ನವದೆಹಲಿ(ಫೆ.02): ಕೇಂದ್ರ ಬಜೆಟ್ ಮಂಡನೆಯಾಗುತ್ತಿದ್ದಂತೇ ದೇಶಾದ್ಯಂತ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಆಭರಣ ಪ್ರಿಯರನ್ನು ದಂಗುಬಡಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 4,001 ರೂ. ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ ಇದೀಗ 40,060 ರೂ. ಆಗಿದೆ. 

ಅದರಂತೆ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು , ಒಂದು ಕೆಜಿ ಬೆಳ್ಳಿ ಬೆಲೆ ದೇಶೀಯ ಮಾರುಕಟ್ಟೆಯಲ್ಲಿ ಇದೀಗ 49,990 ರೂ. ಆಗಿದೆ.

ಮದುವೆ, ಮುಂಜಿ ಪ್ಲ್ಯಾನ್ ಇದೆಯಾ?: 45 ಸಾವಿರ ರೂ. ಗಡಿ ದಾಟಲಿದೆ ಚಿನ್ನ!

ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆಯತ್ತ ಗಮನಹರಿಸುವುದಾದರೆ...

ರಾಷ್ಟ್ರ ರಾಜಧಾನಿ ನವದೆಹಲಿ:
ಚಿನ್ನ: 40,060 ರೂ.
ಬೆಳ್ಳಿ: 49,990 ರೂ.

ವಾಣಿಜ್ಯ ರಾಜಧಾನಿ ಮುಂಬೈ:
ಚಿನ್ನ: 40,010 ರೂ.
ಬೆಳ್ಳಿ: 49,990 ರೂ.


ಪ.ಬಂಗಾಳ ರಾಜಧಾನಿ ಕೋಲ್ಕತ್ತಾ:
ಚಿನ್ನ: 40,310 ರೂ.
ಬೆಳ್ಳಿ: 49,990 ರೂ.

ತಮಿಳುನಾಡು ರಾಜಧಾನಿ ಚೆನ್ನೈ:
ಚಿನ್ನ: 39,230 ರೂ.
ಬೆಳ್ಳಿ: 49,990 ರೂ.

ರಾಜ್ಯ ರಾಜಧಾನಿ ಬೆಂಗಳೂರು:
ಚಿನ್ನ: 38,410 ರೂ.
ಬೆಳ್ಳಿ: 49,990 ರೂ.