ಇಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ ಇಲ್ಲ! ಸತತ 8 ದಿನಗಳ ನಂತರ ತೈಲದರದಲ್ಲಿ ಯಥಾಸ್ಥಿತಿ! ದೇಶದ ಮಹಾನಗರಗಳಲ್ಲಿ ಬದಲಾವಣೆ ಕಾಣದ ತೈಲದರ! ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?

ನವದೆಹಲಿ(ನ.21): ಸತತ 8 ದಿನಗಳಿಂದ ಇಳಿಕೆಯ ಹಾದಿ ಹಿಡಿದಿದ್ದ ತೈಲದರ ಇಂದು ಯಾವುದೇ ಇಳಿಕೆ ಕಾಣದೇ ತಟಸ್ಥವಾಗಿದೆ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಇಳಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಆಗಸ್ಟ್ ತಿಂಗಳಿನ ದರಕ್ಕೆ ಸಮಾನವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಇಳಿಕೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಏರಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುತ್ತಿತ್ತು. ಆದರೆ ಇಂದು ಮಾತ್ರ ತೈಲದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದು ಗಮನಾರ್ಹ. 

ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನೋಡುವುದಾದರೆ..

ರಾಷ್ಟ್ರ ರಾಜಧಾನಿ ನವದೆಹಲಿ-

ಪೆಟ್ರೋಲ್ ದರ: 76.38 ರೂ.

ಡೀಸೆಲ್ ದರ: 71.27 ರೂ.

ವಾಣಿಜ್ಯ ರಾಜಧಾನಿ ಮುಂಬೈ-

ಪೆಟ್ರೋಲ್ ದರ: 81.90 ರೂ.

ಡೀಸೆಲ್ ದರ: 74.66 ರೂ.

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-

ಪೆಟ್ರೋಲ್ ದರ: 78.33 ರೂ.

ಡೀಸೆಲ್ ದರ: 73.13 ರೂ.

ತಮಿಳುನಾಡು ರಾಜಧಾನಿ ಚೆನ್ನೈ-

ಪೆಟ್ರೋಲ್ ದರ: 79.31 ರೂ.

ಡೀಸೆಲ್ ದರ: 75.31 ರೂ.

ರಾಜ್ಯ ರಾಜಧಾನಿ ಬೆಂಗಳೂರು-

ಪೆಟ್ರೋಲ್ ದರ: 76.99 ರೂ.

ಡೀಸೆಲ್ ದರ: 71.65 ರೂ.