ಬೆಂಗಳೂರು[ಜೂ.12]: ಚಿನ್ನದ ವ್ಯಾಪಾರಿಗಳು ಹಾಗೂ ರೀಟೇಲ್ ಮಾರಾಟಗಾರರಿಂದ ಬೇಡಿಕೆ ಕುಸಿದ ಕಾರಣ ಬೆಲೆಯೂ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ಬುಧವಾರ 10 ಗ್ರಾಂ ಚಿನ್ನದ ಬೆಲೆ 30600 ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೇಟ್ ನ 8 ಗ್ರಾಂ ಚಿನ್ನದ ಬೆಲೆ 24,480 ರೂ. ಹಾಗೂ 24 ಕ್ಯಾರೇಟ್ ನ 8 ಗ್ರಾಂ ಚಿನ್ನದ ಬೆಲೆ 26,664 ರೂಪಾಯಿ ನಿಗದಿಯಾಗಿದೆ. ಇನ್ನು ಒಂದು ಕೆ. ಜಿ. ಬೆಳ್ಳಿ ಬೆಲೆ 39,860 ರೂ.ಗೆ ತಲುಪಿದೆ.

ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಹೇಗಿದೆ?

22 ಕ್ಯಾರೇಟ್ ನ 8 ಗ್ರಾಂ ಚಿನ್ನದ ಬೆಲೆ 22,440 ರೂಪಾಯಿ ಹಾಗೂ 24 ಕ್ಯಾರೇಟ್ ನ 8 ಗ್ರಾಂ ಚಿನ್ನದ ಬೆಲೆ 26,336 ರೂಪಾಯಿ ನಿಗದಿಯಾಗಿದೆ.

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದ್ದು, ಗ್ಲೋಬಲ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಔನ್ಸ್ ಗೆ ಶೇ. 0.20 ರಷ್ಟು ಏರಿಕೆಯಾಗಿದ್ದು, 1,333.95 ಡಾಲರ್ ತಲುಪಿದೆ. ಬೆಳ್ಳಿ ಬೆಲೆ ಔನ್ಸ್ ಗೆ ಶೇ.015ರಷ್ಟು ಹೆಚ್ಚಾಗಿ 14.76 ಡಾಲರ್ ಗಳಿಷ್ಟಿದೆ.

ಚಿನ್ನದ ಬೇಡಿಕೆ ಕುಸಿಯಲು ಕಾರಣವೇನು?

ಡಾಲರ್ ಮೌಲ್ಯ ಪ್ರಬಲವಾದಂತೆ ಚಿನ್ನದ ಬೆಲೆ ಇಳಿಕೆ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು. ಅಷ್ಟೇ ಅಲ್ಲದೇ ಆಷಾಢ ಮಾಸ ಸಮೀಪಿಸುತ್ತಿದ್ದು, ಈ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ನಡೆಸುವುದಿಲ್ಲ. ಹೀಗಾಗಿ ಚಿನ್ನದ ಬೇಡಿಕೆಯಲ್ಲೂ ಕುಸಿತವಾಗಿದೆ.