World richest nation;ಅಮೆರಿಕ ಹಿಂದಿಕ್ಕಿ ವಿಶ್ವದ ಶ್ರೀಮಂತ ದೇಶವಾಗಿ ಹೊರಹೊಮ್ಮಿದ ಚೀನಾ!
- ವಿಶ್ವದ ದೊಡ್ಡಣ್ಣ ಅಮೆರಿಕಾಗೆ ಶಾಕ್ ನೀಡಿದ ಡ್ರ್ಯಾಗನ್ ರಾಷ್ಟ್ರ
- ವಿಶ್ವದ ಶ್ರೀಮಂತ ದೇಶ ಹಣೆ ಪಟ್ಟಿ ಚೀನಾ ಪಾಲು
- 120 ಟ್ರಿಲಿಯನ್ ಡಾಲರ್ ಏರಿಕೆ ಕಂಡ ಚೀನಾ ಸಂಪತ್ತು
ಬೀಜಿಂಗ್(ನ.17): ಕೊರೋನಾ(Coronavirus) ಹೊಡೆತ, ಭೀಕರ ಪ್ರವಾಹ(Flood) ಸೇರಿದಂತೆ ಹಲವು ಅಡೆ ತಡೆ ಎದುರಿಸಿದ ಚೀನಾ(China) ಇದೀಗ ವಿಶ್ವದ ದೊಡ್ಡಣ್ಣ ಅಮೆರಿಕಾಗೆ(America) ಶಾಕ್ ನೀಡಿದೆ. ವಿಶ್ವದ ಅತೀ ಶ್ರೀಮಂತ ರಾಷ್ಟ್ರ ಅನ್ನೋ ಹಣೆ ಪಟ್ಟಿ ಹೊತ್ತುಕೊಂಡಿದ್ದ ಅಮೆರಿಕ ಇದೀಗ ಈ ಖ್ಯಾತಿಯನ್ನು ಬಿಟ್ಟುಕೊಡಬೇಕಾಗಿದೆ. ಕಾರಣ ಚೀನಾ ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಅತೀ ಶ್ರೀಮಂತ ರಾಷ್ಟ್ರವಾಗಿ(World richest nation) ಹೊರಹೊಮ್ಮಿದೆ.
ಮೆಕೆನ್ಸಿ ಅಂಡ್ ಕೋ ನಡೆಸಿದ ಸಂಶೋಧನಾ ವರದಿ ಬಿಡುಗಡೆಯಾಗಿದೆ. ಈ ವರದಿಯಲ್ಲಿ ಚೀನಾದ ಸಂಪತ್ತು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ. ಇಷ್ಟೇ ಅಲ್ಲ ಅಮೆರಿಕವನ್ನು ಹಿಂದಿಕ್ಕಿ ಶ್ರೀಮಂತ ರಾಷ್ಟ್ರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಶೋಧನಾ ವರದಿ ಪ್ರಕಾರ ಚೀನಾದ ಸಂಪತ್ತು ಕಳೆದೆರಡು ದಶಕದಲ್ಲಿ ಯಾರ ಊಹಿಸದ ರೀತಿಯಲ್ಲಿ ಏರಿಕೆಯಾಗಿದೆ. 2000ನೇ ಇಸವಿಯಲ್ಲಿ ಚೀನಾದ ಸಂಪತ್ತು 154 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. ಎರಡು ದಶಕಗಳ ಬಳಿಕ ಅಂದರೆ 2020ರ ವೇಳೆ ಚೀನಾ ಸಂಪತ್ತು 514 ಟ್ರಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ.
ಮುಂಬೈ To ಬೆಂಗಳೂರು; ಇಲ್ಲಿದೆ ಭಾರತದ 10 ಶ್ರೀಮಂತ ನಗರದ ಲಿಸ್ಟ್!
ವಿಶ್ವದ ಆದಾಯದಲ್ಲಿ ಶೇಕಡಾ 60 ರಷ್ಟು ಪಾಲು ಹೊಂದಿರುವ ಟಾಪ್ 10 ರಾಷ್ಟ್ರಗಳ ಸಂಪತ್ತು ಕುರಿತ ಸಂಶೋಧನೆ ವರದಿ ತಯಾರಿಸಲಾಗಿದೆ. ಇದರಲ್ಲಿ ಚೀನಾ ಇದೀಗ ಮೊದಲ ಸ್ಥಾನಕ್ಕೇರಿದೆ. ವಿಶ್ವದ ಸಂಪತ್ತು ಏರಿಕೆಯ 3ನೇ 1 ಭಾಗ ಚೀನಾದಲ್ಲಿ ಆಗಿದೆ. ಚೀನಾದ ಸಂಪತ್ತು 2000ನೇ ಇಸವಿಯಲ್ಲಿ 7 ಟ್ರಿಲಿಯನ್ ಅಮೆರಿಕನ್ ಡಾಲರ್‌ನಿಂದ 2020ರ ವೇಳೆಗೆ 120 ಟ್ರಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ. ಈ ಅಂಕಿ ಅಂಶ ವಿಶ್ವ ವ್ಯಾಪಾರ ಸಂಘಟನೆ(WTO) ಸದಸ್ಯ ಪಡೆದುಕೊಳ್ಳುವ ಒಂದು ವರ್ಷದ ಹಿಂದಿನದ್ದಾಗಿದೆ.
ವಿಶ್ವದ ಸಂಪತ್ತಿನಲ್ಲಿ ಶೇಕಡಾ 60 ರಷ್ಟು ಪಾಲು ಹೊಂದಿರುವ ರಾಷ್ಟ್ರಗಳ ಸಂಪತ್ತು ಅಧ್ಯಯನದಲ್ಲಿ ಚೀನಾ, ಅಮರಿಕ ಹೊರತು ಪಡಿಸಿದರೆ, ಜರ್ಮನಿ, ಫ್ರಾನ್ಸ್, ಯುಕೆ, ಜಪಾನ್, ಸ್ವೀಡನ್, ಮೆಕ್ಸಿಕೋ, ಕೆನಡಾ ಮತ್ತು ಆಸ್ಟ್ರೇಲಿಯಾ ದೇಶಗಳ ಸಂಪತ್ತಿನ ಸಮೀಕ್ಷೆ ಮಾಡಲಾಗಿದೆ. ಅತೀ ಹೆಚ್ಚು ಸಂಪತ್ತು ಹೊಂದಿರುವ ಈ 10 ರಾಷ್ಟ್ರಗಳ ಪೈಕಿ ಇದೀಗ ಚೀನಾ ಮೊದಲ ಸ್ಥಾನ ಪಡೆದುಕೊಂಡಿದೆ. ಚೀನಾ ಶ್ರೀಮಂತ ರಾಷ್ಟ ಎನಿಸಿಕೊಂಡಿದೆ
ಬೆಜೋಸ್, ಮಸ್ಕ್ ಸಾಲಿಗೆ ರಿಲಯನ್ಸ್ ಒಡೆಯ: 100 ಶತಕೋಟಿ ಡಾಲರ್ ಕ್ಲಬ್‌ಗೆ ಅಂಬಾನಿ!
ನಿವ್ವಳ ಮೌಲ್ಯದಲ್ಲಿ ಚೀನಾ ಸಂಪತ್ತು ಅಮೆರಿಕಾಗಿಂತ ಹೆಚ್ಚಿದೆ. 2000ನೇ ಇಸವಿಯಲ್ಲಿ 7 ಟ್ರಿಲಿಯನ್ ಅಮೆರಿಕನ್ ಡಾಲರ್ ಇದ್ದ ಈ ಸಂಪತ್ತು, 2020ರಲ್ಲಿ 120 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಕಳೆದ 20 ವರ್ಷಗಳಲ್ಲಿ 113 ಟ್ರಿಲಿಯನ್ ಅಮೆರಿಕನ್ ಡಾಲರ್ ಏರಿಕೆಯಾಗಿದೆ.
ಜಾಗತಿಕ ನಿವ್ವಳ ಮೌಲ್ಯದ ಶೇಕಡಾ 68 ರಷ್ಟು ಸಂಪತ್ತು ರಿಯಲ್ ಎಸ್ಟೇಟ‌್‌ನಲ್ಲಿ ಅಡಕವಾಗಿದೆ. ಇನ್ನುಳಿದ ಸಂಪತ್ತು ಮೂಲಸೌಕರ್ಯ, ಯಂತ್ರೋಪಕರಣ, ಸಲಕರೆ ಸೇರಿದಂತೆ ಇತರ ಮೂಲಗಳಲ್ಲಿದೆ. ವಿಶ್ವದ ಸಂಪತ್ತು ಸಂಶೋಧನೆ ವರದಿಯಲ್ಲಿ ಜಾಗತಿಕ ಹಣಕಾಸು ಆಸ್ತಿಗಳನ್ನು ಪರಿಗಣಿಸಿಲ್ಲ. ಚೀನಾದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಸಂಪತ್ತಿನ ಪ್ರಮುಖ ಮೂಲವಾಗಿದೆ ಎಂದು ವರದಿಯಲ್ಲಿ ಹೇಳಿದೆ. ಆದರೆ ಇದು ಹಣಕಾಸಿನ ಬಿಕ್ಕಟ್ಟು, ನಿವಾಸ ಬಿಕ್ಕಟ್ಟು ಸೇರಿದಂತೆ ಇತರ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಮಕೆನ್ಸಿ ಅಂಡ್ ಕೋ ವರದಿಯಲ್ಲಿ ಹೇಳಿದೆ.
ರಾಕೆಟ್ ವೇಗದಲ್ಲಿ ಚೀನಾ ಸಂಪತ್ತು ಏರಿಕೆಯಾಗಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೋನಾ ವರ್ಷಗಳನ್ನು ಹೊರತುಪಡಿಸಿದರೆ ಚೀನಾ ಇತರ ಎಲ್ಲಾ ರಾಷ್ಟ್ರಗಳಿಗಿಂತ ಸಂಪತ್ತುಗಳಿಕೆಯಲ್ಲಿ ಮುಂಚೂಣಿಯಲ್ಲಿದೆ. ಕಳೆದ ಎರಡು ವರ್ಷ ಚೀನಾ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರದ ಸಂಪತ್ತು ಕುಸಿದಿದೆ ಎಂದು ತಜ್ಞರು ಹೇಳಿದ್ದಾರೆ.