*ಆನ್ಲೈನ್ ಹಣಕಾಸು ನಿರ್ವಹಣಾ ಸಂಸ್ಥೆ ಕುವೆರ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗ*ಮಹಿಳೆಯರ ಹೂಡಿಕೆ ಹೆಚ್ಚಿರೋ ನಗರಗಳಲ್ಲಿ ದೆಹಲಿಗೆ ಪ್ರಥಮ, ಬೆಂಗಳೂರಿಗೆ ದ್ವಿತೀಯ ಸ್ಥಾನ*ದುಡಿದ ಹಣದ ಮೇಲೆ ಹಕ್ಕು ಸಾಧಿಸುವಲ್ಲಿ ಮಹಿಳೆ ಹಿಂದೆ

Business Desk: ಮಹಿಳೆಯರು (Women) ಇಂದು ಪುರುಷರಿಗೆ (Men) ಸರಿಸಮಾನಾಗಿ ಅನೇಕ ಹುದ್ದೆಗಳನ್ನು ಅಲಂಕರಿಸಿರಬಹುದು, ಆದ್ರೆ ನಾರಿಯರ ಫೈನಾನ್ಷಿಯಲ್ ಪ್ಲ್ಯಾನಿಂಗ್ (Financial Planning) ವಿಚಾರಕ್ಕೆ ಬಂದ್ರೆ ಹಣಕಾಸಿನ (Financial) ಲಿಂಗ ಸಮಾನತೆ (gender equality)ಸಾಧಿಸೋ ಹಾದಿಯಲ್ಲಿ ಭಾರತೀಯ ಸಮಾಜ ಸಾಕಷ್ಟು ಹಿಂದೆ ಬಿದ್ದಿರೋದು ಸ್ಪಷ್ಟವಾಗಿ ಗೋಚರಿಸುತ್ತದೆ. ಆನ್ಲೈನ್ (Online) ಹಣಕಾಸು ನಿರ್ವಹಣಾ ಸಂಸ್ಥೆ ಕುವೆರ (Kuvera) ಮಹಿಳಾ ಹೂಡಿಕೆದಾರರಿಗೆ (Investors) ಸಂಬಂಧಿಸಿ ಸಂಗ್ರಹಿಸಿರೋ ಮಾಹಿತಿ ಪ್ರಕಾರ ಭಾರತದಲ್ಲಿ ಪ್ರತಿ 5 ಹೂಡಿಕೆದಾರರಲ್ಲಿ (Investors) ಕೇವಲ ಒಬ್ಬಳು ಮಹಿಳೆಯಾಗಿರುತ್ತಾಳೆ. ಮಹಿಳೆ ಸಂಪಾದಿಸಿದ್ರೂ ಅದರ ಮೇಲೆ ಹಕ್ಕು ಸಾಧಿಸುವಲ್ಲಿ ಪುರುಷರಿಗಿಂತ ಆಕೆ ಸಾಕಷ್ಟು ಹಿಂದೆ ಬಿದ್ದಿದ್ದಾಳೆ ಎನ್ನೋದಕ್ಕೆ ಈ ಅಂಕಿಅಂಶವೇ ಸಾಕ್ಷಿ.

ದುಡಿದ ಹಣದ ಪ್ಲ್ಯಾನಿಂಗ್ ವಿಚಾರದಲ್ಲಿ ಮಹಿಳೆ ಹಿಂದೆ ಬಿದ್ದಿರಬಹುದು, ಆದ್ರೆ ಒಂದು ವಿಷಯದಲ್ಲಿ ಮಾತ್ರ ಆಕೆ ಪುರುಷರನ್ನು ಮೀರಿಸಿದ್ದಾಳೆ. ಹೌದು, ಕುವೆರ ಸಂಗ್ರಹಿಸಿರೋ ಅಂಕಿಅಂಶಗಳ ಪ್ರಕಾರ ಶೇ.50ಕ್ಕಿಂತಲೂ ಅಧಿಕ ಮಹಿಳೆಯರು ತಮ್ಮ 25ನೇ ವಿವಾಹ ವಾರ್ಷಿಕೋತ್ಸವಕ್ಕೆ ಪುರುಷರಿಗಿಂತ ಹೆಚ್ಚಿನ ಯೋಜನೆ ಮಾಡಿರುತ್ತಾರೆ. ಮಹಿಳೆಯರ ಆರ್ಥಿಕ ಗುರಿಗಳಲ್ಲಿ ನಿವೃತ್ತಿ, ಸ್ವಂತ ಮನೆ ನಿರ್ಮಾಣ ಹಾಗೂ ಮಕ್ಕಳ ಶಿಕ್ಷಣ ಟಾಪ್ ನಲ್ಲಿರುತ್ತವೆ. 

Nykaa ಸ್ಥಾಪಕಿ ಫಲ್ಗುಣಿ ನಾಯರ್: ಬಿಲಿಯನೇರ್ ಉದ್ಯಮಿಯ ಯಶೋಗಾಥೆ

ಇನ್ನೊಂದು ಕುತೂಹಲಕಾರಿಯಾದ ವಿಷಯ ಕೂಡ ಕಂಡುಬಂದಿದೆ. ಅದೇನಪ್ಪ ಅಂದ್ರೆ ಭಾರತದಲ್ಲಿ 6 ಟಾಪ್ ಮೆಟ್ರೋ (Metro) ನಗರಗಳ (Cities) ಹೊರಗಿನ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಮಹಿಳೆಯರ ಹೂಡಿಕೆ(Investment) ವಿಚಾರದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ (NCR) ಮೊದಲ ಸ್ಥಾನದಲ್ಲಿದ್ರೆ ಬೆಂಗಳೂರು (Bengaluru) ಹಾಗೂ ಮುಂಬೈ (Mumbai) ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ. ಪುಣೆ (Pune) ನಾಲ್ಕನೇ ಸ್ಥಾನದಲ್ಲಿದೆ.

ಡಿಜಿಟಲ್ ಹಣಕಾಸು ನಿರ್ವಹಣಾ ಸಂಸ್ಥೆ ಸ್ಕ್ರಿಪ್ ಬಾಕ್ಸ್ ( Scripbox) ನಡೆಸಿದ ಇನ್ನೊಂದು ಸಮೀಕ್ಷೆಯಲ್ಲಿ ಶೇ.30ರಷ್ಟು ಮಹಿಳೆಯರು ಕೋವಿಡ್ -19 ಪೆಂಡಾಮಿಕ್ ಸಂದರ್ಭದಲ್ಲಿ ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿ ಜ್ಞಾನ ಸಂಪಾದನೆಗೆ ಸಮಯ ಸದುಪಯೋಗಪಡಿಸಿಕೊಂಡಿರೋದಾಗಿ ತಿಳಿಸಿದ್ದಾರೆ. ಫೈನಾನ್ಷಿಯಲ್ ಪ್ಲ್ಯಾನಿಂಗ್ ಹಾಗೂ ಹೂಡಿಕೆಗೆ ಸಂಬಂಧಿಸಿದ ಮಾಹಿತಿಗೆ ಶೇ.60ಕ್ಕಿಂತಲೂ ಹೆಚ್ಚು ಮಹಿಳೆಯರು ಡಿಜಿಟಲ್ ಹೂಡಿಕೆ ಪ್ಲ್ಯಾಟ್ ಫಾರ್ಮ್ ಗಳನ್ನು ಅವಲಂಬಿಸಿದ್ರೆ, ಶೇ.20ರಷ್ಟು ಮಂದಿ ಸ್ನೇಹಿತರು ಹಾಗೂ ಕುಟುಂಬದ ಮೇಲೆ ಅವಲಂಬಿತರಾಗಿದ್ದಾರೆ. ಇನ್ನು ಶೇ.15ರಷ್ಟು ಜನರು ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಲೇಖನಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಇನ್ನು ಈ ಸಮೀಕ್ಷೆಯಲ್ಲಿ ಶೇ.70ರಷ್ಟು ಮಹಿಳೆಯರು ತಮ್ಮ ಹಣವನ್ನು ಸ್ವತಂತ್ರವಾಗಿ ಅಥವಾ ಪತಿಯೊಂದಿಗೆ ಸೇರಿ ನಿರ್ವಹಣೆ ಮಾಡುತ್ತಿರೋದಾಗಿ ತಿಳಿಸಿದ್ದಾರೆ. ಕಳೆದ ವರ್ಷದ ಸಮೀಕ್ಷೆಗೆ ಹೋಲಿಸಿದ್ರೆ ಈ ಬಾರಿ ಸ್ವತಂತ್ರವಾಗಿ ಹಣಕಾಸು ನಿರ್ವಹಣೆ ಮಾಡುತ್ತಿರೋ ಮಹಿಳೆಯರ ಸಂಖ್ಯೆಯಲ್ಲಿ ಶೇ.11ರಷ್ಟು ಏರಿಕೆ ಕಂಡುಬಂದಿದೆ. ಇನ್ನು ಕೋವಿಡ್ -19 ಪೆಂಡಾಮಿಕ್ ಅವಧಿಯಲ್ಲಿ 5 ಮಹಿಳೆಯರಲ್ಲಿ ಒಬ್ಬರು ಮೊದಲ ಬಾರಿಗೆ ಷೇರು ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ. ಶೇ.34ರಷ್ಟು ಮಹಿಳೆಯರು ಹಣವನ್ನು ಸಾಂಪ್ರದಾಯಿಕ ಹೂಡಿಕೆ ಆಯ್ಕೆಗಳಾದ ಸ್ಥಿರ ಠೇವಣಿಗಳು, ಆರ್ ಡಿ, ಪಿಪಿಎಫ್ ಹಾಗೂ ಉಳಿತಾಯ ಖಾತೆಗಳಲ್ಲಿ ಹೂಡಿಕೆ ಮಾಡಲು ಬಯಸಿದ್ದಾರೆ. 

ಕೇಂದ್ರ ಸರ್ಕಾರದ ನೀತಿಯಿಂದ ಸ್ಟಾರ್ಟಪ್‌ ಹೆಚ್ಚಳ: ರಾಜೀವ್‌ ಚಂದ್ರಶೇಖರ್‌

ಭಾರತದಲ್ಲಿ ಇಂದಿಗೂ ಕೂಡ ಅನೇಕ ಉದ್ಯೋಗಸ್ಥ ಮಹಿಳೆಯರು ದುಡಿದ ಹಣದ ಮೇಲೆ ಸಂಪೂರ್ಣ ಹಕ್ಕು ಪಡೆದಿಲ್ಲ. ತಾನು ದುಡಿದ ಹಣವನ್ನು ಏನು ಮಾಡ್ಬೇಕೆಂಬುದಕ್ಕೆ ಪತಿಯ ಒಪ್ಪಿಗೆ ಪಡೆಯುವಂಥ ಸ್ಥಿತಿ ಇದೆ. ಇನ್ನೂ ಕೆಲವು ಮಹಿಳೆಯರು ಕುಟುಂಬದ ಆರ್ಥಿಕ ಪ್ಲ್ಯಾನಿಂಗ್ ಜವಾಬ್ದಾರಿಯನ್ನು ಪತಿಯ ಹೆಗಲಿಗೆ ಹಾಕಿರುತ್ತಾರೆ. ಹೀಗಾಗಿ ಫೈನಾನ್ಷಿಯಲ್ ಪ್ಲ್ಯಾನಿಂಗ್ ಬಗ್ಗೆ ಯೋಚಿಸೋ ಗೋಜಿಗೆ ಹೋಗೋದಿಲ್ಲ. ಆದ್ರೆ ಮಹಿಳೆ ಕೂಡ ಹೂಡಿಕೆಗೆ ಸಂಬಂಧಿಸಿ ಮಾಹಿತಿ ಹೊಂದಿರೋದು ಹಾಗೂ ಸ್ವತಂತ್ರವಾಗಿ ಆರ್ಥಿಕ ಪ್ಲ್ಯಾನಿಂಗ್ ಮಾಡಲು ಮುಂದಾಗೋದು ಅಗತ್ಯ. ಆಗ ಮಾತ್ರ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗುತ್ತದೆ.