ವಾರೆನ್ ಬಫೆಟ್ ಹಿಂದಿಕ್ಕಿ ಅಂಬಾನಿ ಈಗ ವಿಶ್ವದ ನಂ.7 ಶ್ರೀಮಂತ!
ವಾರೆನ್ ಬಫೆಟ್ ಹಿಂದಿಕ್ಕಿ ಅಂಬಾನಿ ಈಗ ವಿಶ್ವದ ನಂ.7 ಶ್ರೀಮಂತ| ಗೂಗಲ್ ಸಿಇಒಗಳಿಗಿಂತಲೂ ಕುಬೇರ
ನವದೆಹಲಿ(ಜು.11): ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರೀಗ ಬರ್ಕ್ಶೈರ್ ಹಾಥ್‌ವೇ ಸಿಇಒ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ವಿಶ್ವದ 7ನೇ ಶ್ರೀಮಂತ ಎನಿಸಿಕೊಂಡಿದ್ದಾರೆ.
ಅಮೆರಿಕದ ಫೋರ್ಬ್ಸ್ ನಿಯತಕಾಲಿಕೆಯ ನೈಜ ಸಮಯದ ಶ್ರೀಮಂತರ ಪಟ್ಟಿಯ ಪ್ರಕಾರ ಮುಕೇಶ್ ಅಂಬಾನಿ ಆಸ್ತಿ 5.32 ಲಕ್ಷ ಕೋಟಿ ರು. (70.1 ಬಿಲಿಯನ್ ಡಾಲರ್)ಗೆ ಏರಿಕೆಯಾಗಿದೆ. ಇದೇ ವೇಳೆ ವಾರೆನ್ ಬಫೆಟ್ ಅವರ ಆಸ್ತಿ 5.16 ಲಕ್ಷ ಕೋಟಿ ರು. ಇದೆ. ಅಲ್ಲದೇ ಫೋಬ್ಸ್‌ರ್ ಪಟ್ಟಿಯ ಪ್ರಕಾರ ಮುಕೇಶ್ ಅಂಬಾನಿ ಅವರೀಗ ಗೂಗಲ್ ಸಹ ಸ್ಥಾಪಕರಾದ ಲಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರಿಗಿಂತಲೂ ಶ್ರೀಮಂತ ಎನಿಸಿಕೊಂಡಿದ್ದಾರೆ.
ಮುಕೇಶ್ ಅಂಬಾನಿ ವಿಶ್ವದ ನಂ.9 ಶ್ರೀಮಂತ ಉದ್ಯಮಿ!
ಆಸ್ತಿ ಏರಿಕೆಗೆ ಕಾರಣ ಏನು?:
ಮಾಚ್‌ರ್ ಬಳಿಕ ರಿಲಯನ್ಸ್ ಷೇರುಗಳು ದುಪ್ಪಟ್ಟಿಗಿಂತಲೂ ಅಧಿಕ ಏರಿಕೆ ದಾಖಲಿಸಿವೆ. ಇದರ ಜೊತೆ ರಿಲಯನ್ಸ್‌ನಲ್ಲಿ ಫೇಸ್‌ಬುಕ್, ಇಂಟೆಲ್ ಕ್ಯಾಪಿಟಲ್ ಸೇರಿದಂತೆ ಜಗತ್ತಿನ ಪ್ರಮುಖ ಕಂಪನಿಗಳು 1.14 ಲಕ್ಷ ಕೋಟಿ ರು.ನಷ್ಟುಹೂಡಿಕೆ ಮಾಡಿವೆ. ಈ ಮಧ್ಯೆ ರಿಲಯನ್ಸ್ ಮಾರುಕಟ್ಟೆಮೌಲ್ಯ 12.70 ಲಕ್ಷ ಕೋಟಿ ರು.ಗೆ ತಲುಪಿದೆ.