Asianet Suvarna News Asianet Suvarna News

ಪ್ರಸಕ್ತ ವರ್ಷ ಜಿಡಿಪಿ ಶೇ -7.7ಕ್ಕೆ ಇಳಿಕೆ: 1952ರ ಬಳಿಕದ ಕನಿಷ್ಠಕ್ಕೆ..!

2020​-21ನೇ ಸಾಲಿನಲ್ಲಿ ಭಾರತದ ಸಮಗ್ರ ಆರ್ಥಿಕ ಉತ್ಪನ್ನಗಳ (ಜಿಡಿಪಿ) ಪ್ರಗತಿ ದರ ಶೇ.-7.7ರಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಕೇಂದ್ರ ಸಾಂಖ್ಯಿಕ ಸಚಿವಾಲಯ ಅಂದಾಜಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

GDP may contract by 7.7 Percent in Financial Year 2021 NSO data kvn
Author
New Delhi, First Published Jan 8, 2021, 12:44 PM IST

ನವದೆಹಲಿ(ಜ.08): ಕೊರೋನಾ ವೈರಸ್‌ನಿಂದ ಎದುರಾದ ಆರ್ಥಿಕ ಸಂಕಷ್ಟದಿಂದಾಗಿ 2020​-21ನೇ ಸಾಲಿನಲ್ಲಿ ಭಾರತದ ಸಮಗ್ರ ಆರ್ಥಿಕ ಉತ್ಪನ್ನಗಳ (ಜಿಡಿಪಿ) ಪ್ರಗತಿ ದರ ಶೇ.-7.7ರಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಕೇಂದ್ರ ಸಾಂಖ್ಯಿಕ ಸಚಿವಾಲಯ ಅಂದಾಜಿಸಿದೆ. ಇದರೊಂದಿಗೆ ದೇಶದ ಆರ್ಥಿಕತೆ 1952ರ ಬಳಿಕ ಮೊದಲ ಬಾರಿ ದಾಖಲೆ ಮಟ್ಟದ ನಕಾರಾತ್ಮಕ ಪ್ರಗತಿ ದಾಖಲಿಸಿದಂತೆ ಆಗಲಿದೆ.

ಆದರೆ ಸರ್ಕಾರ ಅಂದಾಜಿಸಿರುವ ಈ ಪ್ರಮಾಣವು, ವಿಶ್ವಬ್ಯಾಂಕ್‌, ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ಇತರೆ ಹಣಕಾಸು ರೇಟಿಂಗ್‌ ಏಜೆನ್ಸಿಗಳು ಮಾಡಿರುವ ಅಂದಾಜಿಗಿಂತ ಕಡಿಮೆ ಇದೆ ಎಂಬುದೇ ಆಶಾದಾಯಕ ಸಂಗತಿ.

ಚಲಾವಣೆಯಲ್ಲಿರುವ ನಗದು 5 ಲಕ್ಷ ಕೋಟಿ ರುಪಾಯಿಯಷ್ಟು ಏರಿಕೆ

ಲಾಕ್‌ಡೌನ್‌ ಕಾರಣದಿಂದಾಗಿ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದಾಖಲೆಯ ಶೇ.-23.9ಕ್ಕೆ ಕುಸಿತ ಕಂಡಿತ್ತು. 2ನೇ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ ದರ ಶೇ.7.5ರಷ್ಟು ದಾಖಲಾಗಿತ್ತು. ಆದರೆ 3 ಮತ್ತು 4ನೇ ತ್ರೈಮಾಸಿಕದಲ್ಲಿ ಆರ್ಥಿಕತೆ ಮತ್ತೆ ಸರಿದಾರಿಗೆ ಮರಳಿದ್ದರಿಂದ, ಕುಸಿತದ ಪ್ರಮಾಣ ಕಡಿಮೆ, ಒಟ್ಟಾರೆ ವಾರ್ಷಿಕ ಲೆಕ್ಕಾಚಾರದಲ್ಲಿ ಶೇ.7.7ರ ಪ್ರಮಾಣಕ್ಕೆ ಬರಬಹುದು ಎಂದು ಸರ್ಕಾರ ಅಂದಾಜಿಸಿದೆ.

2011​-12ರ ದರಗಳಿಗೆ ಹೋಲಿಸಿದರೆ 2020-21ರಲ್ಲಿ ಭಾರತದ ಜಿಡಿಪಿ ಮೌಲ್ಯ 134.40 ಲಕ್ಷ ಕೋಟಿ ರು. ಆಗಿರಲಿದೆ. ಆದರೆ, 2019-20ರಲ್ಲಿ ಶೇ.4.2ರ ದರದಲ್ಲಿ ಪ್ರಗತಿ ಸಾಧಿಸಿದ್ದ ಜಿಡಿಪಿ ಮೌಲ್ಯ 145.66 ಲಕ್ಷ ಕೋಟಿ ರು.ಗಳಷ್ಟು ಆಗಿದ್ದವು.
 

Follow Us:
Download App:
  • android
  • ios