Asianet Suvarna News Asianet Suvarna News

ಭಲೇ ಭಲೇ: ಕಡಿಮೆಯಾಯ್ತು ಚಿನ್ನ, ಬೆಳ್ಳಿ ಬೆಲೆ!

ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದ ಚಿನ್ನದ ದರ ಕುಸಿತ| ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆ ಶೇ.0.7ರಷ್ಟು ಇಳಿಕೆ| ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 37,997 ರೂ.| ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಯಲ್ಲಿ ಶೇ.1ರಷ್ಟು ಇಳಿಕೆ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಒಂದು ಔನ್ಸ್’ಗೆ 1,467.44  ಡಾಲರ್|

Gold prices suffer big fall Silver Price Move Lower
Author
Bengaluru, First Published Nov 15, 2019, 5:22 PM IST

ನವದೆಹಲಿ(ನ.15): ನವೆಂಬರ್ ಆರಂಭದಿಂದಲೇ ಕುಸಿತದ ಹಾದಿ ಹಿಡಿದಿರುವ ಚಿನ್ನ, ಬೆಳ್ಳಿ ದರ ದೇಶೀಯ ಮಾರುಕಟ್ಟೆಯಲ್ಲಿ ಇಂದೂ ಕೂಡ ಕೊಂಚ ಇಳಿಕೆ ಕಂಡಿದೆ. ಈ ಮೂಲಕ ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ.

ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆ ಶೇ.0.7ರಷ್ಟು ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 37,997 ರೂ. ಆಗಿದೆ. ಈ ಮೂಲಕ ಕಳೆದ ಮೂರು ದಿನಗಳಿಂದ ಏರಿಕೆಯತ್ತ ಮುಖ ಮಾಡಿದ್ದ ಚಿನ್ನದ ದರ ಕೊಂಚ ಇಳಿಕೆ ಕಂಡಿದೆ.

ಒಟ್ಟು 2,300 ರೂ. ಕುಸಿದ ಚಿನ್ನದ ದರ: ಚಿನ್ನದಷ್ಟೇ ಚೆಂದ ವಹಿವಾಟು!

ಅದರಂತೆ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಶೇ.1ರಷ್ಟು ದರ ಇಳಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 44,267 ರೂ. ಆಗಿದೆ.

ಸೆಪ್ಟೆಂಬರ್ ತಿಂಗಳಿನ ಚಿನ್ನದ ಬೆಲೆಗೆ ಹೋಲಿಸಿದರೆ ಒಟ್ಟು 2,000 ರೂ. ಇಳಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ದರ ಮತ್ತಷ್ಟು ಇಳಿಕೆ ಕಾಣುವ ಸಂಭವವಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ನವದೆಹಲಿಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರದಲ್ಲಿ 149 ರೂ. ಇಳಿದಿದ್ದು, 38,875 ರೂ. ಆಗಿದೆ. ಅದರಂತೆ  ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 473 ರೂ. ಇಳಿಕೆ ಕಂಡುಬಂದಿದ್ದು, ಒಟ್ಟು 45,375 ರೂ. ಆಗಿದೆ.  

ಕುಸಿದ ಚಿನ್ನದ ದರ: ನವೆಂಬರ್‌ ಆಗಲಿದೆಯೇ ಶುಭ ಸುದ್ದಿಗಳ ಆಗರ?
ಇನ್ನುಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಶೇ.0.24 ರಷ್ಟು ಇಳಿಕೆಯಾಗಿದೆ. ಚಿನ್ನದ ದರ ಒಂದು ಔನ್ಸ್’ಗೆ 1,467.44  ಡಾಲರ್ ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲದಲಿ ಚಿನ್ನದ ಬೆಲೆಯಲ್ಲೂ ಇಳಿಕೆಯಾಗಿದ್ದು, ಶೇ.0.24ರಷ್ಟು ಇಳಿಕೆ ಕಂಡಿದೆ. ಒಂದು ಔನ್ಸ್ ಚಿನ್ನದ ಬೆಲೆ 1,455.55 ಡಾಲರ್ ಆಗಿದೆ.

Follow Us:
Download App:
  • android
  • ios