Asianet Suvarna News Asianet Suvarna News

Gold Silver Price: ರಾಜ್ಯದಲ್ಲಿ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ ಇಂದು ಕರ್ಫ್ಯೂ ಜಾರಿಯಲ್ಲಿರೋ ಕಾರಣ ಚಿನ್ನ ಹಾಗೂ ಬೆಳ್ಳಿಗೆ ಬೇಡಿಕೆ ತಗ್ಗಿದೆ. ಇದು ಚಿನ್ನ ಹಾಗೂ ಬೆಳ್ಳಿ ದರದ ಮೇಲೂ ಪರಿಣಾಮ ಬೀರಿದೆ. ನಿನ್ನೆ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಸ್ಥಿರವಾಗಿದ್ದು, ಬೆಳ್ಳಿ ಬೆಲೆ ಇಳಿಕೆಯಾಗಿದೆ.
 

Gold price Constant silver price drop in Bangalore check todays gold silver price in major cities of India Jan 15 2022
Author
Bangalore, First Published Jan 15, 2022, 11:54 AM IST

ಬೆಂಗಳೂರು (ಜ.15): ಚಿನ್ನ(Gold) ಹಾಗೂ ಬೆಳ್ಳಿ (Silver) ಖರೀದಿಸೋವಾಗ ಸಾಮಾನ್ಯವಾಗಿ ಶುಭದಿನ ಹಾಗೂ ಶುಭ ಘಳಿಗೆಯನ್ನು ನೋಡೋ ಅಭ್ಯಾಸ ಕೆಲವರಿಗಿರುತ್ತದೆ. ಇಂದು ಮಕರ ಸಂಕ್ರಾಂತಿ ಹಬ್ಬವಿರೋ ಕಾರಣ ಚಿನ್ನ ಹಾಗೂ ಬೆಳ್ಳಿ ಖರೀದಿಗೆ ಶುಭದಿನ. ಆದ್ರೆ ವೀಕೆಂಡ್ ಕರ್ಫ್ಯೂ ಕಾರಣಕ್ಕೆ ಇಂದು ಚಿನ್ನ (Gold) ಹಾಗೂ ಬೆಳ್ಳಿ (Silver) ಖರೀದಿಸಲು (Purchase) ಸಾಧ್ಯವಿಲ್ಲ. ಸಂಕ್ರಾಂತಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದರೂ ಚಿನ್ನ ಅಥವಾ ಬೆಳ್ಳಿ ಖರೀದಿ ಮೂಲಕ ಆ ಖುಷಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆನ್ ಲೈನ್ನಲ್ಲಿ ಚಿನ್ನ ಹಾಗೂ ಬೆಳ್ಳಿ ಮೇಲೆ ಹೂಡಿಕೆ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿಯೂ ನೀವು ಯೋಚಿಸಬಹುದು. ಕಳೆದ ಕೆಲವು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ನಿರಂತರ ಏರಿಳಿತ ಕಂಡುಬರುತ್ತಿದೆ. ರಾಜ್ಯದಲ್ಲಿ ನಿನ್ನೆ ಕೊಂಚ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಸ್ಥಿರವಾಗಿದೆ. ಇನ್ನು ಬೆಳ್ಳಿ (Silver)ಬೆಲೆಯಲ್ಲಿ (Price) ಇಳಿಕೆ ಕಂಡುಬಂದಿದೆ. ಕೊರೋನಾ  ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಸರ್ಕಾರ ಶನಿವಾರ ಹಾಗೂ ಭಾನುವಾರ ವೀಕೆಂಡ್ ಕರ್ಫ್ಯೂ (Curfew) ವಿಧಿಸಿದ್ದು, ಈ ಎರಡು ದಿನ ಮನೆಯಿಂದ ಹೊರಬರಲು ಸಾಧ್ಯವಿಲ್ಲ. ಹೀಗಾಗಿ ಇಂದು ಚಿನ್ನ ಹಾಗೂ ಬೆಳ್ಳಿಗೆ ಬೇಡಿಕೆ ತಗ್ಗಿದೆ. ಆದ್ರೆ ಸಂಕ್ರಾಂತಿ ಶುಭದಿನದಂದು ಚಿನ್ನ ಖರೀದಿಸಲೇಬೇಕೆಂದು  ನಿರ್ಧರಿಸಿರೋ ಆನ್ ಲೈನ್ ಖರೀದಿಸ ಮಾಡಲು ಅವಕಾಶವಿದೆ. ಇಂದು ದೇಶದ ಪ್ರಮುಖ ನಗರಗಳಲ್ಲಿ (ಜ.15) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ಚಿನ್ನದ ಬೆಲೆಯಲ್ಲಿಇಂದು ಯಾವುದೇ ಬದಲಾವಣೆಯಾಗಿಲ್ಲ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,000ರೂ.ಇದೆ.  24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,100 ರೂ.ಇದ್ದು,ಇಂದು ಕೂಡ ಅಷ್ಟೇ ಇದೆ. ಬೆಳ್ಳಿ ಬೆಲೆಯಲ್ಲಿ 400ರೂ. ಇಳಿಕೆಯಾಗಿದೆ. ನಿನ್ನೆ ಒಂದು ಕೆ.ಜಿ.ಬೆಳ್ಳಿಗೆ  65,900ರೂ.ಇತ್ತು.ಆದ್ರೆ ಇಂದು 65,500ರೂ. ಇದೆ. 

Petrol Diesel Rate:ರಾಜ್ಯದಲ್ಲಿ ಇಂಧನ ಬೇಡಿಕೆ ತಗ್ಗಿಸಿದ ವೀಕೆಂಡ್ ಕರ್ಫ್ಯೂ; ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 47,160ರೂ. ಆಗಿದ್ದು, ನಿನ್ನೆ 47,150ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 10ರೂ.ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಏರಿಕೆಯಾಗಿದೆ. ನಿನ್ನೆ 51,440 ರೂ. ಇತ್ತು,ಇಂದು 51,450ರೂ.ಇದೆ. ಬೆಳ್ಳಿ ದರದಲ್ಲಿ ಇಂದು ನಿನ್ನೆಗಿಂತ 600ರೂ. ಇಳಿಕೆಯಾಗಿದೆ . ಒಂದು ಕೆ.ಜಿ.ಬೆಳ್ಳಿಗೆ 61,600ರೂ.ಇದೆ.

ಮುಂಬೈನಲ್ಲಿಎಷ್ಟಿದೆ ದರ?
ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 46, 980ರೂ.ಇದ್ದು,ಇಂದು 10ರೂ. ಇಳಿಕೆ ಕಂಡು 46,970ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ48,980ರೂ.ಇತ್ತು,ಇಂದು 10ರೂ. ಇಳಿಕೆಯಾಗಿ 48,970ರೂ. ಆಗಿದೆ. ಬೆಳ್ಳಿ ದರ ಇಂದು ನಿನ್ನೆಗಿಂತ 600ರೂ. ಇಳಿಕೆಯಾಗಿದೆ.  ಒಂದು ಕೆ.ಜಿ.ಬೆಳ್ಳಿಗೆ 61,600ರೂ.ಇದೆ.

Union Budget 2022: ಕೇಂದ್ರ ಬಜೆಟ್ ಮಂಡನೆ ಫೆಬ್ರವರಿ 1ಕ್ಕೆ ಫಿಕ್ಸ್ ; ಜ. 31ರಿಂದ ಸಂಸತ್ತಿನ ಅಧಿವೇಶನ ಆರಂಭ

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು  45,370ರೂ.ಇದೆ. ನಿನ್ನೆ 45,450ರೂ.ಇತ್ತು. ಅಂದ್ರೆ ನಿನ್ನೆಗಿಂತ ಇಂದು 80ರೂ.ಇಳಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 140ರೂ. ಇಳಿಕೆಯಾಗಿದೆ. ನಿನ್ನೆ 49, ,590 ರೂ.ಇತ್ತು,ಇಂದು 49,450 ರೂ.ಇದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 65,900ರೂ.ಇದ್ದು, ಇಂದು 65,500ರೂ. ಆಗಿದೆ. ಅಂದ್ರೆ 400ರೂ. ಇಳಿಕೆಯಾಗಿದೆ.  

"

Follow Us:
Download App:
  • android
  • ios