ಪ್ರೇಮಿಗಳ ಹಬ್ಬದಂದು ಚಾಕೋಲೇಟ್, ಗಿಫ್ಟ್ ಗೆ ಬೇಡಿಕೆ ಇರೋದು ನಮಗೆಲ್ಲ ಗೊತ್ತಿರೋ ವಿಷ್ಯ. ಆದ್ರೆ ಈ ದಿನ ಇನ್ನೂ ಒಂದು ವಸ್ತುವಿನ ಬೆಲೆ ಗಗನಕ್ಕೇರುತ್ತದೆ. ಸತತ ಆರು ವರ್ಷಗಳಿಂದ ಬೆಲೆ ಏರಿಕೆ ಆಗ್ತಾನೆ ಇದೆ.
ಯಾವುದೇ ಹಬ್ಬ ಬರಲಿ, ಅದಕ್ಕೆ ಅಗತ್ಯವಿರುವ ವಸ್ತುಗಳು ಮಾರುಕಟ್ಟೆಯಲ್ಲಿ ಕಾಣಸಿಗ್ತಿರುತ್ತವೆ. ರಾಖಿ ಹಬ್ಬದಲ್ಲಿ ರಾಖಿ, ದೀಪಾವಳಿ ಹಬ್ಬದಲ್ಲಿ ದೀಪ, ಹೂ, ಹಣ್ಣು ಹೀಗೆ ಮಾರುಕಟ್ಟೆ ಸದಾ ಕಂಗೊಳಿಸುತ್ತಿರುತ್ತದೆ. ಭಾರತದಲ್ಲಿ ಕರ್ವಾ ಚೌತ್ ಕೂಡ ಪ್ರಸಿದ್ಧಿ ಪಡೆದಿದೆ. ಅದಕ್ಕೆ ಸಂಬಂಧಿಸಿದ ವಸ್ತುಗಳನ್ನೂ ನೀವು ಮಾರುಕಟ್ಟೆಯಲ್ಲಿ ಕಾಣಬಹುದು. ಅದ್ರ ಬೆಲೆ ಕೂಡ ಗಗನಕ್ಕೇರಿರುತ್ತವೆ. ಸಂಗಾತಿಗೆ ಈ ದಿನ ಉಡುಗೊರೆ ನೀಡುವ ಪದ್ಧತಿ ಇದೆ. ಇದೇ ರೀತಿ ವ್ಯಾಲೆಂಟೈನ್ ದಿನ ಕೂಡ. ವ್ಯಾಲೆಂಟೈನ್ಸ್ ಡೇ ವಿದೇಶಿ ಹಬ್ಬ ಎಂದು ನಂಬಲಾಗಿದ್ದರೂ, ಭಾರತದಲ್ಲಿ ಅದನ್ನು ಆಚರಿಸುವವರ ಸಂಖ್ಯೆ ಸಾಕಷ್ಟಿದೆ. ಈ ದಿನ ಉಡುಗೊರೆ ವಸ್ತುಗಳು, ಚಾಕೋಲೇಟ್, ಸ್ವೀಟ್ಸ್ ಸೇರಿದಂತೆ ಅನೇಕ ವಸ್ತುಗಳಿಗೆ ವಿಶೇಷ ಆಫರ್ ನೀಡಿ ಮಾರಾಟ ಮಾಡಲಾಗ್ತಿರುತ್ತದೆ. ಆದ್ರೆ ಪ್ರೇಮಿಗಳ ದಿನದಂದು ಒಂದೇ ಒಂದು ವಸ್ತು ದುಬಾರಿಯಾಗುತ್ತದೆ. ಅದು ಬಂಗಾರ. ಕಳೆದ 6 ವರ್ಷಗಳಲ್ಲಿ ಪ್ರೇಮಿಗಳ ದಿನದಂದು ಬಂಗಾರದ ಬೆಲೆ ಸತತವಾಗಿ ಏರಿಕೆ ಆಗ್ತಿದೆ. ಸಾಮಾನ್ಯವಾಗಿ ವ್ಯಾಲೆಂಟೈನ್ಸ್ ಡೇ ದಿನ ಬಂಗಾರ ಖರೀದಿ ಮಾಡುವವರಿಗಿಂತ ಕರ್ವಾ ಚೌತ್ ದಿನ ಬಂಗಾರವನ್ನು ಹೆಚ್ಚು ಖರೀದಿ ಮಾಡ್ತಾರೆ ಎನ್ನುವ ನಂಬಿಕೆ ಇದೆ. ಅದೇನೇ ಇರಲಿ, ಕರ್ವಾ ಚೌತ್ ಗೆ ಹೋಲಿಕೆ ಮಾಡಿದ್ರೆ ವ್ಯಾಲೆಂಟೈನ್ಸ್ ಡೇ ದಿನ ಬಂಗಾರದ ಬೆಲೆ ಹೆಚ್ಚಾಗ್ತಿರೋದು ಮಾತ್ರ ಅಚ್ಚರಿ ಮೂಡಿಸಿದೆ.
ಕರ್ವಾ ಚೌತ್ (Karva Chauth) ಅಕ್ಟೋಬರ್-ನವೆಂಬರ್‌ನಲ್ಲಿ ಬಂದರೆ, ಪ್ರೇಮಿಗಳ ದಿನವನ್ನು ಫೆಬ್ರವರಿಯಲ್ಲಿ ಆಚರಿಸಲಾಗುತ್ತದೆ. ದಿನ, ತಿಂಗಳು ಯಾವುದೇ ಇರಲಿ, ಆರು ವರ್ಷಗಳಿಂದ ವ್ಯಾಲೆಂಟೈನ್ಸ್ ಡೇ (Valentines Day) ದಿನ ಮಾತ್ರ ಬಂಗಾರದ ಬೆಲೆ ಏರುತ್ತಿದೆ. ಯಾವತ್ತೂ ಬೆಲೆ ಇಳಿಕೆ ಕಂಡಿಲ್ಲ. ಆದ್ರೆ ಆರು ವರ್ಷಗಳಿಂದ ಕರ್ವಾ ಚೌತ್ ನಲ್ಲಿ ಒಮ್ಮೆ ಬಂಗಾರ (Gold) ದ ಬೆಲೆ ಏರಿದೆ. ಮೂರು ಬಾರಿ ಬೆಲೆ ಇಳಿಕೆ ಕಂಡಿದೆ. ಮತ್ತೆರಡು ಬಾರಿ ರಜೆ ಇತ್ತು ಎಂಬುದು ವಿಶೇಷ.
ಅಬ್ಬಬ್ಬಾ..ಒಂದು ಗಂಟೆಗೆ ಬರೋಬ್ಬರಿ 3 ಕೋಟಿ ಗಳಿಸೋ ವ್ಯಕ್ತಿ, ಅಂಬಾನಿ, ಅದಾನಿ ಅಲ್ಲ..ಮತ್ಯಾರು?
ಆರು ವರ್ಷಗಳಿಂದ ಪ್ರೇಮಿಗಳ ದಿನದಂದು ಏರಿಕೆಯಾಗ್ತಿದೆ ಬಂಗಾರದ ಬೆಲೆ : 2018 ಫೆಬ್ರವರಿ 14 ರಂದು ಚಿನ್ನದ ಬೆಲೆ ಶೇಕಡಾ 1.34 ರಷ್ಟು ಹೆಚ್ಚಾಗಿತ್ತು. 2019 ರಲ್ಲಿ ಚಿನ್ನದ ಬೆಲೆ ಶೇಕಡಾ 0.21 ರಷ್ಟು ಏರಿಕೆ ಕಂಡಿತ್ತು. 2020 ರಲ್ಲಿ ಪ್ರೇಮಿಗಳ ದಿನದಂದು ಚಿನ್ನದ ಬೆಲೆ ಶೇಕಡಾ 0.79 ರಷ್ಟು ಹೆಚ್ಚಳವಾಗಿತ್ತು. 2021 ರಂದು ಭಾನುವಾರ ಆಗಿರುವ ಕಾರಣ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. 2022 ರಲ್ಲಿ ಪ್ರೇಮಿಗಳ ದಿನದಂದು ಚಿನ್ನದ ಬೆಲೆ ಶೇಕಡಾ 1.63 ರಷ್ಟು ಏರಿದ್ದರೆ, 2023 ರಲ್ಲಿ ಚಿನ್ನದ ಬೆಲೆ ಶೇಕಡಾ 0.45 ರಷ್ಟು ಹೆಚ್ಚಳವಾಗಿತ್ತು. ಈ ವರ್ಷ ಫೆಬ್ರವರಿ 14 ರಂದು ಚಿನ್ನದ ಬೆಲೆ 157 ರೂಪಾಯಿ ಏರಿಕೆ ಕಂಡಿದೆ.
ಪೇಟಿಎಂಗೆ ಆರ್ ಬಿಐ ನಿರ್ಬಂಧ, ಈ ಮೂರು ಕಂಪನಿಗಳಿಗೆ ಭಾರೀ ಲಾಭ!
ಕರ್ವಾ ಚೌತ್ ದಿನ ಚಿನ್ನದ ಬೆಲೆ ಹೇಗಿತ್ತು? : ಕರ್ವಾ ಚೌತ್ ನಲ್ಲಿ ಒಂದೇ ಒಂದು ಬಾರಿ ಬೆಲೆ ಏರಿದೆ. ಅಕ್ಟೋಬರ್ 17, 2019ರಂದು ಚಿನ್ನದ ಬೆಲೆ ಶೇಕಡಾ 0.28 ರಷ್ಟು ಹೆಚ್ಚಾಗಿತ್ತು. ನವೆಂಬರ್ 4, 2020 ರಂದು, ಕರ್ವಾ ಚೌತ್ ದಿನದಂದು ಚಿನ್ನದ ಬೆಲೆ ಶೇಕಡಾ 2.37 ರಷ್ಟು ಕುಸಿದಿತ್ತು. ಅಕ್ಟೋಬರ್ 13, 2022 ರಂದು, ಕರ್ವಾ ಚೌತ್ ಸಂದರ್ಭದಲ್ಲಿ, ಚಿನ್ನದ ಬೆಲೆ ಶೇಕಡಾ 0.59 ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಅಂದರೆ ನವೆಂಬರ್ 1, 2023 ರಂದು ಚಿನ್ನ ಮತ್ತೆ ಶೇಕಡಾ 0.21 ರಷ್ಟು ಇಳಿದಿತ್ತು.
ಕರ್ವಾ ಚೌತ್ ದಿನ ಚಿನ್ನದ ಬೆಲೆ ಏಕೆ ಇಳಿಯುತ್ತಿದೆ ಅಥವಾ ವ್ಯಾಲೆಂಟೈನ್ಸ್ ಡೇ ದಿನ ಚಿನ್ನದ ಬೆಲೆ ಏಕೆ ಏರುತ್ತಿದೆ ಎನ್ನುವುದಕ್ಕೆ ಸೂಕ್ತ ಕಾರಣವಿಲ್ಲ. ಬೇಡಿಕೆ ಹೆಚ್ಚಾಗಿರುವ ಕಾರಣವೂ ಇರಬಹುದು. ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ದುಬಾರಿ ಆಗಿರುವುದೂ ಇದಕ್ಕೆ ಕಾರಣವಾಗಿರಬಹುದು. ಆದ್ರೆ ಅದೇ ದಿನ ಬೆಲೆ ಏರಿರುವುದು ಕಾಕತಾಳೀಯ ಎನ್ನಬಹುದು.
