ಬೆಂಗಳೂರು(ಅ.19): ಕೊರೋನಾತಂಕ ನಡುವೆ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದ ಚಿನ್ನದ ದರ, ಅನ್‌ಲಾಕ್‌ ಆರಂಭವಾದಾಗಿನಿಂದ ಕೊಂಚ ಇಳಿಕೆ ಕಂಡಿತ್ತು. ಇದಾದ ಬಳಿಕ ಹಾವೇಣಿ ಆಟಟವಾಡುತ್ತಿದ್ದ ಹಳದಿ ಲೋಹ ಗ್ರಾಹಕರ ತಕೆ ಕೆಡಿಸಿತ್ತು. ಇಂದು ಇಳಿಕೆಯಾಗಬಹುದು, ನಾಳೆಯಾಗಬಹುದೆಂದು ಕಾದು ಕುಳಿತವರಿಗೆ ಚಿನ್ನದ ದರ ನಿರಾಸೆ ಮೂಡಿಸಿತ್ತು. ಲಾಕ್‌ಡೌನ್‌ನಿಂದ ಉದ್ಯಮಗಳು ನೆಲಕಚ್ಚಿದ ಪರಿಣಾಮ ಅನೇಕ ಮಮದಿ ಚಿನ್ನದಲ್ಲಿ ಹಣ ಹೂಡಿಕೆ ಮಾಡಿದ್ದೇ ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿತ್ತು. ಆದರೀಗ ಹಬ್ಬ್ದ ನಡುವೆ ಚಿನ್ನದ ದರ ದಾಖಲೆಯ ಇಳಿಕೆಯಾಗಿ ಖರೀದಿದಾರರನ್ನು ಕೊಂಚ ನಿರಾಳಗೊಳಿಸಿದೆ.

10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 960 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಬೆಲೆ 46,900 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 1,050 ರೂಪಾಯಿ ಇಳಿಕೆ ಕಂಡಿದ್ದು, 51,160 ರೂಪಾಯಿ ಆಗಿದೆ. 

ಇನ್ನು ಇತ್ತ ಬೆಳ್ಳಿ ದರ ಕೊಂಚ ಏರಿಕೆಯಾಗಿದೆ. ಒಂದು ಕೆ. ಜಿ ಬೆಳ್ಳಿ ದರ 900, ರೂ. ಏರಿಕೆಯಾಗಿ, 62,600 ರೂ ಆಗಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ