Asianet Suvarna News Asianet Suvarna News

Gold Silver Price Today: ಮತ್ತಷ್ಟು ತುಟ್ಟಿಯಾದ ಬಂಗಾರ: ದೇಶದಲ್ಲಿ ಇಂದಿನ ಬೆಲೆ ವಿವರ ಹೀಗಿದೆ..

ನೀವು ಚಿನ್ನ, ಬೆಳ್ಳಿ ಆಭರಣ ಖರೀದಿಗೆ ಪ್ಲ್ಯಾನ್‌ ಮಾಡಿದ್ದೀರಾ.. ಯಾವ್ಯಾವ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಬಗ್ಗೆ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ..
 

gold and silver price november 13th 2022 in karnataka ash
Author
First Published Nov 13, 2022, 11:19 AM IST

Gold Rate on November 13th 2022: ದೇಶದಲ್ಲಿ ಜನಸಂಖ್ಯೆ ಹಾಗೂ ಶುಭ ಸಮಾರಂಭಗಳ ಸಂಖ್ಯೆ ಹೆಚ್ಚಿರುವಂತೆ, ಆಭರಣ (Jewellery) ಪ್ರಿಯರ ಸಂಖ್ಯೆ ಹೆಚ್ಚೇ ಇದೆ. ಅದರಲ್ಲೂ, ಮಹಿಳೆಯರು ಸಾಮಾನ್ಯವಾಗಿ ಆಭರಣ ಪ್ರಿಯರಾಗಿದ್ದು, ಈ ಹಿನ್ನೆಲೆ ಆಭರಣಗಳ ಖರೀದಿ, ವಹಿವಾಟು ಹೆಚ್ಚಿರುತ್ತದೆ. ಅಲ್ಲದೆ, ಚಿನ್ನ (Gold), ಬೆಳ್ಳಿ (Silver) ದರ ಇಳಿಕೆಯಾದರೆ ಮಹಿಳೆಯರ ಮೊಗದಲ್ಲಿ ನಗು ಅರಳುತ್ತದೆ. ಈ ಹಿನ್ನೆಲೆ ಪ್ರತಿನಿತ್ಯ ಹಲವರು ಚಿನ್ನ, ಬೆಳ್ಳಿ ದರವನ್ನು ಪರಿಶೀಲಿಸುತ್ತಾರೆ. ನೀವೂ ಸಹ ಚಿನ್ನ, ಬೆಳ್ಳಿ ಖರೀದಿಗೆ ಪ್ಲ್ಯಾನ್‌ ಮಾಡಿದ್ದೀರಾ..? ಇಂದು ಬೆಂಗಳೂರಿನಲ್ಲಿ ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ ಎಂಬ ಬಗ್ಗೆ ತಿಳ್ಕೋಬೇಕಾ.. ಇಲ್ಲಿದೆ ವಿವರ..

ಇಂದು ಬೆಂಗಳೂರು ಸೇರಿ ದೇಶಾದ್ಯಂತ ಬಂಗಾರದ ದರದಲ್ಲಿ ಮತ್ತೆ ಹೆಚ್ಚಾಗಿದೆ. ಇನ್ನೊಂದೆಡೆ, ಬೆಂಗಳೂರಲ್ಲಿ ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ, ಉಳಿದೆಡೆ ದರ ಕಡಿಮೆಯಾಗಿದೆ. ಇಂದಿನ ಬೆಲೆ ವಿವರ ಹೀಗಿದೆ ನೋಡಿ..

ಇದನ್ನು ಓದಿ: Petrol, Diesel Price Today: ಭಾನುವಾರ ನಿಮ್ಮ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಹೇಗಿದೆ ನೋಡಿ..

ಒಂದು ಗ್ರಾಂ ಚಿನ್ನ (1GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,826
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,264

ಎಂಟು ಗ್ರಾಂ ಚಿನ್ನ (8GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 38,608
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 42,112

ಹತ್ತು ಗ್ರಾಂ ಚಿನ್ನ (10GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 48,260
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 52,640

ನೂರು ಗ್ರಾಂ ಚಿನ್ನ (100GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ.  4,82,600
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,26,400

ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ.    48,260 ರೂ. ಆಗಿದ್ದು, ನಿನ್ನೆಗಿಂತ ದರ ಹೆಚ್ಚಾಗಿದೆ. ಇನ್ನು, ದೇಶದ ಪ್ರಮುಖ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 48,930, ರೂ. 48,260, ರೂ. 48,260 ಇದ್ದು, ನಿನ್ನೆಯ ಬೆಲೆಗಿಂತ ಏರಿಕೆಯಾಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ಸಹ ಚಿನ್ನದ ಬೆಲೆ ಭಾನುವಾರ 48,360 ರೂ. ಆಗಿದ್ದು, ನಿನ್ನೆಗಿಂತ ಬೆಲೆ ಮತ್ತಷ್ಟು ತುಟ್ಟಿಯಾಗಿದೆ.

ಇಂದಿನ ಬೆಳ್ಳಿ ದರ
ಇನ್ನು, ದೇಶದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ - ಇಳಿಕೆಯಾದಂತೆಯೂ ಚಿನ್ನ - ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. 

ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್
ದೇಶದ ಹಲವು ನಗರಗಳಲ್ಲಿ ಇಂದು ಬಂಗಾರದ ದರ ಹೆಚ್ಚಾಗಿದ್ದು, ಆದರೆ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 675, ರೂ. 6,750 ಹಾಗೂ ರೂ. 67,500 ಗಳಾಗಿವೆ. ಇನ್ನು, ದೇಶದ ಇತರೆ ಪ್ರಮುಖ ನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 67,500 ಆಗಿದ್ದರೆ, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ರೂ. 61,700, ಕೋಲ್ಕತ್ತದಲ್ಲಿ ರೂ. 61,700 ಹಾಗೂ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸಹ ಇಂದಿನ ಬೆಳ್ಳಿ ದರ ರೂ. 61,700 ಆಗಿದೆ.

Follow Us:
Download App:
  • android
  • ios