ಚಿನ್ನ ಪ್ರಿಯರಿಗೆ ಸುಗ್ಗಿ, ಬಂಗಾರ ದರ ಭಾರೀ ಇಳಿಕೆ!
ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಜೂನ್ 19 ಗೋಲ್ಡ್ ರೇಟ್
ಹಳದಿ ಲೋಹ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ? ಅದರಲ್ಲೂ ಭಾರತೀಯ ಹೆಣ್ಮಕ್ಕಳಿಗೆ ಈ ಚಿನ್ನ ಅಂದ್ರೆ ವಿಶೇಷ ಪ್ರೀತಿ
ಅಲಂಕಾರದ ದೃಷ್ಟಿಯಿಂದ ಮಾತ್ರವಲ್ಲ, ಭವಿಷ್ಯದ ದೃಷ್ಟಿಯಿಂದಲೂ ಈ ಚಿನ್ನವನ್ನು ಖರೀದಿಸುವವರು ಹಲವರಿದ್ದಾರೆ.
ಕಷ್ಟ ಕಾಲದಲ್ಲಿ ಇಂದು ಖರೀದಿಸಿದ ಚಿನ್ನ ಸಹಾಯಕ್ಕೆ ಬೀಳಬಹುದೆನ್ನುವ ದೂರಾಲೋಚನೆಯಿಂದ ಅನೇಕರು ಚಿನ್ನವನ್ನು ಖರೀದಿಸುತ್ತಾರೆ.
ಆದರೆ ಯಾವಾಗ ಕೊರೋನಾ ವಕ್ರದೃಷ್ಟಿ ದೇಶದ ಮೇಲೆ ಬಿತ್ತೋ ಅಂದಿನಿಂದ ಚಿನ್ನ ಖರೀದಿ ಕೊಂಚ ಕಷ್ಟವಾಗಿದೆ.
ಹೌದು ಒಂದೆಡೆ ಕೊರೋನಾ ನಿಯಂತ್ರಿಸಲು ಹೇರಿದ ಲಾಖ್‌ಡೌನ್ ಆದರೆ, ಮತ್ತೊಂದೆಡೆ ದಿನ ಬೆಳಗಾಗುತ್ತಿದ್ದಂತೆಯೇ ಏರಿಕೆಯಾಗುತ್ತಿದ್ದ ದರ. ಇವೆರಡೂ ಚಿನ್ನ ಖರೀದಿಗೆ ಬ್ರೇಕ್ ಹಾಕಿದ್ದವು.
ಮೊದಲ ಅಲೆ ವೇಳೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ದರ ಈ ವರ್ಷದ ಆರಂಭದಲ್ಲಿ ಕೊಂಚ ಇಳಿದಿತ್ತು. ಆದರೆ ಅಷ್ಟರಲ್ಲೇ ಎರಡನೇ ಅಲೆ ದಾಳಿ ಇಟ್ಟಿದ್ದು, ಇಳಿಕೆಯಾದ ಚಿನ್ನದ ದರ ಮತ್ತೆ ಏರಿಕೆ ಹಾದಿ ತುಳಿದಿತ್ತು.
ಆದರೀಗ ಎರಡನೇ ಅಲೆಯ ಅಬ್ಬರವೂ ಇಳಿಯಲಾರಂಭಿಸಿದೆ. ಹೀಗಿರುವಾಗ ಚಿನ್ನವೂ ಕಳೆದ ಹತ್ತು ದಿನಗಳಿಂದ ಇಳಿಕೆಯಾಗುತ್ತಿದ್ದು ಗ್ರಾಹಕರಿಗೆ ಕೊಂಚ ಸಂತಸ ಕೊಟ್ಟಿದೆ.
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 250 ರೂ. ಇಳಿಕೆಯಾಗಿ ದರ 44,000 ರೂಪಾಯಿ ಆಗಿದೆ
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 270ರೂ. ಇಳಿಕೆಯಾಗಿ 48,000ರೂಪಾಯಿ ಆಗಿದೆ.
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 67,600ರೂ ಆಗಿದೆ.
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ.