Asianet Suvarna News Asianet Suvarna News

ಡಾಲರ್‌ ಅವಲಂಬನೆ ತಗ್ಗಿಸಲು ಮಹತ್ವದ ಕ್ರಮ: ಮೊದಲ ಸಲ ರುಪಾಯಿಯಲ್ಲೇ ತೈಲ ಬಿಲ್‌ ಪಾವತಿಸಿದ ಭಾರತ

ಭಾರತಕ್ಕೆ ಪ್ರಮುಖ ಇಂಧನ ರಫ್ತು ದೇಶವಾಗಿರುವ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ)ಗೆ ಇದೇ ಮೊದಲ ಬಾರಿಗೆ ರುಪಾಯಿಯಲ್ಲಿ ಭಾರತ ಕಚ್ಚಾತೈಲ ಖರೀದಿಗೆ ಪಾವತಿಯನ್ನು ಮಾಡಿದೆ

An important step to reduce dollar dependence India paid oil bill in rupees for the first time Crude oil payment to UAE in rupees akb
Author
First Published Aug 16, 2023, 7:16 AM IST

ನವದೆಹಲಿ: ಭಾರತಕ್ಕೆ ಪ್ರಮುಖ ಇಂಧನ ರಫ್ತು ದೇಶವಾಗಿರುವ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ)ಗೆ ಇದೇ ಮೊದಲ ಬಾರಿಗೆ ರುಪಾಯಿಯಲ್ಲಿ ಭಾರತ ಕಚ್ಚಾತೈಲ ಖರೀದಿಗೆ ಪಾವತಿಯನ್ನು ಮಾಡಿದೆ. ಈ ಮೂಲಕ ಅಮೆರಿಕದ ಡಾಲರ್‌ ಮೇಲಿನ ಅವಲಂಬನೆಯನ್ನು ತಪ್ಪಿಸುವ ಮಹತ್ವದ ಹೆಜ್ಜೆ ಇರಿಸಲಾಗಿದೆ. ಅಬುಧಾಬಿಯ ನ್ಯಾಷನಲ್‌ ಆಯಿಲ್‌ ಕಂಪನಿಯಿಂದ ಖರೀದಿಸಲಾಗಿದ್ದ ಲಕ್ಷಾಂತರ ಬ್ಯಾರಲ್‌ ಕಚ್ಚಾತೈಲದ ಪಾವತಿಯನ್ನು ಭಾರತದ ಇಂಡಿಯನ್‌ ಆಯಿಲ್‌ (IOC) ರುಪಾಯಿಯಲ್ಲಿ ಮಾಡಿದೆ. ಈ ವಹಿವಾಟನ್ನು ಭಾರತದಲ್ಲಿರುವ ಯುಎಇಯ (UAE)ರಾಯಭಾರ ಕಚೇರಿ ಖಚಿತಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಭೇಟಿಯ ಸಮಯದಲ್ಲಿ ಸ್ಥಳೀಯ ಕರೆನ್ಸಿಗಳಲ್ಲೇ ವ್ಯವಹಾರ ನಡೆಸಲು ಉಭಯ ದೇಶಗಳು ಕಳೆದ ಜುಲೈನಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ರಿಯಲ್‌ ಟೈಮ್‌ ಪೇಮೆಂಟ್‌ (Real Time Payment) ಲಿಂಕ್‌ ಬಳಸಿ ವ್ಯವಹಾರ ನಡೆಸುವುದಕ್ಕೂ ಚಾಲನೆ ನೀಡಲಾಗಿತ್ತು. ಸ್ಥಳೀಯ ಕರೆನ್ಸಿಗಳಲ್ಲೇ ವಹಿವಾಟು ನಡೆಸುವ ಈ ವಿಧಾನವನ್ನು ಜಾಗತಿಕ ಮಾರಾಟದ ಈ ಸಂಕಷ್ಟದ ಸಮಯದಲ್ಲಿ ಮತ್ತಷ್ಟು ದೇಶಗಳು ಅಳವಡಿಸಿಕೊಳ್ಳುವ ಸಾಧ್ಯತೆಗಳಿವೆ. ಇದರ ಮೂಲಕ ಡಾಲರ್‌ನಲ್ಲಿ ನಡೆಯುತ್ತಿದ್ದ ವಿನಿಮಯಕ್ಕೆ ಇತಿಶ್ರೀ ಹಾಡಬಹುದಾಗಿದೆ.

2022-23ರಲ್ಲಿ ಉಭಯ ದೇಶಗಳ ನಡುವೆ ಸುಮಾರು 4.42 ಲಕ್ಷ ಕೋಟಿ ರು.ನಷ್ಟು ವ್ಯವಹಾರ ನಡೆದಿತ್ತು.

ಕಚ್ಚಾ ತೈಲದ ಬೆಲೆ ಇಳಿದರೂ ಇಳಿ​ಯದ ಪೆಟ್ರೋಲ್‌, ಡೀಸೆಲ್‌ ಬೆಲೆ

Follow Us:
Download App:
  • android
  • ios