ಸಾಮಾನ್ಯ ಫೋನ್ ಕರೆಗಳಿಗೆ ಬೇರೆ ರೀಚಾರ್ಜ್ ಪ್ಲಾನ್ ಮಾಡಿ: ಟೆಲಿಕಾಂ ಕಂಪನಿಗಳ ದರೋಡೆಗೆ ಟ್ರಾಯ್ ಬ್ರೇಕ್
ಟೆಲಿಕಾಂ ನಿಯಂತ್ರಕ ಟ್ರಾಯ್ ಕರೆ ದರಗಳು ಮತ್ತು ಕರೆ-ಡೇಟಾ ನಿಯಮಗಳನ್ನು ಬದಲಿಸಿದೆ. ಡೇಟಾ ಇಲ್ಲದೆ ಕೇವಲ ಕರೆ/ಎಸ್ಸೆಮ್ಮಸ್ ಬಳಸುವವರಿಗೆ ಪ್ರತ್ಯೇಕ ಪ್ಲಾನ್ ಬಿಡುಗಡೆ ಮಾಡಲು ಮತ್ತು 90 ದಿನಗಳ ಮಿತಿಯನ್ನು ತೆಗೆದುಹಾಕಿ 365 ದಿನಗಳವರೆಗೆ ವಿಸ್ತರಿಸಲು ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ.
ವಾಯ್ಸ್‌ಗಷ್ಟೇ ಬೇರೆ ರೀ ಚಾರ್ಜ್ ಪ್ಲಾನ್ : ಟೆಲಿಕಾಂ ನಿಯಂತ್ರಕ ಟ್ರಾಯ್ ಸೂಚನೆ
ಡಾಟಾ ಇಲ್ಲದ ನಾರ್ಮಲ್ ಫೋನ್ ಕರೆಗಳಿಗೆ ಬೇರೆ ರೀಚಾರ್ಜ್ ಪ್ಲಾನ್ ಮಾಡಿ: ಟೆಲಿಕಾಂ ಕಂಪನಿಗಳ ದರೋಡೆಗೆ ಟ್ರಾಯ್ ಬ್ರೇಕ್
ನವದೆಹಲಿ: ಟೆಲಿಕಾಂ ನಿಯಂತ್ರಕ ಟ್ರಾಯ್, ಕರೆ ದರಗಳು ಹಾಗೂ ಕರೆ-ಡೇಟಾ ನಿಯಮಗಳನ್ನು ಬದಲಿಸಿದೆ. ಈ ಪ್ರಕಾರ ಡೇಟಾ ಬೇಡ ಕೇವಲ ಕರೆ/ಎಸ್ಸೆಮ್ಮಸ್ ಪ್ಯಾಕ್ ಸಾಕು ಎನ್ನುವವರಿಗೆ ಪ್ರತ್ಯೇಕ ಪ್ಲಾನ್ ಬಿಡುಗಡೆ ಮಾಡಲು ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ಅಲ್ಲದೆ, ಅಂತೆಯೇ, ವಿಶೇಷ ರೀಚಾರ್ಜ್ ಕೂಪನ್‌ಗಳ ಮೇಲಿನ 90 ದಿನಗಳ ಮಿತಿಯನ್ನು ತೆಗೆದು ಹಾಕಿರುವ ಟ್ರಾಯ್, ಅದನ್ನು 365 ದಿನಗಳವರೆಗೆ ವಿಸ್ತರಿಸಬೇಕು ಎಂದು ಸೂಚಿಸಿದೆ. ವೃದ್ಧರು ಹಾಗೂ ಮನೆಗಳಲ್ಲಿ ಬ್ರಾಡ್‌ಬ್ಯಾಂಡ್ ಹೊಂದಿರುವವರಿಗೆ ಇಂಟರ್‌ನೆಟ್‌ಗೆ ರೀಚಾರ್ಜ್ ಮಾಡಿಸುವ ಅವಶ್ಯಕತೆ ಇರದಿರುವುದನ್ನು ಗಮನಿಸಿರುವ ಟ್ರಾಯ್, ಕೇವಲ ಕರೆ ಹಾಗೂ ಸಂದೇಶ ರವಾನೆಗೆಂದು ಪ್ರತ್ಯೇಕ ದರಪಟ್ಟಿ ತಯಾರಿಸಲು ಸೂಚಿಸಿದೆ. ಈ ಮೂಲಕ ಗ್ರಾಹಕರು ತಾವು ಬಳಸುವ ಸೇವೆಗಳಿಗಷ್ಟೇ ಹಣ ಪಾವತಿಸುವಂತಾಗುತ್ತದೆ. ಅಂತೆಯೇ, ವೌಚರ್‌ಗಳಿಗೆ ಯಾವುದೇ ಬೆಲೆಯನ್ನು ನಿಗದಿಪಡಿಸಲು ಅನುಮತಿಸಿರುವ ಟ್ರಾಯ್, 10 ರು. ರೀಚಾರ್ಜ್ ಕೂಪನ್ ಕೂಡ ಒದಗಿಸಬೇಕು ಎಂದು ಸೂಚಿಸಿದೆ.
ಇದರಿಂದ ಟೆಲಿಕಾಂ ಕಂಪನಿಗಳ ಹಗಲು ದರೋಡೆಗೆ ಬ್ರೇಕ್ ಬಿದ್ದಂತಾಗಿದೆ.
ಕ್ರೈಸ್ತರ ಮೇಲಿನ ದಾಳಿಗೆ ನನ್ನ ಹೃದಯಕ್ಕೆ ನೋವಾಗಿದೆ : ಪ್ರಧಾನಿ ನರೇಂದ್ರ ಮೋದಿ ಬೇಸರ
ನವದೆಹಲಿ: ಜರ್ಮನಿಯ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಇತ್ತೀಚೆಗೆ ನಡೆದ ದಾಳಿ ಮತ್ತು ಶ್ರೀಲಂಕಾದ 2019 ರ ಈಸ್ಟರ್ ಬಾಂಬ್ ದಾಳಿಯನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ‘ಹಿಂಸಾಚಾರ ಹರಡುವ ಪ್ರಯತ್ನಗಳು ನಡೆಯುತ್ತಿರುವಾಗ ನನ್ನ ಹೃದಯಕ್ಕೆ ನೋವಾಗಿದೆ ಮತ್ತು ಸವಾಲಿನ ವಿರುದ್ಧ ಹೋರಾಡಲು ಜನರು ಒಗ್ಗೂಡಬೇಕು’ ಎಂದರು.
ಕ್ಯಾಥೊಲಿಕ್ ಬಿಷಪ್ ಸಂಘಟನೆ ಆಯೋಜಿಸಿದ್ದ ಕ್ರಿಸ್‌ಮಸ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಹಿಂಸೆ ಹರಡುವ ಮತ್ತು ಸಮಾಜದಲ್ಲಿ ಅಡೆತಡೆ ಉಂಟುಮಾಡುವ ಪ್ರಯತ್ನ ನಡೆಯುತ್ತಿರುವಾಗ ನನ್ನ ಹೃದಯಕ್ಕೆ ನೋವಾಗಿದೆ. ಕೆಲವೇ ದಿನಗಳ ಹಿಂದೆ, ಜರ್ಮನಿಯ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಏನಾಯಿತು ಎಂಬುದನ್ನು ನಾವು ನೋಡಿದ್ದೇವೆ. 2019 ರಲ್ಲಿ ಈಸ್ಟರ್ ಸಮಯದಲ್ಲಿ, ಶ್ರೀಲಂಕಾದಲ್ಲಿ ಚರ್ಚ್‌ಗಳ ಮೇಲೆ ದಾಳಿ ಮಾಡಲಾಯಿತು. ನಾನು ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಕೊಲಂಬೋಗೆ ಹೋಗಿದ್ದೆ. ಈ ಸವಾಲುಗಳ ವಿರುದ್ಧ ಒಗ್ಗೂಡಿ ಹೋರಾಡುವುದು ಮುಖ್ಯ’ ಎಂದರು.