ನಿರಂತರವಾಗಿ ಏರಿಳಿತ ಕಂಡು ಬರುವ ಚಿನ್ನದ ಬೆಲೆಯಲ್ಲಿ ಇದೀಗ ಮತ್ತೊಮ್ಮೆ ಕುಸಿತ ಕಂಡು ಬಂದಿದೆ. ಇದರೊಂದಿಗೆ ಬೆಳ್ಳಿಯ ಬೆಲೆಯೂ ಕೂಡ ಕುಸಿದಿದೆ. 

ಮುಂಬೈ : ಜಾಗತಿಕವಾಗಿ ಚಿನ್ನದ ಬೆಲೆಯಲ್ಲಿ ಏರಿಳಿತ ನಿರಂತರವಾಗಿರುತ್ತದೆ. ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಇಳಿಕೆಯ ಕಾರಣದಿಂದ ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಇಳಿಕೆ ಕಂಡು ಬಂದಿದೆ. 

100 ರು. ಇಳಿಕೆಯಾಗುವ ಮೂಲಕ 10 ಗ್ರಾಂ ಚಿನ್ನದ ಬೆಲೆಯು 31,250ರು.ಗಳಷ್ಟಾಗಿದೆ. ಜಾಗತಿಕವಾಗಿ ಬೇಡಿಕೆ ಕುಸಿದ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 

ಇನ್ನು ಇದೇ ವೇಳೆ ಬೆಳ್ಳಿಯ ಬೆಲೆಯಲ್ಲಿಯೂ ಕೂಡ ಇಳಿಕೆಯಾಗಿದ್ದು 1 ಕೆಜಿ ಬೆಳ್ಳಿಯ ಮೇಲೆ 650 ರು. ಇಳಿಕೆಯಾಗುವ ಮೂಲಕ 37,700 ರು.ಗಳಾಗಿದೆ. 

ಜಾಗತಿಕವಾಗಿ ಬೇಡಿಕೆ ಕುಸಿತದ ಪರಿಣಾಮವಾಗಿ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.