ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ಲಭ್ಯವಾಗಿದೆ. ನಿರಂತರವಾಗಿ ಇಳಿಯುತ್ತಿದ್ದ ಪೆಟ್ರೋಲ್, ಡೀಸೆಲ್ ದರ ಇದೀಗ ಮತ್ತೆ  ಇಳಿಕೆಯಾಗಿದೆ. 

ನವದೆಹಲಿ : ದೀಪಾವಳಿ ಸಂಭ್ರಮದ ನಡುವೆ ಜನರಿಗೆ ಗುಡ್ ನ್ಯೂಸ್ ಇದಾಗಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಇಳಿಯುತ್ತಿರುವ ಪೆಟ್ರೋಲ್ ಡೀಸೆಲ್ ದರ ಇದೀಗ ಮತ್ತೊಮ್ಮೆ ಇಳಿದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 14 ಪೈಸೆ ಇಳಿಕೆಯಾಗಿದ್ದು, ಇದರಿಂದ ಪ್ರತೀ ಲೀಟರ್ ಪೆಟ್ರೋಲ್ ದರ 78.42 ರು.ಗಳಾಗಿದೆ. ಇನ್ನು ಡೀಸೆಲ್ ದರ 9 ಪೈಸೆ ಇಳಿಕೆಯಾಗಿದ್ದು, ಇದರಿಂದ 73.07 ರು.ಗಳಷ್ಟಾಗಿದೆ. 

ಇನ್ನು ಮುಂಬೈನಲ್ಲಿ ಪೆಟ್ರೋಲ್ ದರದಲ್ಲಿ 14 ಪೈಸೆ ಇಳಿದಿದ್ದು, ಡೀಸೆಲ್ ದರದಲ್ಲಿ 10 ಪೈಸೆ ಇಳಿಕೆಯಾಗಿದೆ. ಇದರಿಂದ ಪ್ರತೀ ಲೀಟರ್ ಪೆಟ್ರೋಲ್ ದರ 83.92 ರುಗಳಾಗಿದ್ದು, ಡೀಸೆಲ್ ದರ 76.57 ರು.ಗಳಾಗಿದೆ. 

ತಿಂಗಳ ಹಿಂದಷ್ಟೇ ನಿರಂತರವಾಗಿ ಏರಿಕೆಯಾಗಿ 100ರ ಗಡಿ ದಾಟಿದ್ದ ಪೆಟ್ರೋಲ್, ಡೀಸೆಲ್ ದರ ಇದೀಗ ನಿರಂತರವಾಗಿ ಇಳಿಯುತ್ತಿದೆ.