ನವದೆಹಲಿ(ಏ.18): ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಈ ವರ್ಷದ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ. 

ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನ ಶೇ. 0.1ರಷ್ಟು  ಕುಸಿತ ಕಂಡಿದ್ದು, ಪ್ರತಿ ಔನ್ಸ್ ಗೆ 1,271.97 ಡಾಲರ್ ನಿಗದಿಯಾಗಿದೆ. ಜಿಎಂಟಿ 0345 ರಷ್ಟು ಕುಸಿದಿದ್ದು, ಇದು ಈ ವರ್ಷದಲ್ಲೇ ಅತ್ಯಂತ ಕನಿಷ್ಠ ದರ ಎಂದು ಹೇಳಲಾಗಿದೆ.

ಇದುವರೆಗೂ ಶೇ.1.4ರಷ್ಟು ದರ ಕಡಿತ ಕಂಡಿರುವ ಚಿನ್ನ, ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯುವ ಲಕ್ಷಣ ಕಂಡು ಬರುತ್ತಿದೆ.

ಅದರಂತೆ ಭಾರತೀಯ ಮಾರುಕಟ್ಟೆಯಲ್ಲಿಯೂ ಚಿನ್ನ, ಬೆಳ್ಳಿ ದರದಲ್ಲಿ ತುಸು ಇಳಿಕೆ ಕಂಡು ಬಂದಿದ್ದು, 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 32,530 ರೂ ಆಗಿದೆ.

ಅದರಂತೆ ಒಂದು ಕೆಜಿ ಬೆಳ್ಳಿ ಬೆಲೆ 37,246 ರೂ. ಇದೆ.