ಬೆಂಗಳೂರು[ಜ.06]: ಹೊಸ ವರ್ಷದ ಆರಂಭದಿಂದಲೂ ಚಿನ್ನದ ಬೆಲೆ ಏರಿಕೆ ಕಂಡಿದ್ದು, ದಿನೇ ದಿನೇ ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಬಂಗಾರ ಬಲು ಭಾರವಾಗುತ್ತಿದ್ದು, 24 ಕ್ಯಾರೆಟ್ ಚಿನ್ನದ ದರದಲ್ಲಿ 780 ರೂಪಾಯಿ ಏರಿಕೆಯಾಗಿದೆ.

"

ಹೌದು ಒಂದೆಡೆ ರೂಪಾಯಿ ಮೌಲ್ಯ ದಿನೇ ದಿನೇ ಕುಸಿಯುತ್ತಿದ್ದು, ಬೆಲೆ ಏರಿಕೆ ಬಿಸಿ ಹೆಚ್ಚಾಗತೊಡಗಿದೆ. ಅತ್ತ ಇರಾನ್ ಹಾಗೂ ಅಮೆರಿಕ ನಡುವೆ ತಲೆದೋರಿರುವ ಯುದ್ಧ ಪರಿಸ್ಥಿತಿಯಿಂದ ಭಾರತಕ್ಕೆ ಸಂಕಷ್ಟ ಬಂದೊದಗಿದ್ದು, ತೈಲ ಬೆಲೆಯೂ ಏರಿಕೆಯಾಗಲಾರಂಭಿಸಿದೆ. ಸದ್ಯ ಚಿನ್ನದ ಬೆಲೆ ಗಗನಕ್ಕೇರಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ.

ಹಟ್ಟಿ ಚಿನ್ನದ ಗಣಿಗೆ 80 ಕೋಟಿ ರು. ಲಾಭ

ಇಂದಿನ ಚಿನ್ನದ ದರ

24 ಕ್ಯಾರೆಟ್ ಚಿನ್ನದ ದರದಲ್ಲಿ 780 ರೂಪಾಯಿ ಏರಿಕೆಯಾಗಿದ್ದು, ಬೆಳ್ಳಿ ದರ 50 ಸಾವಿರ ಗಡಿ ದಾಟಿದೆ. 

ಬೆಂಗಳೂರಲ್ಲಿ 10 ಗ್ರಾಂ, 24 ಕ್ಯಾರೆಟ್ ಚಿನ್ನದ ಇಂದಿನ ದರ 42,230 ರೂಪಾಯಿ ನಿಗದಿಯಾಗಿದೆ.

ಮುಂಬೈ ಮಾರುಕಟ್ಟೆಯಲ್ಲಿ 10 ಗ್ರಾಂ, 24 ಕ್ಯಾರೆಟ್ ಚಿನ್ನದ ಇಂದಿನ ದರ 42,135 ರೂಪಾಯಿಗೇರಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 42,110 ರೂಪಾಯಿ ನಿಗದಿಯಾಗಿದೆ.

ಹಟ್ಟಿ ಚಿನ್ನದ ಗಣಿಗೆ 80 ಕೋಟಿ ರು. ಲಾಭ

ಬೆಳ್ಳಿ ದರದಲ್ಲೂ ಏರಿಕೆ

ಇನ್ನು ಬೆಳ್ಳಿ ದರದಲ್ಲೂ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ದರ 51 ಸಾವಿರ ರೂಪಾಯಿಗೇರಿಕೆಯಾಗಿದೆ. 

ಅತ್ತ ನದಿನ ನಿತ್ಯದ ವಸ್ತುಗಳ ಬೆಲೆಯೂ ಹೆಚ್ಚುತ್ತಿದ್ದು, ಇತ್ತ ತೈಲ, ಚಿನ್ನ, ಬೆಳ್ಳಿ ದರವೂ ಹೆಚ್ಚುತ್ತಿರುವುದು ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.

ಚಿನ್ನದ ಬೆಲೆ ಲೆಕ್ಕ ಹಾಕೋದ್ಹೇಗೆ?