Gold, Silver Price: ಬೆಂಗಳೂರಿನಲ್ಲಿಇಂದು ಬೆಳ್ಳಿ ಖರೀದಿಸೋರಿಗೆ ಸಿಹಿ, ಬಂಗಾರ ಖರೀದಿಸೋರಿಗೆ ಕಹಿ
*ಮುಂಬೈ ಹೊರತುಪಡಿಸಿ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಏರಿಕೆ
*ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲಿ ಕೆ.ಜಿ.ಗೆ 3,600ರೂ. ಇಳಿಕೆ
*ದೆಹಲಿಯಲ್ಲಿ ಬೆಳ್ಳಿ ದರದಲ್ಲಿ 4,200ರೂ.ಏರಿಕೆ

ಬೆಂಗಳೂರು (ಜ.12): ದೇಶದಲ್ಲಿ ಕೊರೋನಾ (Corona) ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬರುತ್ತಿದೆ. ರಾಜ್ಯದಲ್ಲಿ ಈಗಾಗಲೇ ನೈಟ್ ಹಾಗೂ ವೀಕೆಂಡ್ ಕರ್ಫ್ಯೂ(Curfew) ವಿಧಿಸಲಾಗಿದೆ. ಮುಂದೇನಾಗುತ್ತದೋ ಎಂಬ ಭಯದ ನಡುವೆಯೇ ಕೆಲವರು ಚಿನ್ನ (Gld) ಹಾಗೂ ಬೆಳ್ಳಿ (Silver) ಮೇಲೆ ಈಗಲೇ ಹೂಡಿಕೆ (Invest) ಮಾಡಲು ಯೋಚಿಸುತ್ತಿರಬಹುದು. ಇನ್ನೂ ಕೆಲವರು ವೀಕೆಂಡ್ ನಲ್ಲಿ ಚಿನ್ನ ಹಾಗೂ ಬೆಳ್ಳಿ ಖರೀದಿಸಲು ಸಾಧ್ಯವಿಲ್ಲದ ಕಾರಣ ವಾರದ ಮಧ್ಯಭಾಗದಲ್ಲೇ ಬೆಲೆ ಕಡಿಮೆಯಾದಾಗ ಖರೀದಿಸಲು ಪ್ಲ್ಯಾನ್ (Plan)ಮಾಡಿರಬಹುದು. ಸಂಕ್ರಾಂತಿ ಹಬ್ಬ ಬೇರೆ ಹತ್ತಿರ ಬಂದಿದೆ. ಹೀಗಾಗಿ ಹಬ್ಬಕ್ಕೆ ಚಿನ್ನ ಹಾಗೂ ಬೆಳ್ಳಿ ಖರೀದಿಸಲು ಯೋಚಿಸುತ್ತಿರಬಹುದು. ರಾಜ್ಯದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಚಿನ್ನ (Gold) ಹಾಗೂ ಬೆಳ್ಳಿ (Silver) ಖರೀದಿಸಲು (Purchase) ಪ್ಲ್ಯಾನ್ ಮಾಡಿರೋರಿಗೆ ಇಂದು ಸಿಹಿ ಹಾಗೂ ಕಹಿಯ ಮಿಶ್ರ ಅನುಭವ. ಏಕೆಂದ್ರೆ ಇಂದು ಬಂಗಾರದ ದರ (Price) ಕೊಂಚ ಏರಿಕೆ ಕಂಡಿದ್ದು, ಗ್ರಾಹಕರಿಗೆ ತುಸು ಬೇಸರ ಮೂಡಿಸಿದೆ. ಮುಂಬೈ (Mumbai) ಹೊರತುಪಡಿಸಿ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಆದ್ರೆ ಬೆಂಗಳೂರಿನಲ್ಲಿ(Bengaluru) ಬೆಳ್ಳಿ (Silver) ಖರೀದಿಗೆ ಮುಂದಾಗಿರೋರಿಗೆ ಖುಷಿಯ ಸುದ್ದಿಯಿದೆ. ಬೆಳ್ಳಿಯ ದರದಲ್ಲಿ ಕೆ.ಜಿ.ಗೆ 3,600ರೂ. ಇಳಿಕೆ ಕಂಡುಬಂದಿದೆ. ದೇಶದ ಉಳಿದ ನಗರಗಳಲ್ಲಿ ಮಾತ್ರ ಬೆಳ್ಳಿ ಬೆಲೆಯಲ್ಲಿ ಗಮನಾರ್ಹ ಏರಿಕೆ (Increase) ಕಂಡುಬಂದಿದೆ. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿಇಂದು (ಜ.12) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ಚಿನ್ನದ ಬೆಲೆಯಲ್ಲಿಇಂದು ನಿನ್ನೆಗಿಂತ 100ರೂ. ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 44,800ರೂ.ಇದ್ದು, ನಿನ್ನೆ 44,700ರೂ. ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 48,760 ರೂ.ಇದ್ದು,ಇಂದು 120ರೂ.ಏರಿಕೆಯಾಗಿ 48,880ರೂ.ಇದೆ. ಇನ್ನು ಬೆಳ್ಳಿ ದರದಲ್ಲಿಇಂದು 3,600ರೂ. ಇಳಿಕೆ ಕಂಡುಬಂದಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 64,600ರೂ.ಇತ್ತು.ಆದ್ರೆ ಇಂದು 61,000ರೂ. ಇದೆ.
ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 46,850ರೂ. ಆಗಿದ್ದು, ನಿನ್ನೆ 46,650ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 200ರೂ.ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 200ರೂ. ಏರಿಕೆಯಾಗಿದೆ. ನಿನ್ನೆ 50,900 ರೂ. ಇತ್ತು,ಇಂದು 51,100ರೂ. ಆಗಿದೆ. ಬೆಳ್ಳಿ ದರದಲ್ಲಿಇಂದು 4,200ರೂ.ಏರಿಕೆಯಾಗಿದೆ. ನಿನ್ನೆಒಂದು ಕೆ.ಜಿ.ಬೆಳ್ಳಿಗೆ 60,800ರೂ.ಇತ್ತು.ಆದ್ರೆ ಇಂದು 65,000ರೂ. ಆಗಿದೆ.
ಮುಂಬೈನಲ್ಲಿಎಷ್ಟಿದೆ ದರ?
ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 46,590ರೂ.ಇದ್ದು,ಇಂದು 10ರೂ.ಇಳಿಕೆ ಕಂಡು 46,580ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ48,590ರೂ.ಇತ್ತು,ಇಂದು 10ರೂ. ಇಳಿಕೆಯಾಗಿ 48,580ರೂ. ಆಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 60,800ರೂ.ಇತ್ತು.ಆದ್ರೆ ಇಂದು 65,000ರೂ. ಆಗಿದೆ. ಅಂದ್ರೆ ನಿನ್ನೆಗಿಂತ ಇಂದು 4,200 ರೂ.ಏರಿಕೆಯಾಗಿದೆ.
Tax Free Incomes: ಈ ಮೂಲಗಳಿಂದ ಹಣ ಗಳಿಸಿದರೆ ಸಿಗುತ್ತೆ ತೆರಿಗೆ ವಿನಾಯಿತಿ!
ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,000ರೂ.ಇದೆ. ನಿನ್ನೆ 44,870ರೂ.ಇತ್ತು. ಅಂದ್ರೆ ನಿನ್ನೆಗಿಂತ ಇಂದು 130ರೂ.ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 60ರೂ.ಏರಿಕೆಯಾಗಿದೆ. ನಿನ್ನೆ 48,950 ರೂ.ಇತ್ತು,ಇಂದು 49,010 ರೂ.ಇದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 64,600ರೂ.ಇದ್ದು, ಇಂದು 61,000ರೂ. ಆಗಿದೆ. ಅಂದ್ರೆ 3,600ರೂ. ಇಳಿಕೆಯಾಗಿದೆ.