Asianet Suvarna News Asianet Suvarna News

ಚಿನ್ನ ದುಬಾರಿಯಾಗೋ ಮುನ್ನ ಖರೀದಿಸೋದು ಉತ್ತಮ, ಇಲ್ಲಿದೆ ಇಂದಿನ ದರ!

ಈಗಲೇ ಚಿನ್ನ ಖರೀದಿ ಮಾಡುವುದು ಉತ್ತಮ/ ದರ ಇನ್ನೂ ಏರಿಕೆಯಾಗುವ ಸಾಧ್ಯತೆ/ ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಎಷ್ಟು? ಆಭರಣ ಮಾರುಕಟ್ಟೆ ಹೇಗಿದೆ?

Gold Rate In Bengaluru 4th September 2020 in Kannada
Author
Bengaluru, First Published Sep 4, 2020, 7:04 PM IST

ಬೆಂಗಳೂರು(ಸೆ. 04) ಕೊರೋನಾತಂಕ ನಡುವೆ ಏರಿಳಿತ ಕಾಣುತ್ತಿರುವ ಚಿನ್ನದ ದರ ಗ್ರಾಹಕರ ತಲೆನೋವು ಮತ್ತಷ್ಟು ಹೆಚ್ಚಿಸಿದೆ. ಮಹಾರಿಯಿಂದ ಎಲ್ಲಾ ಉದ್ಯಮಗಳು ನೆಲ ಕಚ್ಚಿದ್ದು ಹೂಡಿಕೆದಾರರು ಚಿನ್ನ ಖರೀದಿಸಿ ಹಣ ಉಳಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಚಿನ್ನ ಬೇಡಿಕೆ ಕಡಿಮೆ ಇದ್ದರೂ ಏರಿಕೆ ಕಾಣುತ್ತಿದೆ.

ಹೌದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 30 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಬೆಲೆ 48,150 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ  30 ರೂಪಾಯಿ ಏರಿಕೆ ಕಂಡಿದ್ದು, 52,520 ರೂಪಾಯಿ ಆಗಿದೆ. 

ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಚಿನ್ನದ ಖಜಾನೆ

ಇನ್ನು ಬೆಳ್ಳಿ ದರದಲ್ಲೂ 1,450 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ 67,050 ರೂ ಆಗಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ: ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

Follow Us:
Download App:
  • android
  • ios