ಬೆಂಗಳೂರಿನಲ್ಲಿ ಚಿನ್ನದ ದರ ಇಳಿಕೆಯತ್ತ ಮುಖ ಮಾಡಿರೋದು ಬಂಗಾರಪ್ರಿಯರಿಗೆ ಖುಷಿ ನೀಡಿದೆ. ಇನ್ನೊಂದು ಕಡೆ ಬೆಳ್ಳಿ ಬೆಲೆಯಲ್ಲಿ ಸತತ ಏರಿಕೆ ಕಂಡುಬರುತ್ತಿರೋದು ಹೂಡಿಕೆದಾರರಿಗೆ ಬೇಸರ ಮೂಡಿಸಿದೆ.  

ಬೆಂಗಳೂರು (ಡಿ.23):  ಚಿನ್ನ(Gold)ಹಾಗೂ ಬೆಳ್ಳಿ (Silver)ಮೇಲೆ ಭಾರತೀಯರಿಗೆ ತುಸು ಹೆಚ್ಚೇ ವ್ಯಾಮೋಹ. ಅದೆಷ್ಟೇ ಚಿನ್ನದ ಒಡವೆಗಳಿರಲಿ(Ornaments), ಬೆಳ್ಳಿ ಸಾಮಗ್ರಿಗಳಿರಲಿ, ಇನ್ನೂ ಬೇಕೆಂಬ ಬಯಕೆ ಇದ್ದೇಇರುತ್ತದೆ. ಇನ್ನು ಕೂಡಿಟ್ಟ ಒಂದಿಷ್ಟು ಹಣವನ್ನು ಭವಿಷ್ಯಕ್ಕೆ ನೆರವಾಗಲೆಂದು ಹೂಡಿಕೆ(Invest) ಮಾಡಬೇಕೆಂದು ಇಚ್ಛಿಸೋರು ಕೂಡ ಆಯ್ದುಕೊಳ್ಳೋದು ಚಿನ್ನವನ್ನೇ. ಏಕೆಂದ್ರೆ ಎಲ್ಲೋ ಹೂಡಿಕೆ(Invest) ಮಾಡಿ ಬೆವರುಸುರಿಸಿ ಸಂಪಾದಿಸಿದ ಹಣವನ್ನು ಕಳೆದುಕೊಳ್ಳೋ ಬದಲು ಚಿನ್ನದಲ್ಲಿ ಹೂಡಿಕೆ ಮಾಡಿದ್ರೆ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ ಇಂದೂ ಇದೆ, ಮುಂದೆಯೂ ಇರುತ್ತದೆ. ಚಿನ್ನ ಮಾತ್ರವಲ್ಲ,ಬೆಳ್ಳಿ ಕೂಡ ಹೂಡಿಕೆಗೆ ಅತ್ಯುತ್ತಮ ಸಾಧನ. ಅದೆಷ್ಟೋ ಹೂಡಿಕೆದಾರರು ಭಾರತದಲ್ಲಿ ಬೆಳ್ಳಿ ಮೇಲೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡುತ್ತಾರೆ. ಅದೆಷ್ಟೇ ಬೆಲೆಯೇರಿಕೆಯಾದ್ರೂ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಕಡಿಮೆಯಾಗೋದಿಲ್ಲ ಎಂಬ ಧೈರ್ಯ ಭಾರತೀಯರಿಗಿದೆ. ಇನ್ನು ಚಿನ್ನ ಹಾಗೂ ಬೆಳ್ಳಿ ಇತ್ತೀಚೆಗೆ ಸಿಕ್ಕಾಪಟ್ಟೆ ಏರಿಳಿತ ಕಾಣುತ್ತಿದೆ. ಒಮಿಕ್ರಾನ್(Omicrn) ವೈರಸ್ ಭೀತಿ, ಭಾರತದ ಷೇರುಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಇದಕ್ಕೆ ಕಾರಣವಾಗಿರಬಹುದು. ಚಿನ್ನದ ಬೆಲೆಯಲ್ಲಿ ಕಳೆದೆರಡು ದಿನಗಳಿಂದ ಕೊಂಚ ಏಳಿಕೆ ಕಂಡುಬಂದಿದ್ರೆ, ಬೆಳ್ಳಿ ಬೆಲೆ ಮಾತ್ರ ಏರಿಕೆಯ ಹಾದಿಯಲ್ಲಿದೆ. ಹೀಗಾಗಿ ಚಿನ್ನ ಖರೀದಿಗೆ ಇದು ಸೂಕ್ತ ಸಮಯ ಎಂದೇ ಹೇಳಬಹುದು. ಇಂದು (ಡಿ.23) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?

ಬೆಂಗಳೂರಿನಲ್ಲಿ(Bengaluru) ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ಚಿನ್ನದ ಬೆಲೆಯಲ್ಲಿ ಇಂದು ಕೂಡ 10ರೂ. ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 45,150ರೂ. ಇದ್ದು, ಇಂದು 45,140ರೂ. ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,260ರೂ. ಇದ್ದು, ಇಂದು 49, 250ರೂ.ಇದೆ.ಅಂದ್ರೆ 10ರೂ.ಇಳಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿ ಬೆಲೆಯಲ್ಲಿ ಇಂದು 400ರೂ. ಏರಿಕೆ ಕಂಡುಬಂದಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 61,900ರೂ. ಇದ್ರೆ ಇಂದು 62,300ರೂ.ಇದೆ.

Petrol Diesel Rate:ಕ್ರಿಸ್ಮಸ್ ರಜೆಗೆ ಪ್ರವಾಸ ಹೊರಡೋ ಮುನ್ನ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಚೆಕ್ ಮಾಡಿ

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ(Delhi) ಚಿನ್ನದ ಬೆಲೆಯಲ್ಲಿ ಇಂದು 10ರೂ. ಇಳಿಕೆಯಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 47,300ರೂ. ಇತ್ತು. ಇಂದು 47,290ರೂ.ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಇಳಿಕೆಯಾಗಿದೆ. ನಿನ್ನೆ 51,600ರೂ. ಇದ್ದ ಚಿನ್ನದ ದರ ಇಂದು 51,590ರೂ.ಇದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ ನಿನ್ನೆಗಿಂತ ಇಂದು 400ರೂ. ಏರಿಕೆಯಾಗಿದೆ. ನಿನ್ನೆ 61,900ರೂ. ಆಗಿದ್ದ ಬೆಳ್ಳಿ ಬೆಲೆ ಇಂದು 62,300ರೂ. ಆಗಿದೆ. 

ಮುಂಬೈನಲ್ಲಿ ಎಷ್ಟಿದೆ?
ಮುಂಬೈನಲ್ಲಿ (Mumbai) ಕೂಡ ಇಂದು ಚಿನ್ನದ ದರದಲ್ಲಿ 10ರೂ. ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 47,000ರೂ.ಇದ್ದು, ಇಂದು 46,990ರೂ.ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 48,000ರೂ. ಇತ್ತು, ಇಂದು 47,990ರೂ. ಇದೆ. ಬೆಳ್ಳಿ ದರದಲ್ಲಿಇಂದು 400ರೂ. ಏರಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 61,900ರೂ. ಇದ್ದು, ಇಂದು 400ರೂ. ಏರಿಕೆಯಾಗಿ 62,300ರೂ. ಆಗಿದೆ.

CPI Forecast:ಗ್ರಾಹಕ ದರ ಸೂಚ್ಯಂಕ 150 ಬೇಸಿಸ್ ಪಾಯಿಂಟ್ಸ್ ಏರಿಕೆ ಸಾಧ್ಯತೆ: ಸ್ಟ್ಯಾಂಡರ್ಡ್ ಚಾರ್ಟರಡ್ ಬ್ಯಾಂಕ್

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ(Chennai) ಇಂದು ಚಿನ್ನದ ದರದಲ್ಲಿ10ರೂ. ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45, 360ರೂ.ಇದೆ. ನಿನ್ನೆ 45,370ರೂ. ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 49,500ರೂ. ಇದ್ದು, ಇಂದು 10ರೂ. ಇಳಿಕೆಯಾಗಿ 49,490ರೂ. ಆಗಿದೆ. ಬೆಳ್ಳಿ ದರದಲ್ಲಿ ನಿನ್ನೆಗಿಂತ ಇಂದು 200ರೂ. ಇಳಿಕೆಯಾಗಿದ್ದು, ಒಂದು ಕೆ.ಜಿ. ಬೆಳ್ಳಿಗೆ 65,600ರೂ.ಇದೆ.

"