ಗೋ ಏರ್ ನಲ್ಲಿ ಅತೀ ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಮಾಡಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Aug 2018, 12:51 PM IST
GoAir Offers On Flight Tickets
Highlights

ಮಾನ್ ಸೂನ್ ನಲ್ಲಿ ವಿಮಾಣ ಪ್ರಯಾಣದ ದರದಲ್ಲಿ ಭರ್ಜರಿ ಆಫರ್ ನೀಡುತ್ತಿರುವ ವಿಮಾನಯಾನ ಸಂಸ್ಥೆಗಳು ಒಂದರ ಮೇಲೆ ಇನ್ನೊಂದು ಪೈಪೋಟಿಗೆ ಇಳಿದಿವೆ. ಇದೀಗ ಗೋ ಏರ್ ಕೂಡ ಭರ್ಜರಿ ಆಫರ್ ಒಂದನ್ನು ಪ್ರಕಟ ಮಾಡಿದೆ.

ಮುಂಬೈ: ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಇಂಡಿಗೋ ಇತ್ತೀಚೆಗಷ್ಟೇ ಒಂದು ಟಿಕೆಟ್‌ಗೆ 1212 ರು.ನಂತೆ 12 ಲಕ್ಷ ಸೀಟುಗಳನ್ನು ಬುಕ್ ಮಾಡುವ ಅವಕಾಶ ಕಲ್ಪಿಸಿತ್ತು. ಇದಕ್ಕೆ ಸಡ್ಡು ಹೊಡೆಯಲು ಮುಂದಾಗಿರುವ ಗೋಏರ್, ಭಾರೀ ರಿಯಾಯಿತಿ ದರದಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದೆ.

ಅದರ ಪ್ರಕಾರ, ಪ್ರತೀ ಸೀಟಿಗೆ 1099 ರು. ರಿಯಾಯತಿ ದರದಲ್ಲಿ 10 ಲಕ್ಷ ಸೀಟುಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಈ ಸೀಟುಗಳನ್ನು ಗ್ರಾಹಕರು ಆ.4ರಿಂದ 2018 ರ ಡಿಸೆಂಬರ್ 31ರ ಒಳಗೆ ಯಾವ ದಿನಾಂಕ ಬೇಕಾದರೂ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು. ಆದರೆ, ಈ ಕೊಡುಗೆ ಆ.9 ರವರೆಗೂ ಮಾತ್ರ ಇರಲಿದೆ.

loader