Asianet Suvarna News Asianet Suvarna News

3-5 ವರ್ಷದಲ್ಲಿ ದುಪ್ಪಟ್ಟಾಗಲಿದೆ ಚಿನ್ನದ ದರ..!

ಚಿನ್ನದ ಮೇಲಿನ ಹೂಡಿಗೆ ವ್ಯರ್ಥವಾಗುವುದಿಲ್ಲ. ಏರಿಳಿತಗಳನ್ನು ಕಾಣುವ ಚಿನ್ನದ ಬೆಲೆಯಲ್ಲಿ ಮುಂದಿನ 3-5 ವರ್ಷದಲ್ಲಿ ದುಪ್ಪಟ್ಟು ಏರಿಕೆಯಾಗಲಿದೆ ಎಂದು ತಜ್ಞರು ಊಹಿಸಿದ್ದಾರೆ. ಅಂದ ಹಾಗೆ 2016ರ ಇವರ ಊಹನೆ ನಿಜವಾಗಿದೆ.

Gold prices could double in 3 to 5 years says fund manager who predicted record rise in 2016 dpl
Author
Bangalore, First Published Aug 3, 2021, 1:09 PM IST

ಚಿನ್ನದಲ್ಲಿ ಹೂಡಿಕೆ ಮಾಡುವವರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಮುಂದಿನ 3-5 ವರ್ಷದಲ್ಲಿ ಚಿನ್ನದ ಬೆಲೆ ಎರಡು ಪಟ್ಟು ಹೆಚ್ಚಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಹಿಂದಿನಿಂದಲೂ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚೇ ಇದೆ. ವರ್ಷಗಳ ಅಂತರದಲ್ಲಿ ಏರಿಳಿಕೆ ಕಾಣುವ ಚಿನ್ನ ಕಳೆದ ಹಲವು ವರ್ಷಗಳಲ್ಲಿ ಭಾರೀ ಏರಿಕೆಯನ್ನು ಕಂಡಿದೆ. 10 ವರ್ಷಗಳ ಹಿಂದೆ 8 ಗ್ರಾಂ ಚಿನ್ನದ ಬೆಲೆ 30 ರಿಂದ 35 ಸಾವಿರವಿದ್ದರೆ ಇಂದು 45 ಸಾವಿರಕ್ಕೂ ಹೆಚ್ಚಿದೆ. ಚಿನ್ನ ಖರೀದಿಯೂ, ಚಿನ್ನದ ಬೆಲೆಯೂ ಏರಿಕೆಯಾಗುತ್ತಲೇ ಇದೆ.

ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಚಿನ್ನದ ದರವು 28 ಗ್ರಾಂಗೆ 2,22,847 ರೂ ನಿಂದ 371,610 ರೂಪಾಯಿಗೆ ಏರಿಕೆಯಾಗಬಹುದು ಎಂಬ ನಿಲುವಿಗೆ ತಾನು ಬದ್ಧ ಎಂದು ಫಂಡ್ ಮ್ಯಾನೇಜರ್ ಹೇಳಿದೆ. ಕೇಂದ್ರೀಯ ಬ್ಯಾಂಕುಗಳ ಕುರಿತು ಆಸಕ್ತಿ ಕಳೆದುಕೊಂಡಿರುವ  ಹೂಡಿಕೆದಾರರು ಚಿನ್ನವು ಹೊಸ ಗರಿಷ್ಠ ಬೆಲೆಗೆ ಏರಿಕೆಯಾಗಲು ಕಾರಣವಾಗಿದ್ದಾರೆ ಎಂದು ಚಿನ್ನದ ದಾಖಲೆಯ ಏರಿಕೆಯಲ್ಲಿ ಕಳೆದ ವರ್ಷ ಮುನ್ಸೂಚನೆ ನೀಡಿದ ಫಂಡ್ ಮ್ಯಾನೇಜರ್ ಹೇಳಿದ್ದಾರೆ.

ಚಿನ್ನ ಪ್ರಿಯರಿಗೆ ಏಕಾಏಕಿ ಶಾಕ್: 10 ದಿನದ ಬಳಿಕ ಏರಿದ ದರ!

ಅತಿ-ಸಡಿಲವಾದ ವಿತ್ತೀಯ ಮತ್ತು ಹಣಕಾಸಿನ ನೀತಿಗಳಿಂದ ಉಂಟಾದ ದೀರ್ಘಕಾಲದ ಹಾನಿಯ ಬಗ್ಗೆ ವ್ಯಾಪಕ ಅರಿವು ಇಲ್ಲ ಎಂದು 250 ಮಿಲಿಯನ್ ಡಾಲರ್ ಕ್ವಾಡ್ರಿಗಾ ಇಗ್ನಿಯೋ ಫಂಡ್ ಮ್ಯಾನೇಜ್ ಮಾಡುವ ಡಿಯೆಗೋ ಪೆರಿಲ್ಲಾ ಹೇಳಿದೆ. ಕಡಿಮೆ ಬಡ್ಡಿ ದರಗಳು ಅತ್ಯಧಿಕ ವೇಗದ ಪ್ರೈಸ್‌ ಹೈಕ್‌ಗಳನ್ನು ಸೃಷ್ಟಿಸಿದೆ. ಈ ರ್ಯಾಪಿಡ್ ಹೈಕ್‌ಗಳನ್ನು ಮತ್ತೆ ಸಾಮಾನ್ಯ ಸ್ಥಿತಿಗೆ ತರಲು ಕೇಂದ್ರೀಯ ಬ್ಯಾಂಕ್‌ಗಳಿಗೆ ಕಷ್ಟವಾಗಲಿದೆ ಎಂದು ಹೇಳಿದ್ದಾರೆ.

ಚಿನ್ನ ಪ್ರಿಯರಿಗೆ ಸುಗ್ಗಿ, ಬಂಗಾರ ದರ ಭಾರೀ ಇಳಿಕೆ

ಮುಂದಿನಗ 5 ವರ್ಷದಲ್ಲಿ ಚಿನ್ನವು ದಾಖಲೆಯ ಬೆಲೆ ಏರಿಕೆಯನ್ನು ಕಾಣಲಿದೆ ಎಂದು 2016ರಲ್ಲಿ ಮ್ಯಾಡ್ರಿಡ್  ಮೂಲದ ಪೆರಿಲ್ಲಾ ಹೇಳಿತ್ತು. ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಚಿನ್ನವು 28 ಗ್ರಾಂಗೆ 2,22,847 ರೂ ನಿಂದ 371,610 ರೂಪಾಯಿಗೆ ಏರಿಕೆಯಾಗಬಹುದು ಎಂಬ ನಿಲುವಿಗೆ ತಾನು ಬದ್ಧನಾಗಿದ್ದೇನೆ ಎಂದು ಫಂಡ್ ಮ್ಯಾನೇಜರ್ ಹೇಳಿದ್ದಾರೆ. ಸಾಂಕ್ರಾಮಿಕ ರೋಗವು ಜಾಗತಿಕ ಆರ್ಥಿಕತೆಯ ಮೇಲೆ ನಷ್ಟ ಉಂಟುಮಾಡಿದ್ದರಿಂದ ಆಗಸ್ಟ್ 2020 ರಲ್ಲಿ ಸಾರ್ವಕಾಲಿಕ ಗರಿಷ್ಠ 1,54,115 ಅನ್ನು ತಲುಪಿದ್ದು ಕೆಲವು ವಾರಗಳಲ್ಲಿ 1,33,659 ರೂಪಾಯಿಯಷ್ಟು ವಹಿವಾಟು ನಡೆಸಿತ್ತು.

Follow Us:
Download App:
  • android
  • ios