ಪೆಟ್ರೋಲ್ ಬಳಿಕ ಡೀಸೆಲ್ ಕೂಡ 100 ರು.!
* ಪೆಟ್ರೋಲ್ ಬಳಿಕ ಡೀಸೆಲ್ ಕೂಡ 100 ರು.!
* ರಾಜಸ್ಥಾನದಲ್ಲಿ ಶತಕ ದಾಟಿದ ಡೀಸೆಲ್ ದರ
* ಶ್ರೀಗಂಗಾನಗರದಲ್ಲಿ ದರ 100.05 ರು.
ನವದೆಹಲಿ(ಜೂ.13): ದೇಶಾದ್ಯಂತ ಪೆಟ್ರೋಲ್ ದರ ಶತಕ ಬಾರಿಸಿದ ದಾಟಿದ ಬೆನ್ನಲ್ಲೇ, ಇದೀಗ ಡೀಸೆಲ್ ದರವೂ 100 ರು. ಆಗಿದೆ. ರಾಜಸ್ಥಾನದ ಶ್ರೀಗಂಗಾನಗರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಡೀಸೆಲ್ ದರ ಶನಿವಾರ 100 ರು. ದಾಟಿದೆ.
100 ರೂಪಾಯಿ ಗಡಿ ದಾಟಿದ ಡೀಸೆಲ್ ಬೆಲೆ; ಪೆಟ್ರೋಲ್ ಮತ್ತಷ್ಟು ದುಬಾರಿ!
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಶನಿವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ 27 ಪೈಸೆ ಮತ್ತು 23 ಪೈಸೆಯಷ್ಟುಏರಿಕೆ ಮಾಡಿವೆ. ಪಂಚರಾಜ್ಯಗಳ ಚುನಾವಣೆ ಮುಗಿದ ನಂತರ ಅಂದರೆ ಮೇ 4ರ ಬಳಿಕ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವು 23ನೇ ಸಲ ಏರಿಕೆಯಾಗಿದೆ.
ಶ್ರೀಗಂಗಾನಗರದಲ್ಲಿ ರಾಷ್ಟ್ರದಲ್ಲೇ ಮೊದಲ ಸಲ ಪೆಟ್ರೋಲ್ 100 ರು. ದಾಟಿತ್ತು. ಇಲ್ಲಿ ಪಟ್ರೋಲ್ ಬೆಲೆ ಶನಿವಾರ 107.22 ರು. ಹಾಗೂ ಡೀಸೆಲ್ ಬೆಲೆ 100.05 ರು. ಇತ್ತು.
ಡೀಸೆಲ್ 100 ರು. ತಲುಪಲು ಕೇವಲ 20 ಪೈಸೆಯಷ್ಟೇ ಬಾಕಿ!
ಇದೇ ವೇಳೆ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ 96.12 ರು. ಮತ್ತು ಡೀಸೆಲ್ ಬೆಲೆ 86.98 ರು.ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ಗೆ 99.39 ಮತ್ತು ಡೀಸೆಲ್ ಬೆಲೆ 92.27 ರು.ಗೆ ಜಿಗಿದಿದೆ.