ಬೆಂಗಳೂರಿನಲ್ಲಿ ಇಂದು (ಡಿ.18) ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ಆದ್ರೆ ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ. 

ಬೆಂಗಳೂರು (ಡಿ.18): ಬಂಗಾರದ ಒಡವೆಗಳನ್ನು ಖರೀದಿಸಲು ಬಹುತೇಕರು ವಾರಾಂತ್ಯವನ್ನು ಆಯ್ಕೆ ಮಾಡುತ್ತಾರೆ. ರಜೆಯಿರೋ ಕಾರಣ ಆರಾಮವಾಗಿ ವಿವಿಧ ವಿನ್ಯಾಸದ ಆಭರಣಗಳನ್ನು ಖರೀದಿಸಬಹುದು ಎಂಬುದೇ ಇದಕ್ಕೆ ಕಾರಣ. ಆದ್ರೆ ಕಳೆದ ಕೆಲವು ದಿನಗಳಿಂದ ಚಿನ್ನದ (Gold) ದರದಲ್ಲಿ ಏರಿಕೆಯಾಗುತ್ತಿರೋದು ಬಂಗಾರಪ್ರಿಯರ ನೆಮ್ಮದಿ ಕೆಡಿಸಿತ್ತು. ಕಳೆದ ಬಾರಿ ಕೊರೋನಾ ಕಾಣಿಸಿಕೊಂಡ ನಂತರ ಏರಿಕೆಯತ್ತ ಮುಖ ಮಾಡಿದ ಚಿನ್ದದ ದರವು ಈ ವರ್ಷವೂ ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಮತ್ತೆ ಏರಿಕೆ ಕಾಣಬಹುದು ಎಂಬ ಭಯ ಕೂಡ ಇದೆ. ಆದ್ರೆ ಇಂದು (ಡಿ.18) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. ಇನ್ನು ಬೆಳ್ಳಿಯಂತೂ (Silver) ಕಳೆದ ಕೆಲವು ದಿನಗಳಿಂದ ನಿರಂತರ ಏರಿಳಿತ ದಾಖಲಿಸುತ್ತಲೇ ಬಂದಿದೆ. ನಿನ್ನೆ ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ಇಂದು(ಡಿ.18) ಇಳಿಕೆಯಾಗಿದೆ . ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು (ಡಿ.18) ಚಿನ್ನ ಹಾಗೂ ಬೆಳ್ಳಿ
ದರ ಎಷ್ಟಿದೆ?

ಬೆಂಗಳೂರಿನಲ್ಲಿ(Bengaluru) ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ನಿನ್ನೆ 400ರೂ. ಗಳಷ್ಟು ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಸ್ಥಿರವಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,700ರೂ. ಇದ್ದು, ಇಂದು ಕೂಡ ಅಷ್ಟೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,850ರೂ. ಇದ್ದು, ಇಂದು ಕೂಡ ಅಷ್ಟೇ ಇದೆ. ಒಂದು ಕೆ.ಜಿ. ಬೆಳ್ಳಿ ಬೆಲೆಯಲ್ಲಿ ನಿನ್ನೆ 900ರೂ. ಏರಿಕೆಯಾಗಿದ್ರೆ ಇಂದು 100ರೂ. ಇಳಿಕೆ ಕಂಡುಬಂದಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 62,300ರೂ. ಇದ್ರೆ ಇಂದು 62,200ರೂ. ಇದೆ.

Petrol Diesel Rate:ವಾರಾಂತ್ಯದಲ್ಲಿ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲಿ ಇಂದು 1000ರೂ. ಇಳಿಕೆಯಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 47,850ರೂ. ಇತ್ತು. ಇಂದು 46,850ರೂ. ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ಯಾವುದೇ ಬದಲಾವಣೆ ಆಗಿಲ್ಲ. ನಿನ್ನೆ 52, 200ರೂ. ಇದ್ದ ಚಿನ್ನದ ದರ ಇಂದು ಕೂಡ ಅಷ್ಟೇ ಇದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ ನಿನ್ನೆಗಿಂತ ಇಂದು 100ರೂ. ಇಳಿಕೆಯಾಗಿದೆ. ನಿನ್ನೆ 62 ,300ರೂ. ಆಗಿದ್ದ ಬೆಳ್ಳಿ ಬೆಲೆ ಇಂದು 62,200ರೂ. ಆಗಿದೆ. 

ಮುಂಬೈನಲ್ಲಿ ಎಷ್ಟಿದೆ?
ಮುಂಬೈನಲ್ಲಿ ಕೂಡ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. . 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 47,720ರೂ.ಇದ್ದು, ಇಂದು ಕೂಡ ಅಷ್ಟೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 48,720ರೂ. ಇತ್ತು, ಇಂದು ಕೂಡ ಅಷ್ಟೇ ಇದೆ. ಬೆಳ್ಳಿ ದರದಲ್ಲಿಇಂದು 100ರೂ. ಇಳಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 62,300ರೂ. ಇದ್ದು, ಇಂದು 62,200ರೂ. ಆಗಿದೆ.

LPG Connection: ನಾಲ್ಕೇ ನಾಲ್ಕು ಕೆಲಸ ಮಾಡಿದ್ರೆ ಟ್ರಾನ್ಸಫರ್ ಆಗುತ್ತೆ ಗ್ಯಾಸ್ ಕನೆಕ್ಷನ್

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ ಕೂಡ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,940ರೂ.ಇದೆ. ನಿನ್ನೆ ಕೂಡ ಅಷ್ಟೇ ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 50, 120ರೂ. ಇದ್ದು, ಇಂದು ಕೂಡ ಅಷ್ಟೇ ಇದೆ. ಬೆಳ್ಳಿ ದರದಲ್ಲಿ 200ರೂ. ಏರಿಕೆಯಾಗಿದ್ದು, ಇಂದು ಒಂದು ಕೆ.ಜಿ. ಬೆಳ್ಳಿಗೆ 66,100ರೂ.ಇದೆ.

"