇದಿಕೆಯಲ್ಲಿ, ವಿಶ್ವದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಗಳ ಪೈಕಿ ಒಂದಾದ ಗೂಗಲ್‌ 30,140 ಕೋಟಿ ರು.(4 ಬಿಲಿಯನ್‌ ಡಾಲರ್‌) ಹೂಡಿಕೆ ಮಾಡಲಿದೆ ಎನ್ನಲಾಗಿದೆ.

ಈ ಕುರಿತು ಉಭಯ ಕಂಪನಿಗಳ ನಡುವೆ ಚರ್ಚೆ ನಡೆಯುತ್ತಿದೆ, ಶೀಘ್ರ ಈ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಜಿಯೋ ವೇದಿಕೆಯಲ್ಲಿ ಈಗಾಗಲೇ ಫೇಸ್ಬುಕ್‌ ಸೇರಿದಂತೆ 10ಕ್ಕೂ ಹೆಚ್ಚು ಜಾಗತಿ ಕಂಪನಿಗಳು 1.17 ಲಕ್ಷ ಕೋಟಿ ರು. ಹೂಡಿಕೆ ಮಾಡಿವೆ.

ಶ್ರೀಮಂತಿಕೆಯಲ್ಲಿ ಗೂಗಲ್ ಸಂಸ್ಥಾಪಕ, ಎಲನ್ ಮಸ್ಕ್ ಹಿಂದಿಕ್ಕಿದ ಅಂಬಾನಿ!

ಮುಕೇಶ್‌ ಅಂಬಾನಿ ಈಗ ವಿಶ್ವದ 6ನೇ ಶ್ರೀಮಂತ ವ್ಯಕ್ತಿ

ಅಮೆರಿಕ ಮೂಲದ ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ನ ಸಹ ಸಂಸ್ಥಾಪಕರಾದ ಸರ್ಗೇ ಬ್ರಿನ್‌ ಹಾಗೂ ಲ್ಯಾರಿ ಪೇಜ್‌ ಅವರನ್ನು ಹಿಂದಿಕ್ಕಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ, ವಿಶ್ವದ 6ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ಸೂಚ್ಯಂಕದ ಪ್ರಕಾರ ಸೋಮವಾರ ರಿಲಯನ್ಸ್‌ ಷೇರುಗಳ ಬೆಲೆ ಶೇ.3ರಷ್ಟುಏರಿಕೆ ಕಾರಣ ಅಂಬಾನಿ ಅವರ ಆಸ್ತಿಯಲ್ಲಿ 16275 ಕೋಟಿ ರು. ಏರಿಕೆಯಾಗಿದೆ. ಈ ಮೂಲಕ ಅವರ ಒಟ್ಟು ಆಸ್ತಿ 72.4 ಬಿಲಿಯನ್‌ ಡಾಲರ್‌(5.4 ಲಕ್ಷ ಕೋಟಿ ರು.)ಗೆ ತಲುಪಿದೆ.

ವಾರೆನ್‌ ಬಫೆಟ್‌ ಹಿಂದಿಕ್ಕಿ ಅಂಬಾನಿ ಈಗ ವಿಶ್ವದ ನಂ.7 ಶ್ರೀಮಂತ!

ಮತ್ತೊಂದೆಡೆ ಸೋಮವಾರ ಅಮೆರಿಕ ಷೇರುಪೇಟೆಯಲ್ಲಿ ಗೂಗಲ್‌ ಕಂಪನಿಯ ಷೇರು ಮೌಲ್ಯ ಇಳಿದ ಕಾರಣ, ಪೇಜ್‌ ಅವರ ಆಸ್ತಿ ಮೌಲ್ಯ 5.3 ಲಕ್ಷ ಕೋಟಿ ರು.ಗೆ ಮತ್ತು ಬ್ರಿನ್‌ ಆಸ್ತಿ ಮೌಲ್ಯ 5.21 ಲಕ್ಷ ಕೋಟಿ ರು.ಗೆ ಕುಸಿದಿದೆ. ಇದು ಮುಕೇಶ್‌ ಅವರ ಸ್ಥಾನ ಏರಿಕೆಗೆ ಕಾರಣವಾಗಿದೆ. ವಾರದ ಹಿಂದಷ್ಟೇ ವಿಶ್ವದ ಅತ್ಯಂತ ಶ್ರೀಮಂತ ಹೂಡಿಕೆದಾರ ವಾರನ್‌ ಬಫೆಟ್‌ ಅವರನ್ನು ಹಿಂದಿಕ್ಕಿ ಮುಕೇಶ್‌ ವಿಶ್ವದ 8ನೇ ಶ್ರೀಮಂತ ಎನ್ನಿಸಿಕೊಂಡಿದ್ದರು.