Asianet Suvarna News Asianet Suvarna News

Bombay Stock Exchange: ಒಮಿಕ್ರಾನ್ ಭೀತಿಯಿಂದ ಹೊರಬಂದ ಷೇರುಮಾರುಕಟ್ಟೆ, ಮತ್ತೆ ಪುಟಿದ್ದೆದ್ದ ಸೆನ್ಸೆಕ್ಸ್

RBI ಇಂದು ಪ್ರಕಟಿಸಿದ ರೆಪೋ ಹಾಗೂ ರಿವರ್ಸ್ ರೆಪೋ ದರಗಳು ಯಥಾಸ್ಥಿತಿ ಕಾಯ್ದುಕೊಂಡಿರೋ ಕಾರಣ ಷೇರುಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. 

RBI policy meet outcome not effects stock market as committee kept rates unchanged anu
Author
Bangalore, First Published Dec 8, 2021, 4:27 PM IST

ಮುಂಬೈ (ಡಿ.8): ಕೊರೋನಾ ಆಘಾತದಿಂದ ಸಾಕಷ್ಟು ಹೊಡೆತ ತಿಂದಿದ್ದ ಮುಂಬೈ ಷೇರುಮಾರುಕಟ್ಟೆ(Bombay Stock exchange) ಸೆನ್ಸೆಕ್ಸ್ (Sensex) ಹಾಗೂ  ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ (Nifty) ಒಮಿಕ್ರಾನ್ (Omicron) ಭೀತಿಯಿಂದ ಸೋಮವಾರ (ಡಿ.6) ಭಾರೀ ಕುಸಿತ ಕಂಡಿತ್ತು.ಇದು ಹೂಡಿಕೆದಾರರಲ್ಲಿ(Investors) ಆತಂಕ ಸೃಷ್ಟಿಸಿತ್ತು. ಆದ್ರೆ ಕಳೆದ ಎರಡು ದಿನಗಳಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಎರಡರಲ್ಲೂ ಚೇತರಿಕೆ ಕಂಡುಬಂದಿದೆ.  ಬುಧವಾರ (ಡಿ.8) ಸೆನ್ಸೆಕ್ಸ್  ಸುಮಾರು 1000 ಅಂಕಗಳ ಜಿಗಿತದೊಂದಿಗೆ 58,647ಕ್ಕೆ ತಲುಪಿದೆ. ನಿನ್ನೆ (ಡಿ.7) ಕೂಡ ಸೆನ್ಸೆಕ್ಸ್ ನಲ್ಲಿ 887 ಅಂಕಗಳ ಏರಿಕೆ ಕಂಡುಬಂದಿತ್ತು. ಅದೇರೀತಿ ನಿಫ್ಟಿ ಕೂಡ 295 ಅಂಕಗಳ ಏರಿಕೆಯೊಂದಿಗೆ ಇಂದು 17,474ಕ್ಕೆ ಜಿಗಿದಿದೆ. ಇದು ಷೇರು ಮಾರುಕಟ್ಟೆಯಲ್ಲಿ(Share Market) ಹೊಸ ಚೈತನ್ಯ ಮೂಡಿಸಿದ್ದು, ಒಮಿಕ್ರಾನ್ ಭೀತಿ ಷೇರುಮಾರುಕಟ್ಟೆ ವಲಯದಲ್ಲಿ ತಗ್ಗಿದಂತೆ ಕಾಣಿಸುತ್ತಿದೆ. 

RBI ಹಣಕಾಸು ನೀತಿ ಪರಿಣಾಮ ಬೀರಿಲ್ಲ
ಇಂದು ಆರ್ ಬಿಐ ರೆಪೋ (Repo) ಹಾಗೂ ರಿವರ್ಸ್ ರೆಪೋ(Reverse repo) ದರ ಪ್ರಕಟಿಸೋ ಕಾರಣ ಷೇರುಮಾರುಕಟ್ಟೆಯಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆಯಾಗಬಹುದೆಂಬ ನಿರೀಕ್ಷೆಯಿತ್ತು. ಆದ್ರೆ ಆರ್ ಬಿಐ ರೆಪೋ ಹಾಗೂ ರಿವರ್ಸ್ ರೆಪೋ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರೋ ಕಾರಣ ಷೇರುಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. 

Repo Rate:ಸತತ 9ನೇ ಬಾರಿ ರೆಪೋ, ರಿವರ್ಸ್ ರೆಪೋ ದರ ಬದಲಾಯಿಸದ RBI

ಬ್ಲೂ ಚಿಪ್ ಸೂಚ್ಯಂಕದಲ್ಲಿ(blue-chip index) ಏರಿಕೆ
ಭಾರತೀಯ ಬ್ಲೂ ಚಿಪ್ ಸೂಚ್ಯಂಕದಲ್ಲಿ ಬುಧವಾರ ಏರಿಕೆ ಕಂಡುಬಂದಿದೆ. ಇದರಡಿಯಲ್ಲಿ ಬರೋ ಷೇರುಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಬ್ಲೂ ಚಿಪ್ ಸೂಚ್ಯಂಕವು ಜನಪ್ರಿಯ ಹಾಗೂ ಆರ್ಥಿಕವಾಗಿ ಸ್ಥಿರತೆ ಹೊಂದಿರೋ ಕಂಪನಿಗಳ ಷೇರುಗಳ ವ್ಯವಹಾರವನ್ನು ತಿಳಿಸೋ ಸೂಚ್ಯಂಕವಾಗಿದೆ. ಇಂದು ವಿಪ್ರೋ ಅತ್ಯಧಿಕ ಗಳಿಕೆ ಹೊಂದಿದ್ದು, ಒಎನ್ ಜಿಸಿ(ONGC), ಇನ್ಫೋಸಿಸ್(Infosys),ಎಚ್ ಸಿಎಲ್ ಟೆಕ್(HCL Tech) , ಐಸಿಐಸಿಐ ಬ್ಯಾಂಕ್(ICICI Bank), ಟೆಕ್ ಮಹೀಂದ್ರ(Tech Mahindra), ರಿಲಾಯನ್ಸ್ ಇಂಡಸ್ಟ್ರೀಸ್(Reliance Industries), ಭಾರತಿ ಏರ್ ಟೆಲ್ (Bharti Airtel) ಹಾಗೂ ಬಜಾಜ್ ಫೈನಾನ್ಸ್ (Bajaj Finance)ಕೂಡ ಉತ್ತಮ ಗಳಿಕೆ ದಾಖಲಿಸಿವೆ. 

ಒಮಿಕ್ರಾನ್ ಡೆಲ್ಟಾದಷ್ಟು ಪರಿಣಾಮ ಬೀರಲ್ಲ?
ಕೊರೋನಾ ರೂಪಾಂತರಿ ಡೆಲ್ಟಾ(Delta) ವೈರಸ್ ನಷ್ಟು ಹೊಸ ರೂಪಾಂತರಿ ಒಮಿಕ್ರಾನ್(Omicron) ಷೇರುಮಾರುಕಟ್ಟೆ ಮೇಲೆ ಪ್ರಭಾವ ಬೀರೋದಿಲ್ಲ ಎನ್ನೋದು ತಜ್ಞರ ಅಭಿಪ್ರಾಯವಾಗಿದೆ. ಷೇರುಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಕೂಡ ಇದಕ್ಕೆ ಪೂರಕವಾಗಿವೆ. ಇನ್ನು ಬ್ರಿಟಿಷ್ ಮೂಲದ ಔಷಧ ಕಂಪನಿ ಜಿಎಸ್ ಕೆ (GSK) ಕರೋನಾದ ಹೊಸ ರೂಪಾಂತರಿ ಒಮಿಕ್ರಾನ್ ವಿರುದ್ಧ ತಾನು ಸಿದ್ಧಪಡಿಸಿರೋ ಔಷಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮಂಗಳವಾರ ಮಾಹಿತಿ ನೀಡಿದೆ. ಫೈಜರ್ ಇಂಕ್(Pfizer Inc) ಹಾಗೂ ಅದರ ಪಾಲುದಾರ ಸಂಸ್ಥೆ ಬಯೋನ್ ಟೆಕ್(BioNTech) ಸಿದ್ಧಪಡಿಸಿರೋ ಕೋವಿಡ್ -19  ವ್ಯಾಕ್ಸಿನ್ ಒಮಿಕ್ರಾನ್ ಸೋಂಕಿನ ವಿರುದ್ಧ ಹೋರಾಡಬಲ್ಲದು ಎಂದು ಆಫ್ರಿಕನ್ ಅಧ್ಯಯನ ದೃಢಪಡಿಸಿದೆ. ಈ ಎರಡೂ ಬೆಳವಣಿಗೆಗಳು ಕೇವಲ ಭಾರತೀಯ ಷೇರುಮಾರುಕಟ್ಟೆ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚೈತನ್ಯ ಮೂಡಿಸಿತ್ತು. 

Billionaires Wealth: ಕೊರೋನಾ ಪಿಡುಗಿದ್ದರೂ ಧನಿಕರ ಸಂಪತ್ತು ದಾಖಲೆ ಏರಿಕೆ!

ಕಳೆದ ವಾರ ಕುಸಿತ ಕಂಡಿದ್ದ ಸೆನ್ಸೆಕ್ಸ್
ಕಳೆದ ವಾರಂತ್ಯದಲ್ಲಿ ಷೇರುಪೇಟೆ ಹಲವು ಏರಿಳಿತಗಳನ್ನು ದಾಖಲಿಸಿತ್ತು. ಅಲ್ಲದೆ, ಅತ್ಯಲ್ಪ ಗಳಿಗೆ ಕಂಡಿತ್ತು. ಕೋವಿಡ್ ರೂಪಾಂತರಿ ಒಮಿಕ್ರಾನ್ ಪ್ರಕರಣಗಳು ದೇಶದಲ್ಲಿ ಪತ್ತೆಯಾಗುತ್ತಿರೋದೇ ಇದಕ್ಕೆ ಕಾರಣ ಎಂದು ಹೇಳಲಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಕೂಡ ಸಾಕಷ್ಟು ಅನಿಶ್ಚಿತತೆ ಕಂಡುಬಂದಿತ್ತು. ತೈಲ ಬೆಲೆಗಳಲ್ಲಿ ಕುಸಿತವಾಗಿತ್ತು. ಈ ವಾರದ ಆರಂಭ ಕೂಡ ಅಷ್ಟೊಂದು ಚೈತನ್ಯದಾಯಕವಾಗಿರಲಿಲ್ಲ. ಇದು ಷೇರುಮಾರುಕಟ್ಟೆಯಲ್ಲಿ ಇನ್ನೊಮ್ಮೆ ಅನಿಶ್ಚಿತತೆ ಸೃಷ್ಟಿಯಾಗುತ್ತದೆ ಎಂಬ ಭಯವನ್ನು ಹೂಡಿಕೆದಾರರಲ್ಲಿ ಹುಟ್ಟು ಹಾಕಿತ್ತು ಕೂಡ.


 

Follow Us:
Download App:
  • android
  • ios