Asianet Suvarna News Asianet Suvarna News

ಚಿನ್ನಕ್ಕೆ ಸಂಬಂಧಿಸಿದ ಸುದ್ದಿ: ಸಂಡೇ ರೇಟ್ ನೊಡ್ಕೊಳ್ಳಿ ಬುದ್ದಿ!

ಆಭರಣ ಪ್ರಿಯರ ನಗು ಕಸಿದ ಚಿನ್ನ, ಬೆಳ್ಳಿ ದರ| ಏರಿಕೆಯತ್ತ ಮುಖ ಮಾಡಿದ ಚಿನ್ನ, ಬೆಳ್ಳಿ ದರ| ಕೇವಲ ಎರಡು ವಾರದಲ್ಲಿ ಎರಡು ಸಾವಿರ ರೂ. ಏರಿಕೆ ಕಂಡ ಚಿನ್ನ| ದೇಶೀಯ ಮಾರುಟಕ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 40,130 ರೂ.|  ದೇಶೀಯ ಮಾರುಟಕ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 47,520 ರೂ.| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ  ಒಂದು ಔನ್ಸ್‌ಗೆ 1,551.52 ಡಾಲರ್ |

Gold Prices Surge Over Two Thousand In Just 2 Weeks Silver Prices High
Author
Bengaluru, First Published Jan 5, 2020, 2:49 PM IST

ನವದೆಹಲಿ(ಜ.05): ಹೊಸ ವರ್ಷಕ್ಕೆ ಏನು ಸಿಹಿ ಸುದ್ದಿ ಸಿಕ್ಕಿತೋ ಬಿಟ್ಟಿತೋ ಗೊತ್ತಿಲ್ಲ. ಆದರೆ ಆಭರಣ ಪ್ರಿಯರಿಗೆ ಮಾತ್ರ ಹೊಸ ವರ್ಷದ ಆರಂಭದಿಂದಲೇ ಕಹಿ ಸುದ್ದಿಯ ಸರಮಾಲೆ.

ಹೌದು, ಇಳಿಕೆಯತ್ತ ಮುಖ ಮಾಡಿ ಆಭರಣ ಪ್ರಿಯರ ಮೊಗದಲ್ಲಿ ಸಂತಸ ಮೂಡಿಸಿದ್ದ ಚಿನ್ನ, ಇದೀಗ ಮತ್ತೆ ಏರಿಕೆಯತ್ತ ಮುಖ ಮಾಡಿ ಆತಂಕಕ್ಕೆ ಕಾರಣವಾಗಿದೆ.

ಸಂಜೆ ಹೊತ್ತಲ್ಲಿ ಚಿನ್ನದ ಬೆಲೆ: ಕೊಳ್ಳುವ ಮೊದಲು ದರಪಟ್ಟಿ ನೋಡಿ ಇಲ್ಲೇ!

ಕೇವಲ ಎರಡು ವಾರಗಳಲ್ಲಿ ಬರೋಬ್ಬರಿ ಎರಡು ಸಾವಿರ ರೂ. ಏರಿಕೆ ಕಂಡಿರುವ ಚಿನ್ನದ ಬೆಲೆ, ದೇಶೀಯ ಮಾರುಟಕ್ಟೆಯಲ್ಲಿ 40,130 ರೂ. ಆಗಿದೆ.

10 ಗ್ರಾಂ ಚಿನ್ನದ ಬೆಲೆಯಲ್ಲಿ ಶೇ.2 ರಷ್ಟು ಏರಿಕೆಯಾಗಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 850 ರೂ. ಏರಿಕೆ ಕಂಡಿರುವುದು ಆಭರಣ ಪ್ರಿಯರ ನಗುವನ್ನೇ ಕಸಿದುಕೊಂಡಿದೆ.

ನೀವು ತಿಳಿದುಕೊಳ್ಳಲೇಬೇಕಾದ ಚಿನ್ನದ ದರ: ಮಾರುಕಟ್ಟೆ ಹರೋಹರ!

ಇದೇ ವೇಳೆ ಬೆಳ್ಳಿ ಬೆಲೆಯಲ್ಲೂಈ ಗಮನಾರ್ಹ ಏರಿಕೆ ಕಂಡಿದ್ದು, ಕೆಜಿ ಬೆಳ್ಳಿ ಬೆಲೆಯಲ್ಲಿ ಶೇ.1ರಷ್ಟು ಏರಿಕೆಯಾಗುವ ಮೂಲಕ ಒಟ್ಟು 47,520 ರೂ.ಗೆ ಮಾರಾಟವಾಗುತ್ತಿದೆ.

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಶೇ. 1.5ರಷ್ಟು ಏರಿಕೆಯಾಗಿದ್ದು,  ಒಂದು ಔನ್ಸ್‌ಗೆ 1,551.52 ಡಾಲರ್ ಆಗಿದೆ.

ಚಿನ್ನದ ಬೆಲೆ ಲೆಕ್ಕ ಹಾಕೋದ್ಹೇಗೆ?

Follow Us:
Download App:
  • android
  • ios