ಪ್ರಭಾವಿಗಳ ಪ್ರಭಾವ ಕಡಿಮೆಯಾಗ್ತಿದೆ, ಸ್ನೇಹಿತರ ಮಾತು ಕೇಳ್ತಿದ್ದಾರೆ Gen Z ಗ್ರಾಹಕರು
ಸಾಮಾಜಿಕ ಜಾಲತಾಣ, ಟಿವಿ ಮೇಲೆ ವಸ್ತುಗಳ ಖರೀದಿಗೆ ಸಂಬಂಧಿಸಿದಂತೆ ಪ್ರಭಾವಿ ವ್ಯಕ್ತಿಗಳು ಎಷ್ಟೇ ಜಾಹೀರಾತು ನೀಡಿದ್ರೂ ಅದು ಈಗಿನ ಜನರ ಮನಸ್ಸು ನಾಟೋದು ಕಷ್ಟವಿದೆ. ಈಗಿನ ಜನರು ಅಂದ್ರೆ ಜಿನ್ ಝೆಡ್ ಗೆ ಸೇರುವ ಜನರು ಖರೀದಿ, ಸೇವೆ ವಿಷ್ಯದಲ್ಲಿ ಪ್ರಸಿದ್ಧಿಗಿಂತ ಅನುಭವಕ್ಕೆ ಬೆಲೆ ನೀಡ್ತಿದ್ದಾರೆ.
ಭಾರತ ಮಾತ್ರವಲ್ಲ ವಿದೇಶದ ಜಿನ್ ಝೆಡ್ ಗ್ರಾಹಕರ ಖರೀದಿ ವಿಷ್ಯದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅವರು ಯಾವುದೇ ವಸ್ತುಗಳನ್ನು ಖರೀದಿ ನಿರ್ಧಾರವನ್ನು ಮಾಡುವಾಗ ಪ್ರಭಾವಿ ಅಥವಾ ಸೆಲೆಬ್ರಿಟಿಗಳಿಗಿಂತ ಸ್ನೇಹಿತರ ಶಿಫಾರಸನ್ನು ತೆಗೆದುಕೊಳ್ಳುವ ಸಾಧ್ಯತೆ ಶೇಕಡಾ 50 ರಷ್ಟು ಹೆಚ್ಚು ಎಂಬ ಸಂಗತಿ ಬಹಿರಂಗವಾಗಿದೆ.
ಭಾರತೀಯ Gen Z ಚಾಲಿತ ಯುವ ಮಾಧ್ಯಮ ಮತ್ತು ಸಂಶೋಧನಾ ಸಂಸ್ಥೆ Yuva ನಡೆಸಿದ ಸಮೀಕ್ಷೆ (Survey) ಯಲ್ಲಿ ಈ ಸಂಗತಿ ಹೊರಬಿದ್ದಿದೆ. ನಾಟ್ ಆಲ್ ಜಿನ್ ಝೆಡ್ ಹೆಸರಿನಲ್ಲಿ ಈ ವರದಿಯನ್ನು ಮಂಡಿಸಲಾಗಿದೆ. ದೇಶದ ಟೈರ್ I, ಟೈರ್ II ಮತ್ತು ಟೈರ್ III ನಗರಗಳು ಮತ್ತು 20 ಪಟ್ಟಣಗಳಲ್ಲಿ ನೆಲೆಸಿರುವ 900ಕ್ಕೂ ಹೆಚ್ಚು Gen Z ಜನರ ಪ್ರತಿಕ್ರಿಯೆಗಳನ್ನು ಆಧರಿಸಿ ಈ ವರದಿ ನೀಡಲಾಗಿದೆ.
Gen Z ಅಂದ್ರೇನು? : ವರದಿಯ ವಿವರ ನೀಡುವ ಮೊದಲು ನಾವು ನಿಮಗೆ ಜಿನ್ ಝೆಡ್ ಅಂದ್ರೇನು ಎಂಬುದನ್ನು ಹೇಳ್ತೇವೆ. 1997 ಮತ್ತು 2012 ರ ನಡುವೆ ಜನಿಸಿದ ಜನರನ್ನು ಜಿನ್ ಝೆಡ್ ವರ್ಗಕ್ಕೆ ಸೇರಿಲಾಗುತ್ತದೆ. ಅವರು ತಮ್ಮ ಜೀವನಶೈಲಿ ಮತ್ತು ಖರೀದಿ ಅಭ್ಯಾಸಗಳಲ್ಲಿ ವಿಶಿಷ್ಟವಾದ ವರ್ತನೆಗಳನ್ನು ತೋರಿಸುತ್ತಾರೆ. ಎರಡು ಶತಕೋಟಿಗಿಂತ ಹೆಚ್ಚಿನ ಜನರು ಜಿನ್ ಝೆಡ್ ನಲ್ಲಿ ಬರ್ತಾರೆ. ವಿಶ್ವದ ಒಟ್ಟೂ ಜನಸಂಖ್ಯೆಯ ಸುಮಾರು ಶೇಕಡಾ 25 ರಷ್ಟು ಜನಸಂಖ್ಯೆ ಜಿನ್ ಝೆಡ್ ನವರದ್ದಿದೆ.
ಅಂಬಾನಿ ಬಳಿ ಇದೆ ಬಣ್ಣ ಬದಲಾಯಿಸೋ ರೋಲ್ಸ್ ರಾಯ್ಸ್ ಕಾರು: ಹೇಗಿದೆ ನೋಡಿ 13 ಕೋಟಿ ಮೌಲ್ಯದ SUV?
ತಾವು ನಂಬುವ ಜನರ ಉಲ್ಲೇಖ ಹಾಗೂ ಶಿಫಾರಸ್ಸಿಗೆ ಹೆಚ್ಚು ಬೆಲೆ ನೀಡುತ್ತೇವೆ. ಅವರಲ್ಲಿ ಸ್ನೇಹಿತರು ಹಾಗೂ ಕುಟುಂಬಸ್ಥರು ಸೇರುತ್ತಾರೆ ಎಂದು ಜಿನ್ ಝೆಡ್ ಜನರು ಹೇಳಿದ್ದಾರೆ. ಪ್ರಭಾವಿಗಳ ಅಭಿಪ್ರಾಯಕ್ಕೆ ಪ್ರತ್ಯೇಕ ಮಹತ್ವವಿದೆ ಎಂಬುದನ್ನು ಅವರು ಒಪ್ಪಿಕೊಳ್ತಾರೆ. ಪ್ರಭಾವಿಗಳು ವಸ್ತು ಮತ್ತು ಉತ್ಪನ್ನಗಳನ್ನು ಪರಿಚಯಿಸುತ್ತಾರೆ. ಅದರ ಬಳಕೆ ಬಗ್ಗೆ ಮಾಹಿತಿ ನೀಡುತ್ತಾರೆ. ಆದ್ರೆ ಅದನ್ನು ಖರೀದಿಸುವಂತೆ ಅವರು ಪ್ರೋತ್ಸಾಹಿಸಬೇಕಾಗಿಲ್ಲ. ಇಲ್ಲಿ ಸ್ನೇಹಿತರು ಹಾಗೂ ಕುಟುಂಬದವರ ಪಾತ್ರ ಮುಖ್ಯ ಎನ್ನುವುದು ಜಿನ್ ಝೆಡ್ ಗುಂಪಿನ ಅಭಿಪ್ರಾಯವಾಗಿದೆ. ಪ್ರಭಾವಿ ವ್ಯಕ್ತಿಗಳು ಶುಲ್ಕಕ್ಕಾಗಿ ವಸ್ತುಗಳ ಪ್ರಚಾರ ಮಾಡುತ್ತಾರೆ. ಈ ವಸ್ತುಗಳನ್ನು ದೀರ್ಘಕಾಲದಿಂದ ನಾನು ಬಳಸ್ತಿದ್ದೇನೆ ಎಂದು ಎಲ್ಲಿಯೂ ಹೇಳೋದಿಲ್ಲ. ಒಂದ್ವೇಳೆ ಬಳಕೆ ಮಾಡುತ್ತಿದ್ದರೂ ಹಣಕ್ಕಾಗಿ ಅವರು, ಅದ್ರಲ್ಲಿರುವ ಕೊರತೆಯನ್ನು ಮುಚ್ಚಿಡುವ ಸಾಧ್ಯತೆಯಿರುತ್ತದೆ ಎಂದು ಇವರು ನಂಬುತ್ತಾರೆ.
ಸಮೀಕ್ಷೆಯಲ್ಲಿ ಜಿನ್ ಝೆಡ್ ಜನರ ಇನ್ನೂ ಅನೇಕ ವಿಷ್ಯಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಇವರು ಸಾಮಾಜಿಕ ಕಾರಣಗಳನ್ನು ಬೆಂಬಲಿಸುವ ಬ್ರ್ಯಾಂಡ್‌ಗಳನ್ನು ಬೆಂಬಲಿಸಲು ಸಿದ್ಧರಿದ್ದಾರೆ. ಆದರೆ ಸುಸ್ಥಿರತೆಯ ಬಗ್ಗೆ ಕಾಳಜಿ ವಹಿಸುತ್ತಾರೆ. Gen Z ನ ಶೇಕಡಾ 71 ರಷ್ಟು ಜನರು ಪರಿಸರ ಸ್ನೇಹಿ ಬ್ರ್ಯಾಂಡ್‌ಗಳನ್ನು ಬಯಸುತ್ತಾರೆ. ಶೇಕಡಾ 77 ರಷ್ಟು ಜನರು ಏನನ್ನಾದರೂ ಖರೀದಿಸುವಾಗ ಬೆಲೆಯನ್ನು ಪರಿಗಣಿಸುತ್ತಾರೆ.
ಲಂಡನ್ ರಸ್ತೇಲಿ ಮಸಾಲೆ ಮಂಡಕ್ಕಿ ಘಮ.. ಭಾರತೀಯ ಸ್ಟ್ರೀಟ್ ಫುಡ್ ಮಾರ್ತಾರೆ ವಿದೇಶಿಗ
ಜಿನ್ ಝೆಡ್ ಜನರು ಹಿಂದಿನ ತಲೆಮಾರಿನ ಜನರಿಗಿಂತ ಭಿನ್ನವಾಗಿದ್ದಾರೆ. ಹಿಂದಿನ ತಲೆಮಾರಿನ ಜನರು ಬಾಲಿವುಡ್ ಮತ್ತು ಕ್ರೀಡಾ ವ್ಯಕ್ತಿಗಳಿಂದ ಹೆಚ್ಚು ಪ್ರಭಾವಿತರಾಗಿದ್ದರು. ನಾವು ಯಾರನ್ನು ಫಾಲೋ ಮಾಡ್ಬೇಕು ಎಂಬ ಬಗ್ಗೆಯೂ ಈ ಜನಾಂಗದವರು ಹೆಚ್ಚು ಆಲೋಚನೆ ಮಾಡುತ್ತಾರೆ. ಜೆನ್ Z ಶಾಪರ್‌ಗಳು ಸಮುದಾಯ-ಚಾಲಿತರಾಗಿದ್ದಾರೆ ಮತ್ತು ಬ್ರ್ಯಾಂಡ್‌ಗಳಿಗೆ ನಿಷ್ಠರಾಗುವುದಕ್ಕಿಂತ ಉತ್ತಮ ಉತ್ಪನ್ನಗಳನ್ನು ಹುಡುಕುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇ ಕಾಮರ್ಸ್ ಕಂಪನಿಗಳು ಕೂಡ ಜಿನ್ ಝೆಡ್ ಜನರನ್ನು ಬೆನ್ನು ಹತ್ತಿವೆ. ಮುಂದಿನ ಪೀಳಿಗೆಯ ಶಾಪರ್ಸ್‌ಗಳನ್ನು ಓಲೈಸಲು ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳ ನಡುವೆ ತೀವ್ರ ಪೈಪೋಟಿ ಇದೆ.