Asianet Suvarna News Asianet Suvarna News

Gold, Silver Price:ಚಿನ್ನದ ದರದಲ್ಲಿ ಯಥಾಸ್ಥಿತಿ, ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆ

ಬೆಂಗಳೂರಿನಲ್ಲಿ ನಿನ್ನೆ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಸ್ಥಿರತೆ ಕಾಯ್ದುಕೊಂಡಿದೆ. ನಿನ್ನೆ ಗಮನಾರ್ಹ ಏರಿಕೆ ದಾಖಲಿಸಿದ್ದ ಬೆಳ್ಳಿ ಬೆಲೆ ಇಂದು ಕೊಂಚ ಇಳಿಕೆಯಾಗಿದೆ.

Gold rate remains constant silver price decreased in Bengaluru Dec 9 2021 anu
Author
Bangalore, First Published Dec 9, 2021, 12:41 PM IST

ಬೆಂಗಳೂರು (ಡಿ.9): ಒಮಿಕ್ರಾನ್(Omicron) ವೈರಸ್ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿರೋ ಸುದ್ದಿ ಬೆನ್ನಲ್ಲೇ ಚಿನ್ನ (Gold) ಖರೀದಿಸೋ(Purchase) ಯೋಚನೆಯಲ್ಲಿರೋರು ಆದಷ್ಟು ಬೇಗ ಖರೀದಿ ಮಾಡಿ ಬಿಡೋಣ ಎಂಬ ನಿರ್ಧಾರಕ್ಕೆ ಬಂದಿರಬಹುದು. ಆದ್ರೆ  ಚಿನ್ನ ಖರೀದಿಗೆ ಸ್ವಲ್ಪ ದಿನ ಕಾಯೋದು ಉತ್ತಮ. ಏರಿಕೆ ಹಾದಿಯಲ್ಲಿದ್ದ ಚಿನ್ನದ ಬೆಲೆಯಲ್ಲಿ (Price) ಕಳೆದ ಕೆಲವು ದಿನಗಳಿಂದ ಸ್ಥಿರತೆ ಕಂಡುಬಂದಿದೆ.  ಇನ್ನು ಬೆಳ್ಳಿ (Silver)ದರದಲ್ಲಿ ಇಂದು ಕೂಡ ಇಳಿಕೆ ಮುಂದುವರಿದಿದೆ.  ಚಿನ್ನ ಹಾಗೂ ಬೆಳ್ಳಿ ದರವನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಚಿನ್ನದ ಮೇಲಿನ ಆಮದು ಸುಂಕ(Import duty) ಹಾಗೂ ಡಾಲರ್ (Dollar) ಮುಂದೆ ರೂಪಾಯಿ(Rupee) ಮೌಲ್ಯ (Value) ಎಷ್ಟಿದೆ ಎಂಬುದನ್ನು ಆಧರಿಸಿ ಪ್ರತಿದಿನ ಚಿನ್ನದ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಚಿನ್ನ ಹಾಗೂ ಬೆಳ್ಳಿ ಖರೀದಿಸೋ ಮುನ್ನ ಪ್ರತಿಯೊಬ್ಬರೂ ಸಾಕಷ್ಟು ಅಧ್ಯಯನ ನಡೆಸುತ್ತಾರೆ. ಎಷ್ಟೋ ದಿನಗಳಿಂದ ಕೂಡಿಟ್ಟಿರೋ ಹಣವನ್ನು ಚಿನ್ನ ಅಥವಾ ಬೆಳ್ಳಿ ಮೇಲೆ ಹೂಡಿಕೆ(Invest) ಮಾಡೋ ಮುನ್ನ ಮಾರುಕಟ್ಟೆಯಲ್ಲಿನ ಬೆಲೆಯನ್ನು ತಿಳಿದುಕೊಳ್ಳೋದು ಅಗತ್ಯ. ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿದ್ರೆ ಬೇರೆ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಕಡಿಮೆಯಿರೋವಾಗ ಖರೀದಿಸೋದು ಒಳ್ಳೆಯದು. ಇನ್ನು ಚಿನ್ನದ ಮೇಲೆ ಹೂಡಿಕೆ ಮಾಡೋರು ಕೂಡ ಚಿನ್ನದ ಬೆಲೆ ಕಡಿಮೆಯಿರೋವಾಗ ಖರೀದಿಸಿ, ದರದಲ್ಲಿ ಏರಿಕೆಯಾದಾಗ ಮಾರಾಟ ಮಾಡೋದ್ರಿಂದ ಒಳ್ಳೆಯ ಲಾಭ ಗಳಿಸಬಹುದು. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು  (ಡಿ.9) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ನಿನ್ನೆ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಸ್ಥಿರತೆ ಕಂಡುಬಂದಿದೆ.  22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 44,950ರೂ. ಇದ್ದು, ಇಂದು ಕೂಡ ಅಷ್ಟೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,040ರೂ. ಇದ್ದು,ಇಂದು ಯಾವುದೇ ಬದಲಾವಣೆಯಾಗಿಲ್ಲ.  ನಿನ್ನೆ ಗಮನಾರ್ಹ ಏರಿಕೆ ಕಂಡಿದ್ದ ಬೆಳ್ಳಿ ದರದಲ್ಲಿ ಇಂದು 300ರೂ. ಇಳಿಕೆಯಾಗಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 61,900ರೂ. ಇತ್ತು.ಆದ್ರೆ ಇಂದು 61,600ರೂ.ಗೆ ಇಳಿಕೆಯಾಗಿದೆ. 

Petrol, Diesel Rate:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇ.10 ಏರಿಕೆ: ರಾಜ್ಯದಲ್ಲಿ ಇಂದು ಇಂಧನ ದರ ಎಷ್ಟಿದೆ?

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ ಕೂಡ ಚಿನ್ನದ ಬೆಲೆ ಸ್ಥಿರವಾಗಿತ್ತು. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 47,100ರೂ.ಆಗಿದ್ದು,ನಿನ್ನೆ ಕೂಡ ಅಷ್ಟೇ ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ಯಾವುದೇ ಬದಲಾವಣೆಯಾಗಿಲ್ಲ. 51,390 ರೂ. ಇದೆ. ಬೆಳ್ಳಿ ದರದಲ್ಲಿ ಮಾತ್ರ ಇಂದು 300ರೂ. ಇಳಿಕೆಯಾಗಿದೆ. ನಿನ್ನೆಒಂದು ಕೆ.ಜಿ.ಬೆಳ್ಳಿಗೆ 61,900ರೂ.ಇತ್ತು.ಆದ್ರೆ ಇಂದು 61,600ರೂ. ಆಗಿದೆ. 

ಮುಂಬೈನಲ್ಲಿಎಷ್ಟಿದೆ ದರ?
ಮುಂಬೈನಲ್ಲಿ ಚಿನ್ನದ ದರದಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 46,840ರೂ.ಇದ್ದು,ಇಂದು ಕೂಡ ಅಷ್ಟೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ47,840ರೂ.ಇತ್ತು, ಇಂದು ಕೂಡ ಯಾವುದೇ ಬದಲಾವಣೆಯಾಗಿಲ್ಲ. ಬೆಳ್ಳಿ ದರದಲ್ಲಿ ಮಾತ್ರ ಇಂದು 300ರೂ.ಇಳಿಕೆಯಾಗಿದೆ.  ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 61,900ರೂ.ಇತ್ತು.ಆದ್ರೆ ಇಂದು 61,600ರೂ. ಆಗಿದೆ. 

Bombay Stock Exchange: ಒಮಿಕ್ರಾನ್ ಭೀತಿಯಿಂದ ಹೊರಬಂದ ಷೇರುಮಾರುಕಟ್ಟೆ, ಮತ್ತೆ ಪುಟಿದ್ದೆದ್ದ ಸೆನ್ಸೆಕ್ಸ್

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ ಇಂದು ಚಿನ್ನದ ದರದಲ್ಲಿ ಅತ್ಯಲ್ಪ ಇಳಿಕೆ ಕಂಡುಬಂದಿದೆ.  22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು  45,140ರೂ.ಇದೆ. ನಿನ್ನೆ 45,220ರೂ.ಇತ್ತು.  24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 100ರೂ. ಇಳಿಕೆಯಾಗಿದೆ. ನಿನ್ನೆ 65,600 ರೂ.ಇತ್ತು, ಇಂದು 65,500ರೂ.ಇದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 65,600ರೂ.ಇದ್ದು, ಇಂದು 65,500ರೂ. ಆಗಿದೆ. ಅಂದ್ರೆ 100ರೂ. ಇಳಿಕೆಯಾಗಿದೆ.  

"

Follow Us:
Download App:
  • android
  • ios