Asianet Suvarna News Asianet Suvarna News

'ಮೂರು ವರ್ಷ ಮನೆ ಬಾಡಿಗೆ ಏರಿಸೋ ಹಾಗಿಲ್ಲ..' ಹೊಸ ರೂಲ್ಸ್‌ ಶಿಫಾರಸು ಮಾಡಿದ ಸರ್ಕಾರ!

ಮನೆ ಬಾಡಿಗ ವಿಪರೀತವಾಗಿ ಏರಿಕೆ ಆಗುತ್ತಿರುವುದನ್ನು ಗಮನಸಿರುವ ಈ ಯುರೋಪ್‌ ರಾಷ್ಟ್ರ, ಹೊಸ ಶಿಫಾರಸು ಮಾಡಿದ್ದು, ಮೂರು ವರ್ಷಗಳ ಕಾಲ ಯಾರೂ ಕೂಡ ಮನೆ ಬಾಡಿಗೆಯನ್ನು ಏರಿಸುವ ಹಾಗಿಲ್ಲ ಎಂದಿದೆ.

Germany ruling Social Democratic party is set to propose a three year freeze on housing rent increases san
Author
First Published Aug 28, 2023, 6:01 PM IST

ಬರ್ಲಿನ್‌ (ಆ.28): ಇಡೀ ಜರ್ಮನಿಯಲ್ಲಿ ಮನೆಗಳ ಬಾಡಿಗೆ ವಿಪರೀತ ಏರಿಕೆ ಆಗಿರುವ ಹಿನ್ನಲೆಯಲ್ಲಿ  ಜರ್ಮನಿಯ ಆಡಳಿತಾರೂಢ ಸೋಶಿಯಲ್ ಡೆಮಾಕ್ರಟಿಕ್ ಪಕ್ಷವು ದೇಶಾದ್ಯಂತ ಮೂರು ವರ್ಷಗಳ ಮನೆ ಮಾಲೀಕರು ಬಾಡಿಗೆ ದರವನ್ನು ಏರಿಕೆ ಮಾಡುವಂತಿಲ್ಲ ಎನ್ನುವ ಶಿಫಾರಸು ಮಾಡಿದೆ. ಯುರೋಪ್‌ನ ಅತಿದೊಡ್ಡ ಆರ್ಥಿಕತೆಯಾಗಿರುವ ಜರ್ಮನಿಯಲ್ಲಿ ಬಾಡಿಗೆದಾರರು ವಸತಿ ವೆಚ್ಚವನ್ನು ನಿಭಾಯಿಸಲಾಗದೆ ಹೆಣಗಾಡುತ್ತಿದ್ದಾರೆ. ಸರ್ಕಾರ ಅವರ ನೆರವಿಗೆ ಬರಲು ಈ ಶಿಫಾರಸು ಮಾಡಿದೆ. ಬಾಡಿಗೆದಾರರು ಉಸಿರಾಡುವಂಥ ವಾತಾವರಣವನ್ನು ನಾವು ನಿರ್ಮಾಣ ಮಾಡಬೇಕಿದೆ. ಮುಂದಿನ ಮೂರು ವರ್ಷಗಳ ರೆಂಟ್‌ ಫ್ರೀಜ್‌ಅನ್ನು ನಾವು ಪ್ರಸ್ತಾಪ ಮಾಡಿದ್ದೇವೆ' ಎಂದು ಹಿರಿಯ ಎಸ್‌ಪಿಡಿ ಶಾಸಕ ವೆರೆನಾ ಹುಬರ್ಟ್ಜ್ ಬಿಲ್ಡ್ ಆಮ್ ಸೊನ್‌ಟ್ಯಾಗ್‌ಗೆ ತಿಳಿಸಿದ್ದಾರೆ. ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಸೋಮವಾರ ದೇಶದ ಜೀವನ ವೆಚ್ಚದ ಬಿಕ್ಕಟ್ಟನ್ನು ನಿಭಾಯಿಸಲು ಕ್ರಮಗಳನ್ನು ರೂಪಿಸಲಿದ್ದಾರೆ ಎಂದು ಹೇಳಿದರು. ಜರ್ಮನಿಯ ಮೂರು-ಪಕ್ಷಗಳ ಸಮ್ಮಿಶ್ರ ಸರ್ಕಾರದಲ್ಲಿ SPD ಅತ್ಯಂತ ಹೆಚ್ಚಿನ ಜನಬೆಂಬಲವನ್ನು ಹೊಂದಿದೆ.

ಈ ವರ್ಷ ಇಡೀ ಜರ್ಮನಿಯಲ್ಲಿ ಬಾಡಿಗೆ ದರಗಳು ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಜರ್ಮನಿಯಲ್ಲಿ ಒಂದು ಕಾಲ ಹೇಗಿತ್ತೆಂದರೆ, ಒಂದು ಕುಟುಂಬ ತಮ್ಮ ಜೀವಮಾನಪೂರ್ತಿ ಬಾಡಿಗೆ ಮನೆಯಲ್ಲಿ ವಾಸ ಮಾಡಿದರೂ, ಅವರಿಗೆ ಯಾವುದೇ ಹೊಣೆ ಆಗುತ್ತಿರಲಿಲ್ಲ. ಅಷ್ಟು ಸಾಂಪ್ರದಾಯಿಕವಾಗಿ ಸ್ಥಿರವಾದ ಬೆಲೆಗಳನ್ನು ಹೊಂದಿತ್ತು. ಜರ್ಮನ್ ಫೆಡರಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ ಪ್ರಕಾರ, ಜರ್ಮನಿಯ 41 ಮಿಲಿಯನ್ ಕುಟುಂಬಗಳಲ್ಲಿ, ಶೇಕಡಾ 60 ಕ್ಕಿಂತ ಸ್ವಲ್ಪ ಕಡಿಮೆ ಜನರು ಬಾಡಿಗೆ ವಸತಿಗಳಲ್ಲಿ ವಾಸಿಸುತ್ತಿದ್ದಾರೆ. ಅದರಂದಿಗೆ ಜರ್ಮನ್ನರು ಇತರ ಸರಕುಗಳಿಗೆ ಹೆಚ್ಚಿನ ಬೆಲೆಗಳನ್ನು ಎದುರಿಸುತ್ತಿದ್ದಾರೆ. ಒಟ್ಟಾರೆ ಗ್ರಾಹಕ ಬೆಲೆ ಹಣದುಬ್ಬರವು ಜುಲೈನಿಂದ  ಯೂರೋಜೋನ್ ಸರಾಸರಿ 5.3 ಶೇಕಡಾ ವಿರುದ್ಧ ವರ್ಷದಲ್ಲಿ 6.2 ಶೇಕಡಾ ಏರಿಕೆಯಾಗಿದೆ.

ಆಸ್ತಿ ಮಾರುಕಟ್ಟೆ ಕ್ಯಾಪ್ ಅನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಅಸ್ತಿತ್ವದಲ್ಲಿರುವ ನಿಯಮಗಳು ಮೂರು ವರ್ಷಗಳಲ್ಲಿ ಶೇಕಡಾ 20 ರಷ್ಟು ಹೆಚ್ಚಾಗುತ್ತದೆ - ಅಥವಾ ನಿರ್ದಿಷ್ಟವಾಗಿ ಬಿಗಿಯಾದ ವಸತಿ ಮಾರುಕಟ್ಟೆಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಶೇಕಡಾ 15 ರಷ್ಟು ಹೆಚ್ಚಾಗುತ್ತದೆ. ಜರ್ಮನಿಯ ಸಮ್ಮಿಶ್ರ ಸರ್ಕಾರವು ಈ ಮಿತಿಯನ್ನು 11 ಪ್ರತಿಶತಕ್ಕೆ ಇಳಿಸಲು ಈಗಾಗಲೇ ಒಪ್ಪಿಕೊಂಡಿದೆ. ಆದರೆ, ಜರ್ಮನ್‌ ಸರ್ಕಾರ ಇದು ಜನರ ಜೀವನ ಸುಧಾರಿಸಲು ಸಾಕಾಗುವುದಿಲ್ಲ ಎಂದಿದೆ.

ಸುದ್ದಿ ಸಂಸ್ಥೆ ಡ್ಯೂಷೆ ಪ್ರೆಸ್-ಅಜೆಂಟೂರ್ ವರದಿ ಮಾಡಿರುವ ಪ್ರಕಾರ, ಜರ್ಮನ್‌ ಆಡಳಿತಾರೂಢ ಸರ್ಕಾರವು, ಬೇಡಿಕೆ ಹೆಚ್ಚಿರುವ ನಗರಗಳಲ್ಲಿ ಬಾಡಿಗೆಗಳು ಗರಿಷ್ಠ 6 ಪ್ರತಿಶತದಷ್ಟು ಏರಿಕೆಯಾಗಲು ಅವಕಾಶ ನೀಡುವುದು. ಉಳಿದ ಪ್ರದೇಶಗಳಲ್ಲಿ ಮೂರು ವರ್ಷ ಯಾವುದೇ ಕಾರಣಕ್ಕೂ ಬಾಡಿಗೆ ಮನೆಗಳ ದರಗಳನ್ನು ಏರಿಕೆ ಮಾಡುವಂತಿಲ್ಲ ಎನ್ನುವ ನಿಯಮ ತರುವುದನ್ನು ಒಳಗೊಂಡಿದೆ.

ಬರ್ಲಿನ್ ಮತ್ತು ಲೀಪ್ಜಿಗ್ ನಗರಗಳಲ್ಲಿ ಬಾಡಿಗೆಗಳು ದೊಡ್ಡ ಮಟ್ಟದಲ್ಲಿ ಏರಿವೆ. ಪ್ರಾಪರ್ಟಿ ಪೋರ್ಟಲ್ ಇಮ್ಮೊವೆಲ್ಟ್ ನಡೆಸಿದ ಸಮೀಕ್ಷೆಯು ಮಧ್ಯಮ ಗಾತ್ರದ ನಗರಗಳಲ್ಲಿ ಬಾಡಿಗೆಗಳು ತೀವ್ರವಾಗಿ ಹೆಚ್ಚಿವೆ ಎಂದು ಇತಳಿಸಿದೆ. ನಾರ್ತ್ ರೈನ್-ವೆಸ್ಟ್‌ಫಾಲಿಯಾದ ಡಾರ್ಮಗೆನ್‌ನಲ್ಲಿ, ಕಳೆದ ವರ್ಷದಲ್ಲಿ ಸರಾಸರಿ ಬಾಡಿಗೆಗಳು ಶೇಕಡಾ 18 ರಷ್ಟು ಏರಿಕೆಯಾಗಿದೆ. ಹಾಗೇನಾದರೂ ನಿಯಮಬಾಹಿರವಾಗಿ ಬಾಡಿಗೆ ದರವನ್ನು ಏರಿಸಿದ್ದಲ್ಲಿ ಕಠಿಣ ಶಿಕ್ಷೆ ವಿಧಿಸುವ ಪ್ರಸ್ತಾಪವನ್ನೂ ಮಾಡಲಾಗಿದೆ.

ಬಾಡಿಗೆ ಮನೆಗೂ ಬೆಂಗಳೂರಿನಲ್ಲಿ ಇಂಟರ್ವ್ಯೂ, ಇದು ಸಿಲಿಕಾನ್‌ ಸಿಟಿಯಲ್ಲಿ ಮಾತ್ರ ಸಾಧ್ಯ!

ಉಕ್ರೇನ್‌ ಯುದ್ಧದ ಕಾರಣದಿಂದಾಗಿ ಜರ್ಮನಿಯ ಹೌಸಿಂಗ್‌ ಮಾರ್ಕೆಟ್‌, ಪೂರೈಕೆ ಕೊರತೆಯನ್ನು ಎದುರಿಸುತ್ತಿದೆ. ಆಹಾರ ಹಾಗೂ ಇಂಧನ ಹಣದುಬ್ಬರ ಏರಿಕೆ ಕಂಡಿದೆ. ಅದರೊಂದಿಗೆ ಉಕ್ರೇನ್‌ನಿಂದ 1 ಮಿಲಿಯನ್‌ ನಿರಾಶ್ರಿತರು ದೇಶಕ್ಕೆ ಬಂದಿರುವುದು ಇನ್ನಷ್ಟು ಅವಾಂತರಕ್ಕೆ ಕಾರಣವಾಗಿದೆ.

ಬೆಂಗಳೂರಲ್ಲಿ ಮನೆ ಬಾಡಿಗೆ ಪಡೆಯೋಕು ಡಿಸ್ಟಿಂಕ್ಷನ್ ತಗೋಬೇಕಾ? ಮಾರ್ಕ್ಸ್ ನೋಡಿ ಮನೆ ಕೊಡಲ್ಲ ಎಂದ ಓನರ್

ಹೆಚ್ಚುತ್ತಿರುವ ಬಾಡಿಗೆಗಳ ಹೊರತಾಗಿ, ವಸತಿ ಕೊರತೆ, ವಿಶೇಷವಾಗಿ ಅಗ್ಗದ ಫ್ಲಾಟ್‌ಗಳ ಕೊರತೆಯ ಬಗ್ಗೆಯೂ ಕಾಳಜಿ ಬೆಳೆದಿದೆ. ಹೆಚ್ಚುತ್ತಿರುವ ಬಡ್ಡಿದರಗಳೊಂದಿಗೆ, ವಸತಿ ಕಟ್ಟಡವು ಹೆಚ್ಚು ದುಬಾರಿಯಾಗಿದೆ ಮತ್ತು ಇತ್ತೀಚಿನ ಜರ್ಮನ್ ಅಧ್ಯಯನವು 2023 ರಲ್ಲಿ 700,000 ಫ್ಲಾಟ್‌ಗಳ ಕೊರತೆಯನ್ನು ತಿಳಿಸಿದೆ.

Follow Us:
Download App:
  • android
  • ios