Gold Silver Price Today:ಇಂದು ಆಭರಣ ಖರೀದಿಸೋರಿಗೆ ಗುಡ್ ನ್ಯೂಸ್; ಚಿನ್ನ, ಬೆಳ್ಳಿ ಬೆಲೆ ಇಳಿಕೆ
ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಳಿತ ಕಂಡುಬರುತ್ತಿದೆ. ಇಂದು ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಇಳಿಕೆಯಾಗಿದ್ದು, ಆಭರಣ ಖರೀದಿಸೋರಿಗೆ ಕೊಂಚ ಮಟ್ಟಿನ ನಿರಾಳತೆ ಸಿಕ್ಕಿದೆ. ಹಾಗಾದ್ರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ.
Business Desk:ಆಗಸ್ಟ್ ಅಂದ್ರೇನೆ ಹಬ್ಬಗಳ ಮಾಸ. ಶ್ರಾವಣ ಮಾಸದಲ್ಲಿ ಪೂಜೆ, ಆರಾಧನೆಗಳು ಹೆಚ್ಚಿರುವ ಜೊತೆಗೆ ಬಂಗಾರ, ಬೆಳ್ಳಿ ಖರೀದಿಗೂ ಜನರು ಮುಂದಾಗೋದು ಜಾಸ್ತಿ. ವರಹಾಲಕ್ಷ್ಮೀ ಹಬ್ಬ ಶ್ರಾವಣ ಮಾಸದ ಆರಂಭದಲ್ಲೇ ಬರುವ ಕಾರಣ ಚಿನ್ನ, ಬೆಳ್ಳಿಗೆ ಈ ಸಮಯದಲ್ಲಿ ಬೇಡಿಕೆ ಹೆಚ್ಚು. ಇನ್ನು ಕೆಲವೇ ದಿನಗಳಲ್ಲಿ ಗೌರಿ, ಗಣೇಶ ಹಬ್ಬ ಕೂಡ ಇದೆ. ಚಿನ್ನ, ಬೆಳ್ಳಿ ಬೆಲೆ ಹೆಚ್ಚಿದ್ರೂ ಕೂಡ ಈ ಸಮಯದಲ್ಲಿ ಖರೀದಿಗೆ ಗ್ರಾಹಕರು ಮುಂದಾಗೋದು ಸಹಜ. ಆದರೆ, ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಏರಿಳಿತವಾಗುತ್ತಿದೆ. ಇದು ಖರೀದಿಗೆ ಪ್ಲ್ಯಾನ್ ಮಾಡುತ್ತಿರೋರಿಗೆ ಸ್ವಲ್ಪ ಮಟ್ಟಿನ ಗೊಂದಲ ಮೂಡಿಸಿರಬಹುದು. ಆದ್ರೆ, ಇಂದು (ಆ.16) ಚಿನ್ನ ಹಾಗೂ ಬೆಳ್ಳಿ ಖರೀದಿಸೋರಿಗೆ ಸ್ವಲ್ಪ ಖುಷಿಯಾಗೋದು ಸಹಜ. ಯಾಕೆಂದ್ರೆ ಚಿನ್ನ ಹಾಗೂ ಬೆಳ್ಳಿ ಬೆಲೆ ನಿನ್ನೆಗಿಂತ ಇಂದು ತಗ್ಗಿದೆ. ಹಾಗಾದ್ರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ.
ಒಂದು ಗ್ರಾಂ ಚಿನ್ನ (1GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,805
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ.5,242
Business Idea : ಮೂರು ಲಕ್ಷ ಹೂಡಿಕೆ ಮಾಡಿ, ಪ್ರತಿ ತಿಂಗಳು 60 ಸಾವಿರ ಗಳಿಸಿ
ಎಂಟು ಗ್ರಾಂ ಚಿನ್ನ (8GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 38,440
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,936
ಹತ್ತು ಗ್ರಾಂ ಚಿನ್ನ (10GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 48,050
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 52,420
ನೂರು ಗ್ರಾಂ ಚಿನ್ನ (100GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,80,500
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,24,200
ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 48,050 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,760, ರೂ. 48,000, ರೂ.48,000 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 48,150ರೂ. ಆಗಿದೆ.
ಇಂದಿನ ಬೆಳ್ಳಿ ದರ
ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರ ಇಳಿಕೆಯಾಗಿದೆ. ನಿನ್ನೆ 1ಕೆಜಿ ಬೆಳ್ಳಿಗೆ 64,800 ರೂ. ಇತ್ತು. ಇಂದು 1,000 ರೂ. ಇಳಿಕೆಯಾಗಿ 63,800ರೂ. ಆಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ - ಇಳಿಕೆಯಾದಂತೆಯೂ ಚಿನ್ನ - ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.
ರಾಕೇಶ್ ಜುಂಜುನ್‌ವಾಲಾ ನಂಬಿಕೆ ಇಟ್ಟಿದ್ದ ಹೂಡಿಕೆಯ 5 ಟಿಪ್ಸ್ ಹೀಗಿದೆ..
ಬೆಂಗಳೂರು ಹಾಗೂ ಇತರೆಡೆ ಬೆಳ್ಳಿ ದರ
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕೂಡ ಒಂದು ಕೆಜಿ ಬೆಳ್ಳಿ ದರದಲ್ಲಿ1,000 ರೂ. ಇಳಿಕೆಯಾಗಿ ಇಂದಿನ ದರ 63,800ರೂ. ಆಗಿದೆ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 638, ರೂ. 6,380 ಹಾಗೂ ರೂ. 63,800 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 63,800 ಆಗಿದ್ದರೆ, ಮುಂಬೈನಲ್ಲಿ ರೂ. 58,000 ಹಾಗೂ ಕೋಲ್ಕತ್ತದಲ್ಲಿ ಸಹ ರೂ. 58,000 ಗಳಾಗಿದೆ. ಇನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೂಡ ಇಂದಿನ ಬೆಳ್ಳಿ ದರ ರೂ. 58,000 ಆಗಿದೆ.