ನವದೆಹಲಿ(ಮಾ.15): ಸ್ಥಳೀಯ ವರ್ತಕರಿಂದ  ಚಿನ್ನಕ್ಕೆ ಬೇಡಿಕೆ ಕುಸಿದ ಪರಿಣಾಮವಾಗಿ ಚಿನಿವಾರ ಪೇಟೆ ವಹಿವಾಟಿನಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ.

ಡಾಲರ್ ಮೌಲ್ಯ ಪ್ರಬಲವಾದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಗಮನಾರ್ಹ ಇಳಿಮುಖವಾಗಿದೆ. ಡಾಲರ್ ಮೌಲ್ಯ ಏರಿಕೆಯ ಪರಿಣಾಮ ಕಳೆದ ಎರಡು ವಾರಗಳಿಗೆ ಹೋಲಿಸಿದರೆ ಇಂದಿನ ಚಿನ್ನದ ಬೆಲೆ ಅತಿ ಕಡಿಮೆ ದಾಖಲಾಗಿದೆ.

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) 10 ಗ್ರಾಂ ಚಿನ್ನದ ಬೆಲೆ ಕುಸಿತ ಕಂಡಿದ್ದು 33,370  ರೂ. ಆಗಿದೆ. ಅದೇ ರೀತಿ ನಲ್ಲಿ 1 ಕೆಜಿ ಬೆಳ್ಳಿ ಬೆಲೆ 410 ರೂ. ಕುಸಿತ ಕಂಡಿದ್ದು, 39,300  ರೂ. ಆಗಿದೆ. 

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ:

22 ಕ್ಯಾರೆಟ್-30,210 ರೂ.(10 ಗ್ರಾಂ) 
24 ಕ್ಯಾರೆಟ್‍-32,310 ರೂ.(10 ಗ್ರಾಂ) 

22 ಕ್ಯಾರೆಟ್‍-3,021 ರೂ.(1 ಗ್ರಾಂ)

24 ಕ್ಯಾರೆಟ್‍- 3,231 ರೂ.(ಗ್ರಾಂ)

ಬೆಳ್ಳಿ ಬೆಲೆ-43,300 ರೂ.(1 ಕೆಜಿ)