ಹಬ್ಬದ ಸಂದರ್ಭದಲ್ಲಿ ಇಳಿದ ಚಿನ್ನದ ದರ! 10 ಗ್ರಾಂ. ಶುದ್ಧ ಚಿನ್ನದ ದರದಲ್ಲಿ 210 ರೂ. ಇಳಿಕೆ! ಬೆಳ್ಳಿ ಬೆಲೆಯಲ್ಲೂ ಕೂಡ 300 ರೂ. ಇಳಿಕೆ! ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಏರಿಕೆ! ಆಭರಣ ಪ್ರಿಯರ ಖರೀದಿ ಭರಾಟೆ ಜೋರು 

ನವದೆಹಲಿ(ನ.8): ದೀಪಾವಳಿ ಸಂದರ್ಭದಲ್ಲಿ ಚಿನ್ನದ ದರದಲ್ಲಿ ಗಣನೀಯ ಇಳಿಕೆ ಕಂಡು ಬಂದಿದ್ದು, 10 ಗ್ರಾಂ. ಶುದ್ಧ ಚಿನ್ನದ ದರದಲ್ಲಿ 210 ರೂ. ಇಳಿಕೆ ಕಂಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದರಂತೆ ಬೆಳ್ಳಿ ಬೆಲೆಯಲ್ಲೂ ಕೂಡ 300 ರೂ. ಇಳಿಕೆ ಕಂಡಿದ್ದು, ಇದಕ್ಕೆ ವಿರುದ್ಧವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಶೇ.0.51 ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲೂ ಶೇ.0.17 ರಷ್ಟು ಏರಿಕೆ ಕಂಡು, 14.77 ಅಮೆರಿಕನ್ ಡಾಲರ್​ ಆಗಿದೆ.

99.9 ಪರಿಶುದ್ಧ 10 ಗ್ರಾಂ. ಬಂಗಾರದ ಬೆಲೆಯಲ್ಲಿ 210 ರೂ. ಇಳಿಕೆ ಕಾಣುವ ಮೂಲಕ ಚಿನ್ನದ ದರ 32,400 ರೂ. ಅದರಂತೆ 99.5 ಪರಿಶುದ್ಧ 10 ಗ್ರಾಂ. ಬಂಗಾರಕ್ಕೆ 32,250 ರೂ.ಆಗಿದೆ. 

ನಿರಂತರವಾಗಿ ಏರಿಕೆ ಕಾಣುತ್ತಿದ್ದ ಬಂಗಾರ ಇಳಿಕೆ ಕಂಡಿರುವುದರಿಂದ, ಆಭರಣ ಪ್ರಿಯರ ಖರೀದಿ ಭರಾಟೆ ಜೋರಾಗಿತ್ತು.