ಮುಂಬೈ ಹೊರತುಪಡಿಸಿ ದೇಶದ ಪ್ರಮುಖ ನಗರಗಳಲ್ಲಿ ಇಂದು (ಡಿ.13) ಕೂಡ ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದೆ. ಬೆಳ್ಳಿ ಬೆಲೆ ಮಾತ್ರ ಸ್ಥಿರತೆ ಕಾಯ್ದುಕೊಂಡಿದೆ.

ಬೆಂಗಳೂರು (ಡಿ.13): ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ(gold) ಬೆಲೆ ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದೆ. ಮುಂಬೈ(Mumbai) ಹೊರತುಪಡಿಸಿ ದೇಶದ ಪ್ರಮುಖ ನಗರಗಳಲ್ಲಿ ಇಂದು (ಡಿ.13) ಚಿನ್ನದ( Gold)ದರದಲ್ಲಿ (Rate)ಏರಿಕೆ ಕಂಡುಬಂದಿದೆ. ಇನ್ನು ನಿರಂತರ ಏರಿಳಿತ ದಾಖಲಿಸುತ್ತಿದ್ದ ಬೆಳ್ಳಿ(Silver) ದರದಲ್ಲಿ(Rate) ಇಂದು ಸ್ಥಿರತೆ ಕಂಡುಬಂದಿದೆ. ಚಿನ್ನ(gold) ಹಾಗೂ ಬೆಳ್ಳಿ(silver) ಖರೀದಿಗೆ ಅನೇಕ ಕಾರಣಗಳು ಸಿಗುತ್ತಲೇ ಇರುತ್ತವೆ. ಪ್ರೀತಿಪಾತ್ರರಿಗೆ ಉಡುಗೊರೆ ನೀಡಲು, ಮದುವೆ, ಗೃಹಪ್ರವೇಶ ಮುಂತಾದ ಶುಭಸಮಾರಂಭಗಳಿಗೆ ಬೆಳ್ಳಿ ಹಾಗೂ ಚಿನ್ನ ಖರೀದಿಸುತ್ತೇವೆ. ಹೀಗಾಗಿ ಚಿನ್ನ ಹಾಗೂ ಬೆಳ್ಳಿ ಮಾರುಕಟ್ಟೆಯಲ್ಲಿನ ಬದಲಾವಣೆಗಳನ್ನು ನಿರಂತರವಾಗಿ ಗಮನಿಸುತ್ತಲೇ ಇರುತ್ತೇವೆ. ಕಳೆದ ಕೆಲವು ಸಮಯದಿಂದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಸಾಕಷ್ಟು ಅಸ್ಥಿರತೆ ಕಂಡುಬಂದಿದೆ. ಪ್ರತಿದಿನ ಬೆಲೆಯಲ್ಲಿ ಏರಿಕೆ-ಇಳಿಕೆ ದಾಖಲಾಗುತ್ತಲೇ ಇದೆ. ಚಿನ್ನವಂತೂ ಈಗ ಪ್ರತಿದಿನ ಅತ್ಯಲ್ಪ ಏರಿಕೆ ದಾಖಲಿಸುತ್ತಲೇ ಇದೆ. ಇದು ಬಂಗಾರಪ್ರಿಯರ ನೆಮ್ಮದಿ ಕೆಡಿಸಿದೆ. ಇನ್ನು ಬೆಳ್ಳಿ ದರ ಕಳೆದ ಕೆಲವು ದಿನಗಳ ಹಿಂದೆ ಏರಿಕೆ ಕಂಡಿತ್ತು. ಆದ್ರೆ ನಂತರ ಇಳಿಕೆಯಾಗಿತ್ತು. ಒಮಿಕ್ರಾನ್(Omicron) ಭೀತಿ ಹೆಚ್ಚುತ್ತಿರೋದು ಒಂದು ಕಡೆಯಾದ್ರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಅಸ್ಥಿರತೆ, ದೇಶದ ಷೇರುಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೂಡ ಚಿನ್ನದ ದರದಲ್ಲಿ ಏರಿಕೆಯಾಗೋ ನಿರೀಕ್ಷೆಯಿದೆ. ಹಾಗಾದ್ರೆ ಬೆಂಗಳೂರು (Bangalore) ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದು (ಡಿ.13) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ(Bangalore) ಇಂದು ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ 10ರೂ. ಏರಿಕೆಯಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,110ರೂ. ಇದ್ದು,ಇಂದು 45,120ರೂ.ಗೆ ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,210ರೂ. ಇದ್ದು,ಇಂದು 49,220ರೂ. ಆಗಿದೆ. ಬೆಳ್ಳಿ ಬೆಲೆ ಇಂದು ಸ್ಥಿರವಾಗಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 61,200ರೂ. ಇತ್ತು. ಇಂದು ಕೂಡ ಅಷ್ಟೇ ಇದೆ.

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಬಂಪರ್!

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ(Delhi) ಚಿನ್ನದ ಬೆಲೆಯಲ್ಲಿ ಇಂದು ನಿನ್ನೆಗಿಂತ 10ರೂ. ಏರಿಕೆಯಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 47,260ರೂ. ಇತ್ತು. ಇಂದು 47,270ರೂ.ಗೆ ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಏರಿಕೆಯಾಗಿದೆ. ನಿನ್ನೆ 51, 560ರೂ. ಇದ್ದ ಚಿನ್ನದ ದರ ಇಂದು 51,570 ರೂ.ಗೆ ಏರಿಕೆಯಾಗಿದೆ. ಬೆಳ್ಳಿ ದರ ಇಂದು ಸ್ಥಿರವಾಗಿದ್ದು, 61,200ರೂ. ಇದೆ. 

ಮುಂಬೈನಲ್ಲಿ ಎಷ್ಟಿದೆ?
ಮುಂಬೈನಲ್ಲಿ(Mumbai) ಇಂದು ಚಿನ್ನದ ದರದಲ್ಲಿ10ರೂ. ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 46, 770ರೂ.ಇದ್ದು, ಇಂದು 46,780ರೂ.ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 47, 780ರೂ. ಇತ್ತು, ಇಂದು 47,770ರೂ. ಆಗಿದೆ. ಬೆಳ್ಳಿ ದರದಲ್ಲಿಇಂದು ಯಾವುದೇ ಬದಲಾವಣೆಯಾಗಿಲ್ಲ.. ಒಂದು ಕೆ.ಜಿ. ಬೆಳ್ಳಿಗೆ ಇಂದು 61,200ರೂ. ಇದೆ. 

Bank Deposit Insurance: ಬ್ಯಾಂಕ್‌ಗಳು ನಷ್ಟಕ್ಕೆ ಒಳಗಾದರೂ ಠೇವಣಿ ಹಣ ಸುರಕ್ಷಿತ: ಮೋದಿ

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ(Chennai) ಕೂಡ ಇಂದು ಚಿನ್ನದ ದರದಲ್ಲಿ 10ರೂ. ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,400ರೂ.ಇದೆ. ನಿನ್ನೆ 45,390ರೂ. ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಏರಿಕೆಯಾಗಿದೆ. ನಿನ್ನೆ 49,510ರೂ. ಇತ್ತು. ಆದ್ರೆ ಇಂದು 49, 520ರೂ. ಆಗಿದೆ. ಬೆಳ್ಳಿ ದರ ಸ್ಥಿರವಾಗಿದ್ದು, ಇಂದು 65,100ರೂ.ಇದೆ. 

"