ಶುರುವಾಯ್ತಾ ತೈಲ ಯುದ್ಧ?: ಸಮುದ್ರದಲ್ಲಿ ತೈಲ ಹಡಗು ನಾಶ!
ಒಮನ್ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್ಗಳ ಮೇಲೆ ದಾಳಿ| ಪರಸ್ಪರ ದೋಷಾರೋಪಣೆ ಮಾಡಿದ ಅಮೆರಿಕ-ಇರಾನ್| ಆಯಕಟ್ಟಿನ ಸಮುದ್ರದಲ್ಲಿ ತೈಲ ಹಡಗಿನ ಮೇಲೆ ದಾಳಿ| ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚಿದ ಉದ್ವಿಗ್ನತೆ| ಎರಡು ಹಡಗುಗಳಿಂದ 44 ಸಿಬ್ಬಂದಿ ರಕ್ಷಿಸಿದ ಇರಾನ್ ನೌಕಾಪಡೆ| ದಾಳಿ ಪರಿಣಾಮ ಕಚ್ಚಾತೈಲ ದರದಲ್ಲಿ ಏರಿಕೆ|
ಒಮನ್(ಜೂ.14): ಒಮನ್ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್ಗಳ ಮೇಲೆ ದಾಳಿ ನಡೆಸಲಾಗಿದ್ದು, ಅಮೆರಿಕ-ಇರಾನ್ ನಡುವಿನ ಆರ್ಥಿಕ ದಿಗ್ಬಂಧನ ಯುದ್ಧ ಮತ್ತೊಂದು ಮಜಲು ತಲುಪಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಈ ಘಟನೆ ಜರುಗಿದ್ದು, ಆಯಕಟ್ಟಿನ ಸಮುದ್ರದಲ್ಲಿ ಈ ರೀತಿಯ ದಾಳಿ ನಡೆಯುತ್ತಿರುವುದು ಇದು ಎರಡನೇ ಬಾರಿಯಾಗಿದೆ.
ತನ್ನ ಕರಾವಳಿ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದ ಬಳಿಕ ಎರಡು ಹಡಗುಗಳಿಂದ 44 ಸಿಬ್ಬಂದಿಯನ್ನು ಇರಾನ್ ನೌಕಾಪಡೆ ರಕ್ಷಿಸಿದೆ.
ಇನ್ನು ಒಂದೇ ವಾರದಲ್ಲಿ ಎರಡು ತೈಲ ಹಡಗುಗಳ ಮೇಲೆ ದಾಳಿ ನಡೆದಿರುವುದರಿಂದ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾತೈಲ ದರದಲ್ಲಿ ಶೇ.4ರಷ್ಟು ಏರಿಕೆಯಾಗಿದೆ. ಪ್ರತಿ ಬ್ಯಾರೆಲ್ ಕಚ್ಚಾತೈಲ ಬೆಲೆ 62.30 ಡಾಲರ್‌ಗೆ ಏರಿಕೆಯಾಗಿದೆ.