ಸೆನ್ಸೆಕ್ಸ್ 587 ಅಂಕ, ರುಪಾಯಿ 26 ಪೈಸೆ ಕುಸಿತ
ಬಾಂಬೆ ಷೇರು ಸೂಚ್ಯಂಕ (ಸೆನ್ಸೆಕ್ಸ್) ಗುರುವಾರ ಒಂದೇ ದಿನ 587 ಕುಸಿತ ಅನುಭವಿಸಿದೆ. ಜಾಗತಿಕ ಮಾರುಕಟ್ಟೆಯ ಅಸ್ಥಿರತೆಯಿಂದಾಗಿ ಬ್ಯಾಂಕಿಂಗ್ ಹಾಗೂ ಇಂಧನ ವಲಯದ ಷೇರುಗಳನ್ನು ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಮಾರಾಟ ಮಾಡಿದ್ದೇ ಷೇರು ಮಾರುಕಟ್ಟೆಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಮುಂಬೈ (ಆ. 23): ಬಾಂಬೆ ಷೇರು ಸೂಚ್ಯಂಕ (ಸೆನ್ಸೆಕ್ಸ್) ಗುರುವಾರ ಒಂದೇ ದಿನ 587 ಕುಸಿತ ಅನುಭವಿಸಿದೆ. ಜಾಗತಿಕ ಮಾರುಕಟ್ಟೆಯ ಅಸ್ಥಿರತೆಯಿಂದಾಗಿ ಬ್ಯಾಂಕಿಂಗ್ ಹಾಗೂ ಇಂಧನ ವಲಯದ ಷೇರುಗಳನ್ನು ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಮಾರಾಟ ಮಾಡಿದ್ದೇ ಷೇರು ಮಾರುಕಟ್ಟೆಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
37,087 ಅಂಕದಿಂದ ದಿನದ ವಹಿವಾಟು ಆರಂಭಿಸಿದ ಸೆನ್ಸೆಕ್ಸ್ 587 ಅಂಕ ಕುಸಿತ ಕಂಡು 36,472.93 ಅಂಕದಲ್ಲಿ ಕೊನೆಗೊಂಡಿದೆ. ಯೆಸ್ ಬ್ಯಾಂಕ್ ಷೇರುಗಳು ಶೇ.14ರಷ್ಟುನಷ್ಟಅನುಭವಿಸಿವೆ. ಉಳಿದ ಬ್ಯಾಂಕಿಂಗ್ ಷೇರುಗಳು ಕೂಡ ನಷ್ಟಅನುಭವಿಸಿವೆ.
ಇದೇ ವೇಳೆ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿಕೂಡ 177.35 ಅಂಕ ಕುಸಿದು 10,741 ಅಂಕದಲ್ಲಿ ಕೊನೆಗೊಂಡಿದೆ. ಈ ನಡುವೆ ಡಾಲರ್ ಎದುರು ರುಪಾಯಿ 26 ಪೈಸೆ ಕುಸಿದು, 71.81 ರು.ಗೆ ಇಳಿದಿದೆ. ಇದು 8 ತಿಂಗಳಲ್ಲೇ ಕನಿಷ್ಠ ಮೊತ್ತವಾಗಿದೆ.