ಮುಂಬೈ (ಜೂ.02): ಕೊರೋನಾ  ಲಾಕ್ ಡೌನ್ ಸಡಿಲಿಕೆ ನಡುವೆ ಶುಭ ಸುದ್ದಿಯೊಂದಿದೆ. ಚಿನ್ನದ ದರ ಇಳಿಕೆಯ ಹಾದಿ ಹಿಡಿದಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ನಿರಂತರ ಮೂರನೇ ದಿನ ಇಳಿಕೆ ದಾಖಲಿಸಿದೆ. 48 ಸಾವಿರ ರೂ. ತಲುಪಿ ದಾಖಲೆ ಬರೆದಿದ್ದ  10ಗ್ರಾಂ ಚಿನ್ನ ಕನಿಷ್ಠ  47, 137ಕ್ಕೆ ಬಂದು ವಹಿವಾಟು ಮಾಡಿದೆ.   ಏರುತ್ತಲೇ ಇದ್ದಚಿನ್ನ ಮಾರುಕಟ್ಟೆಯಲ್ಲಿ ಇಳಿಕೆ-ಏರಿಕೆ ದಾಖಲಿಸಿದೆ. 

ಚಿನ್ನದ ಜತೆಗೆ ಬೆಳ್ಳಿಯ ದರ ಸಹ ಏರಿಕೆ-ಇಳಿಕೆ ಹಾದಿಯಲ್ಲಿದೆ. ಶೇ. 0.21 ಇಳಿಕೆ ಕಂಡು 50 505ರೂ. ದಾಖಲಿಸಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಬೆಳ್ಳಿ ಶೇ. 25 ರಷ್ಟು ಏರಿಕೆ ದಾಖಲಿಸಿತ್ತು.

ಪೋಲೆಂಡ್ ಬಾವಿಯಲ್ಲಿ ಹಿಟ್ಲರ್ ನ ಟನ್ ಗಟ್ಟಲೇ ಚಿನ್ನ ಏನಾಯಿತು?

ಹಲವು ರಾಷ್ಟ್ರಗಳಲ್ಲಿ ಕೊರೋನಾ ಲಾಕ್ ಡೌನ್ ನಿಧಾನವಾಗಿ ಸಡಿಲಿಕೆ ಮಾಡಲಾಗಿದ್ದು ಆರ್ಥಿಕ ವ್ಯವಸ್ಥೆ ಪುನಶ್ಚೇತನಕ್ಕೆ ಚಾಲನೆ ಸಿಕ್ಕಿರುವುದು ದರ ಇಳಿಕೆಗೆ ಪ್ರಮುಖ ಕಾರಣ  ಎನ್ನಲಾಗಿದೆ.

 ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಹೂಡಿಕೆದಾರರು ಯಾವ ಕಡೆ ಮುಖ ಮಾಡುತ್ತಾರೆ ಎನ್ನುವುದು ಸಹ ಅಷ್ಟೆ ಪ್ರಮುಖ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾ ವಿರುದ್ಧ ಎಲ್ಲ ದೇಶಗಳು ಒಂದಾಗಿರುವುದು, ಅಮೆರಿಕದಲ್ಲಿನ ಸದ್ಯದ ಪರಿಸ್ಥಿತಿ, ಕೊರೋನಾ ಎಲ್ಲವೂ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತದೆ.