ನವದೆಹಲಿ :  ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಚಿನ್ನ ಕೊಳ್ಳುವವರಿಗೆ ಇದೀಗ ಗುಡ್ ನ್ಯೂಸ್ ಒಂದು ಕಾದಿದೆ. 

ಜಾಗತಿಕವಾಗಿ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಿದ್ದು ಇದೀಗ ಮತ್ತೊಮ್ಮೆ ಚಿನ್ನದ ಬೆಲೆಯಲ್ಲಿ ಇಳಿಕೆ  ಕಂದು ಬಂದಿದೆ. 

10 ಗ್ರಾಂ ಚಿನ್ನದ ದರದಲ್ಲಿ 60 ರು ಇಳಿಕೆಯಾಗಿದ್ದು ಇದರಿಂದ 31,450 ರು.ಗಳಷ್ಟಾಗಿದೆ. 

ಅಲ್ಲದೇ ಇದೇ ವೇಳೆ ಬೆಳ್ಳಿಯ ದರದಲ್ಲಿಯೂ ಕೂಡ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿಯ ಮೇಲೆ 300 ರು. ಇಳಿಕೆಯಾಗಿದ್ದು ಇದರಿಂದ  ಒಂದು ಕೆ.ಜಿ ಬೆಳ್ಳಿಯ ಬೆಲೆ 37,500 ರು.ನಷ್ಟಾಗಿದೆ. 

ಸ್ಥಳೀಯ ಚಿನ್ನದ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.