Asianet Suvarna News Asianet Suvarna News

3ನೇ ತ್ರೈಮಾಸಿಕದ ಚಿನ್ನದ ಡಿಮ್ಯಾಂಡ್ : ಭಾರೀ ಇಳಿಯಿತು

ಚಿನ್ನದ ಬೇಡಿಕೆಯಲ್ಲಿ  ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ವಿವಿಧ ಕಾರಣಗಳಿಂದ ಭಾರೀ ಕುಸಿತವಾಗಿದೆ 

Gold Demand Decline in India snr
Author
Bengaluru, First Published Oct 30, 2020, 11:09 AM IST

ಮುಂಬೈ (ಅ.30): ಬೆಲೆ ಏರಿಕೆ, ಪಿತೃ ಪಕ್ಷ, ಅಧಿಕ ಮಾಸ ಮುಂತಾದವುಗಳು ಚಿನ್ನದ ಬೇಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಜುಲೈ-ಸೆಪ್ಟೆಂಬರ್‌ ಮೂರನೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ.30ರಷ್ಟು ಕುಸಿತ ಕಂಡಿದೆ ಎಂದು ವಿಶ್ವ ಚಿನ್ನ ಮಂಡಳಿಯ ವರದಿ ಹೇಳಿದೆ. 

ಈ ಅವಧಿಯಲ್ಲಿ ಒಟ್ಟು 123.9 ಟನ್‌ಗಳಷ್ಟುಚಿನ್ನ ಬಿಕರಿಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು 86.6ಟನ್‌ಗಳಷ್ಟುಕಡಿಮೆ.

ಸತತ ಎರಡನೇ ದಿನವೂ ಕುಸಿದ ಚಿನ್ನ, ಖರೀದಿ ಬಲು ಜೋರು! .

 ಆದರೆ ಎರಡನೇ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ ಇದು ಅಧಿಕ. ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಕೇವಲ 64 ಟನ್‌ಗಳಷ್ಟುಚಿನ್ನ ಮಾರಾಟವಾಗಿತ್ತು.

ಇದೇ ವೇಳೆ ಜಾಗತಿಕವಾಗಿಯೂ ಚಿನ್ನದ ಬೇಡಿಕೆ ಶೇ.19ರಷ್ಟುಇಳಿಮುಖವಾಗಿದೆ. 3ನೇ ತ್ರೈಮಾಸಿಕ ಅವಧಿಯಲ್ಲಿ 892.3 ಟನ್‌ಗಳಷ್ಟುಚಿನ್ನ ಬಿಕರಿಯಾಗಿದ್ದು, ಇದು 2009ರ ಬಳಿಕ ದಾಖಲಾದ ಅತೀ ಕಡಿಮೆ ಬೇಡಿಕೆ.

Follow Us:
Download App:
  • android
  • ios