ನವದೆಹಲಿ(ಆ.27): ಕಣ್ಣಿಗೆ ಕಾಣದ ಆದರೆ ಇಡೀ ಜಗತ್ತಿನ ಮೇಲೆ ಅತಿ ಹೆಚ್ಚು ಪರಿಣಾಮ ಬೀರಿದ ಮಹಾಮಾರಿ ಕೊರೋನಾ ಚಿನ್ನ ಪ್ರಿಯರಿಗೂ ಭಾರೀ ನಿರಾಸೆಯುಂಟು ಮಾಡಿತ್ತು. ಲಾಕ್‌ಡೌನ್‌ನಿಂದಾಗಿ ಎಲ್ಲಾ ರೀತಿಯ ಉದ್ಯಮಗಳು ನಷ್ಟಕ್ಕೀಡಾದಾಗ ಜನರು ಚಿನ್ನಕ್ಕೆ ಹೂಡಿಕೆ ಮಾಡಲಾರಂಭಿಸಿದ್ದು, ಇದರ ಪರಿಣಾಮವಾಗಿ ಹಳದಿ ಲೋಹದ ದರ ನೋಡ ನೋಡುತ್ತಿದ್ದಂತೆಯೇ ಗಗನಕ್ಕೇರಿತ್ತು. ಇದು ಮದುವೆ ಕಾರ್ಯಗಳನ್ನಿಟ್ಟುಕೊಂಡವರಿಗೆ ಶಾಕ್ ಕೊಟ್ಟಿದ್ದರೆ, ಅನೇಕ ಮಂದಿ ಚಿನ್ನ ಖರೀದಿಸಲಾಗದೆ ಪರದಾಡಿದ್ದರು. ಆದರೀಗ ಕೊರೋನಾ ನಡುವೆಯೂ ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾಗಿದ್ದು, ನಿಂತ ನೀರಿನಂತಾಗಿದ್ದ ಉದ್ಯಮಗಳು ಮತ್ತೆ ಚೇತರಿಸಿಕೊಳ್ಳಲಾರಂಭಿಸಿವೆ. ಈ ನಡುವೆ ಚಿನ್ನದ ಬೆಲೆಯೂ ಇಳಿಯಲಾರಂಭಿಸಿದೆ.

ಬರೋಬ್ಬರಿ ಐದು ತಿಂಗಳ ನಂತರ ರಾಜಧಾನಿಯ ಹೋಟೆಲ್‌ಗಳು ಓಪನ್

ಹೌದು ಸತತ ಆರನೇ ದಿನ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಇಳಿಕೆ ಕಂಡಿದೆ. ಈ ಮೂಲಕ ಒಂದು ತಿಂಗಳ ಅವಧಿಯಲ್ಲಿ ಚಿನ್ನದ ಬೆಲೆ ಸುಮಾರು ಐದು ಸಾವಿರ ರೂ ಮೊತ್ತ ಇಳಿಕೆಯಾಗಿದೆ. ಬುಧವಾರ 22 ಕ್ಯಾರೆಟ್‌ 10 ಗ್ರಾಂಗೆ ಚಿನ್ನದ ಬೆಲೆಯಲ್ಲಿ 350 ರೂಪಾಯಿ ಇಳಿಕೆಯಾಗಿ, 48,510 ರೂಪಾಯಿ ಆಗಿದೆ. ಅತ್ತ 24 ಕ್ಯಾರೆಟ್​ 10 ಗ್ರಾಂ ಚಿನ್ನದ ದರ 380 ರೂಪಾಯಿ ಇಳಿಕೆಯಾಗುವ ಮೂಲಲಕ 52,910 ರೂಪಾಯಿ ಆಗಿದೆ. 

ಒಂದು ತಿಂಗಳಲ್ಲಿ ಐದು ಸಾವಿರ ರೂಪಾಯಿ ಇಳಿಕೆ ಕಂಡ ಚಿನ್ನ

ಕಳೆದ ಆರು ದಿನಗಳಿಂದ ಚಿನ್ನದ ಬೆಲೆ ಸುಮಾರು 2,100 ರೂಪಾಯಿ ಇಳಿಕೆ ಕಂಡಿದೆ. ಅಲ್ಲದೇ ಒಂದೇ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ 5000 ರೂ. ಇಳಿಕೆಯಾಗಿದೆ ಎಂಬುವುದು ಉಲ್ಲೇಖನೀಯ.

ಚಿನ್ನದ ದರ ಹೆಚ್ಚಿದರೂ ಆಭರಣ ಉದ್ದಿಮೆ ನಷ್ಟದಲ್ಲಿ!

ಸಾಮಾನ್ಯವಾಗಿ ಚಿನ್ನದ ದರ ಏರಿದಾಗಲೆಲ್ಲ ಖುಷಿಪಡುತ್ತಿದ್ದ ಚಿನ್ನಾಭರಣ ವ್ಯಾಪಾರಿಗಳು ಕೆಲ ತಿಂಗಳಿನಿಂದ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದರೂ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಕಾರಣ, ಲಾಕ್‌ಡೌನ್‌ ಹಾಗೂ ಆರ್ಥಿಕ ಹಿಂಜರಿಕೆಯಿಂದಾಗಿ ಚಿನ್ನಕ್ಕೆ ಬೇಡಿಕೆ ದೊಡ್ಡ ಪ್ರಮಾಣದಲ್ಲಿ ತಗ್ಗಿದೆ.

ದೇಶದ ಅತ್ಯಂತ ಪ್ರತಿಷ್ಠಿತ ಚಿನ್ನಾಭರಣ ಮಾರುಕಟ್ಟೆಯಾದ ಮುಂಬೈನ ಜವೇರಿ ಬಜಾರ್‌ನಲ್ಲಿ ಇನ್ನೂ ಅನೇಕ ಚಿನ್ನಾಭರಣ ಅಂಗಡಿಗಳು ಲಾಕ್‌ಡೌನ್‌ ನಂತರ ತೆರೆದೇ ಇಲ್ಲ. ಚಿನ್ನಾಭರಣ ತಯಾರಿಸುವ ಕುಶಲಕರ್ಮಿಗಳು ಕೂಡ ಹಳ್ಳಿಗಳಿಗೆ ವಲಸೆ ಹೋಗಿದ್ದಾರೆ. ತೆರೆದಿರುವ ಅಂಗಡಿಗಳಿಗೂ ಗ್ರಾಹಕರು ಬಹಳ ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕಳೆದ 40-50 ವರ್ಷಗಳಿಂದ ಇಷ್ಟುನೀರಸ ಹಾಗೂ ನಷ್ಟದ ವ್ಯಾಪಾರವನ್ನು ನಾವು ನೋಡಿಲ್ಲ ಎಂದು ಚಿನ್ನಾಭರಣ ವ್ಯಾಪಾರಿಗಳು ಹೇಳುತ್ತಿದ್ದಾರೆ.

ದೇಗುಲದಲ್ಲಿ ಅಪಾರ ಚಿನ್ನಾಭರಣ ಕದ್ದೋಡಿದ ಕಳ್ಳರು

ಲಾಕ್‌ಡೌನ್‌ನಿಂದಾಗಿ ಅನೇಕರು ಆರ್ಥಿಕ ನಷ್ಟಅನುಭವಿಸಿ ತಮ್ಮಲ್ಲಿರುವ ಚಿನ್ನವನ್ನೇ ಅಡ ಇಡುತ್ತಿದ್ದಾರೆ. ಇನ್ನು ಅನೇಕರು ಚಿನ್ನದ ಬೆಲೆ ದುಬಾರಿಯಾಗಿರುವುದರಿಂದ ಮತ್ತು ಕೈಯಲ್ಲಿ ಸಾಕಷ್ಟುಹಣವಿಲ್ಲದೆ ಇರುವುದರಿಂದ ಮದುವೆ ಮತ್ತು ಶುಭ ಸಮಾರಂಭಗಳಿಗೆ ಚಿನ್ನ ಕೊಳ್ಳುವುದನ್ನು ಕಡಿಮೆ ಮಾಡುತ್ತಿದ್ದಾರೆ. ಇದೇ ವೇಳೆ, ಕೊರೋನಾ ವೈರಸ್‌ ಭೀತಿಯಿಂದ ಜನರು ಚಿನ್ನಾಭರಣ ಮಳಿಗೆಗಳಿಗೆ ಬರುವುದು ಕೂಡ ಕಡಿಮೆಯಾಗುತ್ತಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವ ಹೊಸ ತಲೆಮಾರಿನವರು ಹೆಚ್ಚಾಗಿ ಭೌತಿಕ ಚಿನ್ನ ಕೊಳ್ಳದೆ ಡಿಜಿಟಲ್‌ ಚಿನ್ನ ಕೊಳ್ಳುತ್ತಿದ್ದಾರೆ. ಇವೆಲ್ಲಾ ಕಾರಣಗಳಿಂದಾಗಿ ಚಿನ್ನಕ್ಕೆ ಬೇಡಿಕೆಯಿಲ್ಲದಂತಾಗಿದೆ.

ಮತ್ತೆ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

ಮತ್ತೆ ಎರಡು ಸಾವಿರ ರೂ ನೋಟು ಬ್ಯಾನ್?: ಸೆಂಟ್ರಲ್ ಬ್ಯಾಂಕ್ ಬಿಚ್ಚಿಟ್ಟ ಅಚ್ಚರಿಯ ಸಂಗತಿ!

"