ಟ್ರಂಪ್ ಆಡಿದ ಅದೊಂದು ಮಾತು: ಚಿನ್ನದ ದರ ಕತೆಯೇ ಬೇರೆ ಆಯ್ತು!

ಡಿಸೆಂಬರ್ ಆರಂಭದಲ್ಲಿ ಇಳಿಕೆಯತ್ತ ಮುಖ ಮಾಡಿದ ಚಿನ್ನದ ದರ| ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದ ಚಿನ್ನದ ದರ ಇಳಿಕೆ| ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಶೇ. 0.01ರಷ್ಟು ಇಳಿಕೆ ಕಂಡ ಚಿನ್ನದ ದರ| ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇದೀಗ 38,323 ರೂ.| ಬೆಳ್ಳಿ ಬೆಲೆಯಲ್ಲಿ ಒಟ್ಟು ಶೇ.0.17ರಷ್ಟು ಏರಿಕೆ| ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಇದೀಗ 45,372 ರೂ.| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 1,476.55  ಡಾಲರ್| ಮಾರುಕಟ್ಟೆ ತಲ್ಲಣಗೊಳಿಸಿದ ಅಮೆರಿಕ ಆಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿಕೆ|

 

Gold Price Fall After Sharp Rise Silver Edge Higher

ನವದೆಹಲಿ(ಡಿ.04): ನವೆಂಬರ್ ತಿಂಗಳಲ್ಲಿ ಹೆಚ್ಚು ಕಡಿಮೆ ಹಾವು-ಏಣಿ ಆಟವಾಡಿದ್ದ ಆಭರಣ ದರ, ಡಿಸೆಂಬರ್ ಆರಂಭದಲ್ಲಿ ಗಮನಾರ್ಹ ಇಳಿಕೆ ಕಾಣುವ ಮೂಲಕ ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ.

ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆಯಲ್ಲಿ ಶೇ.0.01ರಷ್ಟು ಇಳಿಕೆ ಕಂಡಿದೆ. ಈ ಮೂಲಕ 10 ಗ್ರಾಂ ಚಿನ್ನದ ಬೆಲೆ ಇದೀಗ 38,323 ರೂ. ಆಗಿದೆ.

ಡಿಸೆಂಬರ್ ಶುಭಾರಂಭ: ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ!

ಕಳೆದ 10 ದಿನಗಳಲ್ಲಿ ಒಟ್ಟು 8 ದಿನಗಳಲ್ಲಿ ಚಿನ್ನದ ದರ ಇಳಿಕೆಯಾಗಿದ್ದು, ವರ್ಷದ ಆರಂಭದಲ್ಲಿ ಅಂದರೆ ಫಬ್ರವರಿ 2019ಕ್ಕೆ ಹೋಲಿಸಿದರೆ ಒಟ್ಟು 2,100 ರೂ. ಇಳಿಕೆ ಕಂಡಿದೆ.

ಇದೇ ವೇಳೆ ಬೆಳ್ಳಿ ಬೆಲೆಯಲ್ಲಿ ಮಾತ್ರ ಏರಿಕೆ ಕಂಡು ಬಂದಿದ್ದು, ಒಟ್ಟು ಶೇ.0.17ರಷ್ಟು ಏರಿಕೆ ದಾಖಲಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 45,372 ರೂ. ಆಗಿದೆ.

ಚೆಲುವೆಯ ಅಂದದ ಮೊಗಕೆ: ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ!

ಆದರೆ ಚೀನಾದೊಂದಿಗಿನ ವಾಣಿಜ್ಯ ಯುದ್ಧದ ಕುರಿತು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿದ ಹೇಳಿಕೆಯ ಪರಿಣಾಮವಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಕಂಡಿದೆ. ಒಟ್ಟು ಶೇ.1ರಷ್ಟು ಏರಿರುವ ಚಿನ್ನದ ದರ ಒಂದು ಔನ್ಸ್'ಗೆ 1,476.55 ಡಾಲರ್ ಆಗಿದೆ.

ಚಿನ್ನದ ಬೆಲೆ ಲೆಕ್ಕ ಹಾಕೋದ್ಹೇಗೆ?

Latest Videos
Follow Us:
Download App:
  • android
  • ios